– ತಿರುಪತಿ ವಿಮಾನ ನಿಲ್ದಾಣದಲ್ಲೇ ನಿರ್ಮಾಣವಾಗಲಿರುವ ಐಶಾರಾಮಿ ಲಾಂಜ್
– ಎಎಐ ಸುಪರ್ದಿಯಲ್ಲಿರುವ ಭೂಮಿ ಆಂಧ್ರ ಸರ್ಕಾರಕ್ಕೆ ಹಸ್ತಾಂತರ
– ವಾರ್ಷಿಕವಾಗಿ 1 ರೂ. ಬಾಡಿಗೆಯಂತೆ 15 ವರ್ಷದವರೆಗೆ ಒಪ್ಪಂದ
Advertisement
ನವದೆಹಲಿ: ತಿರುಪತಿಗೆ ಆಗಮಿಸುವ ಗಣ್ಯ ಹಾಗೂ ಗಣ್ಯಾತಿಗಣ್ಯ ವ್ಯಕ್ತಿಗಳಿಗಾಗಿ, ತಿರುಪತಿ ವಿಮಾನ ನಿಲ್ದಾಣದಲ್ಲಿ ವಿಶೇಷ ಲಾಂಜ್ ಸ್ಥಾಪಿಸುವ ಉದ್ದೇಶಕ್ಕಾಗಿ, 19,375 ಚದರಡಿ ಜಾಗವನ್ನು ವಿಮಾನ ನಿಲ್ದಾಣಕ್ಕೆ ನೀಡುವ ಪ್ರಸ್ತಾವನೆಗೆ ಬುಧವಾರ, ಪ್ರಧಾನಿ ನರೇಂದ್ರ ಮೋದಿಯವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಂಪುಟ ಸಭೆ ಒಪ್ಪಿಗೆ ನೀಡಿದೆ.
ಭಾರತೀಯ ಆಹಾರ ನಿಗಮದಲ್ಲಿ (ಎಫ್ಸಿಐ), ಕೇಂದ್ರ ಸರ್ಕಾರ ಹೂಡಿರುವ ಅಧಿಕೃತ ಬಂಡವಾಳ ಮಿತಿಯನ್ನು ಈವರೆಗೆ ಇದ್ದ 3,500 ಕೋಟಿ ರೂ.ಗಳಿಂದ 10,000 ಕೋಟಿ ರೂ.ಗಳಿಗೆ ಏರಿಸುವ ಪ್ರಸ್ತಾವನೆಗೂ ಸಂಪುಟ ಒಪ್ಪಿಗೆ ನೀಡಿದೆ. ಇನ್ನು, 2020-21ರ ಆರ್ಥಿಕ ವರದಿಯನ್ನು ನೀಡುವ ಹೊಣೆ ಹೊತ್ತಿರುವ 15ನೇ ಆರ್ಥಿಕ ಆಯೋಗಕ್ಕೆ ನೀಡಲಾಗಿರುವ ಗಡುವನ್ನು 2020ರ ಅ. 30ರವರೆಗೆ ವಿಸ್ತರಿಸಲು ಸಂಪುಟ ಒಪ್ಪಿದೆ.