Advertisement

IRCTCಯಿಂದ ಬಂಪರ್ ಆಫರ್ : 990 ರೂ.ಪಾವತಿಸಿ ಒಂದೇ ದಿನದಲ್ಲಿ ತಿಮ್ಮಪ್ಪನ ದರ್ಶನ ಪಡೆಯಿರಿ!

11:33 PM Apr 13, 2023 | Team Udayavani |

ನವದೆಹಲಿ: ತಿರುಪತಿಯ ತಿಮ್ಮಪ್ಪನ ದರ್ಶನಕ್ಕೆ ಹೋಗಬೇಕೆಂದು­ಕೊಂಡರೂ ಒಂದೇ ದಿನಕ್ಕೆ ದರ್ಶನ ಸಾಧ್ಯವಿಲ್ಲವೆಂದು ಭಾವಿಸಿ, ಸಮಯದ ಅಭಾವದಿಂದ ಪ್ರಯಾಣ ಕೈಗೊಳ್ಳದ ಎಷ್ಟೋ ಮಂದಿ ಇದ್ದಾರೆ. ಅಂಥವರಿಗಾಗಿಯೇ ಭಾರತೀಯ ರೈಲ್ವೆ ಅಡುಗೆ ಮತ್ತು ಪ್ರವಾಸೋದ್ಯಮ ನಿಗಮ (ಐಆರ್‌ಸಿಟಿಸಿ) ಬಂಪರ್‌ ಅಫ‌ರ್‌ ನೀಡಿದೆ. ಅದೇ ಒಂದೇ ದಿನದಲ್ಲಿ ಕೇವಲ 990 ರೂ.ಗಳಲ್ಲಿ ತಿರುಪತಿ ದರ್ಶನ! ಸದ್ಯ ಏ.15ಕ್ಕೆ ಈ ಅವಕಾಶ ಪ್ರಯಾಣಿಕರಿಗಿದೆ.

Advertisement

ಹೌದು, ಬಾಲಾಜಿ ದರ್ಶನಕ್ಕೆಂದು ತಿರುಪತಿಗೆ ಹೋಗುತ್ತಿರುವವರು ಐಆರ್‌ಸಿಟಿಸಿ ಮೂಲಕ ಬಾಲಾಜಿ ದರ್ಶನ್‌ ಟಿಕೆಟ್‌ ಬುಕ್‌ ಮಾಡಿಕೊಳ್ಳಬಹುದು. ಟಿಕೆಟ್‌ ಬುಕ್‌ ಮಾಡಿಕೊಂಡವರನ್ನು ತಿರುಪತಿ ರೈಲ್ವೆ ನಿಲ್ದಾಣದಿಂದ ಐಆರ್‌ಸಿಟಿಸಿ ರಸ್ತೆಸಾರಿಗೆ ಕರೆದೊಯ್ಯಲಿದೆ. ಪ್ಯಾಕೇಜ್‌ನ ನಿಯಮದಂತೆ ಎಸಿ ಬಸ್‌ನಲ್ಲಿ ಪ್ರಯಾಣಿಕರನ್ನು ಕರೆದೊಯ್ದು ತಿರುಪತಿ ತಿಮ್ಮಪ್ಪನ ದರ್ಶನ ಮಾಡಿಸಲಾಗುತ್ತದೆ. ಅಷ್ಟೇ ಅಲ್ಲದೇ, ಬಾಲಾಜಿ ದರ್ಶನದ ಜತೆಗೆ ತಿರುಚಾನೂರು ಪದ್ಮಾವತಿ ದರ್ಶನವನ್ನೂ ಮಾಡಿಸಲಾಗುತ್ತದೆ. ದರ್ಶನದ ಬಳಿಕ ಪ್ರಯಾಣಿಕರನ್ನು ಮತ್ತೆ ರೈಲ್ವೆ ನಿಲ್ದಾಣಕ್ಕೆ ಕರೆತರಲಾಗುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next