Advertisement

ಕೆರೆ ಸರ್ವೇ ಕಾರ್ಯಕ್ಕೆ 3 ತಿಂಗಳ ಗಡುವು

05:11 PM Dec 13, 2019 | Naveen |

ತೀರ್ಥಹಳ್ಳಿ: ತಾಲೂಕಿನಲ್ಲಿ ಕೆರೆಗಳ ಸರ್ವೇ ಕಾರ್ಯ ಸಮಾಧಾನಕರ ಆಗಿಲ್ಲ. 305 ಕೆರೆಗಳ ಗಡಿ ಗುರುತಿಸುವ ಕಾರ್ಯ ವಿಳಂಬವಾಗಿದೆ. ಸಿಬ್ಬಂದಿ ಕೊರತೆ ಇದ್ದಲ್ಲಿ ಡಿಡಿಎಲ್‌ಆರ್‌ ಜೊತೆ ಸಮಸ್ಯೆ ಹೇಳಿಕೊಳ್ಳಿ. ಒತ್ತುವರಿ ಆಗಿರುವ ಕಡೆ ಗಡಿ ಗುರುತಿಸಿ ಕ್ರಮ ತೆಗೆದುಕೊಳ್ಳಬೇಕಾಗಿದೆ ಎಂದು ಜಿಲ್ಲಾಧಿಕಾರಿ ಕೆ.ಬಿ. ಶಿವಕುಮಾರ್‌ ಹೇಳಿದರು.

Advertisement

ಪಟ್ಟಣದ ಪಪಂ ಸಭಾಂಗಣದಲ್ಲಿ ನಡೆದ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ತಾಲೂಕಿನಲ್ಲಿ ಕೇವಲ ಅರ್ಧದಷ್ಟು ಮಾತ್ರ ಕೆರೆ ಸರ್ವೇ ಕಾರ್ಯವಾಗಿದೆ. 3 ತಿಂಗಳಲ್ಲಿ ಉಳಿದ ಕೆರೆಗಳ ಸರ್ವೇ ಕಾರ್ಯ ಮುಗಿಸದಿದ್ದಲ್ಲಿ ಸಂಬಂಧ ಪಟ್ಟ ಅಧಿ ಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು. ಶಾಸಕ ಆರಗ ಜ್ಞಾನೇಂದ್ರ ಮಾತನಾಡಿ, ಕೆರೆ ಸರ್ವೇ ವಿಚಾರದಲ್ಲಿ ಅರ್ಜಿ ಕೊಟ್ಟರೂ ಅಧಿ ಕಾರಿಗಳು ಸ್ಥಳಕ್ಕೆ ಹೋಗುತ್ತಿಲ್ಲ. ಆರಗ, ಕೋಣಂದೂರು, ಕವಲೇದುರ್ಗ ಕೆರೆಗಳು ಪುರಾತನ ಕೆರೆಗಳಾಗಿದ್ದು, ಅಂತರ್ಜಲವನ್ನು ಹೆಚ್ಚಿಸುತ್ತವೆ. ಕೆಲವರು ಒತ್ತುವರಿ ಮಾಡಿಕೊಂಡಿದ್ದಾರೆ ಎಂದು ದೂರಿದರು.

ಪಟ್ಟಣದ ತಾಲೂಕು ಕಚೇರಿಯಲ್ಲಿ ಸಿಬ್ಬಂದಿಗಳಿಂದ ಕೆಲವು ಮಹತ್ವದ ದಾಖಲೆಗಳು ಮಾಯವಾಗಿದೆ. ಸಿಬ್ಬಂದಿಗಳ ಭ್ರಷ್ಟಾಚಾರ ಹೆಚ್ಚಾಗಿದ್ದು, ಇಂತಹ ಸಿಬ್ಬಂದಿಗಳನ್ನು ಅಮಾನತು ಮಾಡಬೇಕೆಂದು ಜಿಲ್ಲಾಧಿಕಾರಿಗಳಿಗೆ ಸೂಚಿಸಿದರು. ಈ ಬಾರಿಯ ಮಳೆಗಾಲದಲ್ಲಿ ಹೆಗಲತ್ತಿ ಗ್ರಾಮದಲ್ಲಿ ಸಂಭವಿಸಿದ ಮಳೆಹಾನಿಯಿಂದ 19 ಕುಟುಂಬಗಳು ಸಂಕಷ್ಟದಲ್ಲಿದ್ದು, ಈ ಕುಟುಂಬಗಳಿಗೆ ವಿಶೇಷ ಪ್ಯಾಕೇಜ್‌ ನೀಡುವ ಬಗ್ಗೆ ಅಂದು ಸ್ಥಳಕ್ಕೆ ಭೇಟಿ ನೀಡಿದ್ದ ಮುಖ್ಯಮಂತ್ರಿಗಳು ಭರವಸೆ ನೀಡಿದ್ದರು. ಈ ವಿಶೇಷ ಪ್ಯಾಕೇಜ್‌ ವಿಚಾರದ ಬಗ್ಗೆ ಜಿಲ್ಲಾಡಳಿತ ಮತ್ತೂಮ್ಮೆ ಸರ್ಕಾರದ ಗಮನಕ್ಕೆ ತರಬೇಕು ಎಂದರು.  ಸಭೆಯಲ್ಲಿ ತಹಶೀಲ್ದಾರ್‌ ಎಂ. ಭಾಗ್ಯ, ತಾಪಂ ಇಒ ಆಶಾಲತಾ ಮತ್ತಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next