ತೀರ್ಥಹಳ್ಳಿ : ಬಿಟ್ಟಿ ಭಾಗ್ಯ ಘೋಷಣೆ ಮಾಡಿ ಅಧಿಕಾರಕ್ಕೆ ಬಂದಿದ್ದು ಅಧಿಕಾರಕ್ಕೆ ಬಂದ ಮೇಲೆ ಸರ್ಕಾರ ನೆಡೆಸಲು ಆಗುತ್ತಿಲ್ಲ. ಹಾಗಾಗಿ ಬಾಯಿಮಾತಿನಲ್ಲಿ ಅಧಿಕಾರಿಗಳಿಗೆ ವಿದ್ಯುತ್ ನಿಲ್ಲಿಸಲು ಹೇಳಿದ್ದಾರೆ ಇದರಿಂದ ಹಲವರಿಗೆ ತೊಂದರೆ ಆಗುತ್ತಿದೆ ಎಂದು ಮಾಜಿ ಸಚಿವ ಆರಗ ಜ್ಞಾನೇಂದ್ರ ಹೇಳಿದರು.
ಸೋಮವಾರ ಪಟ್ಟಣದ ತಾಲೂಕು ಕಚೇರಿ ಎದುರು ಪ್ರತಿಭಟನೆ ನೆಡೆಸಿ ಮಾತನಾಡಿ ಗಂಟೆ ಗಟ್ಟಲೆ ಲೋಡ್ ಶೇಡ್ಡಿಂಗ್ ಮಾಡುತ್ತಿದ್ದು ಇದರಿಂದ ವಿದ್ಯಾರ್ಥಿಗಳಿಗೆ, ವರ್ಕ್ ಶಾಪ್ ಮಾಲಕರಿಗೆ, ಹಿಟ್ಟಿನ ಅಂಗಡಿಯವರಿಗೆ ಕೆಲಸ ನಿಲ್ಲಿಸುವ ಕೆಲಸ ಸರ್ಕಾರ ಮಾಡುತ್ತಿದೆ. ಈ ರಾಜ್ಯದ ಆರ್ಥಿಕತೆ ದುಸ್ಥಿತಿಗೆ ಬರುತ್ತಿದೆ. 200 ಯೂನಿಟ್ ಉಚಿತ ವಿದ್ಯುತ್ ಘೋಷಣೆ ಮಾಡಿ ವಿದ್ಯುತ್ ಕಡಿತಗೊಳಿಸಿದರೆ ಉಚಿತ ವಿದ್ಯುತ್ ಕೊಡುವುದೇನು ಎಂದು ಪ್ರೆಶ್ನೆ ಮಾಡಿದರು.
ಮಹಿಳೆಯರಿಗೆ ಬಸ್ ನಲ್ಲಿ ಉಚಿತ ಎಂದರು. ಕಳೆದ ತಿಂಗಳು 720 ಕೋಟಿ ಕೆ ಎಸ್ ಆರ್ ಟಿ ಸಿ ಗೆ ಕಟ್ಟಬೇಕು.120ಕೋಟಿ ಕಟ್ಟಿದ್ದಾರೆ.ಮುಂದಿನ ತಿಂಗಳಿನಿಂದ ಬಸ್ ಗಳಿಗೆ ಡೀಸೆಲ್ ಇಲ್ಲ. ನೌಕರರಿಗೆ ಸಂಬಳ ಕೊಡಲು ಆಗುವುದಿಲ್ಲ. ಇನ್ನೆರಡು ತಿಂಗಳು ಕಳೆದರೆ ಮೆಸ್ಕಾಂ ನಲ್ಲಿ ಕೆಲಸ ಮಾಡುವ ನೌಕರರಿಗೂ ಸಂಬಳ ಕೊಡಲು ಆಗುವುದಿಲ್ಲ. ಇಡೀ ದೇಶದಲ್ಲಿಯೇ ಕರ್ನಾಟಕದಲ್ಲಿ ಕಾಂಗ್ರೆಸ್ ಬಂದಿದ್ದು ಹೆಮ್ಮೆಯ ಸಂಗತಿ ಎನ್ನುತ್ತಾರೆ ಆದರೆ ಅವರ ಮುಂದಿನ ಗುರಿ ರಾಜ್ಯದ ಜನರಿಗೆ ಒಳ್ಳೆಯದು ಮಾಡುವುದಲ್ಲ ಲೋಕಸಭಾ ಚುನಾವಣೆ ಗೆಲ್ಲುವುದು ಎಂದರು.
ಇವರನ್ನು ಪ್ರಕೃತಿ ಕೂಡ ವಿರೋಧಿಸುತ್ತದೆ. ಎಲ್ಲರೂ ಯಾವಾಗಲು ಹೇಳುತ್ತಿರುತ್ತಾರೆ. ಸಿದ್ದರಾಮಯ್ಯ ಸರ್ಕಾರ ಬಂದಾಗ ಬರ. ಯಡಿಯೂರಪ್ಪ ಸರ್ಕಾರ ಬಂದಾಗ ಅತಿವೃಷ್ಟಿ, ನೆರೆ, ಸಮೃದ್ಧಿ. ಯಾಕೆ ಎಂದರೆ ಕಾಂಗ್ರೆಸ್ ನವರು ಮಾಡುವ ಅನ್ಯಾಯಕ್ಕೆ ಪ್ರಕೃತಿ ಕೂಡ ಸಿಟ್ಟಾಗಿದೆ. ಈಗ ಆಗಸ್ಟ್ ತಿಂಗಳಲ್ಲಿ ಮೇ ತಿಂಗಳ ಹಾಗೆ ಆಗಿದೆ. ಗದ್ದೆ ನಾಟಿ ಮಾಡಲು ಆಗುತ್ತಿಲ್ಲ. ನೀರಿಲ್ಲ, ವಿದ್ಯುತ್ ಇಲ್ಲ, ಸರ್ಕಾರ ನೆಡೆಸಲು ಆಗದಿದ್ದರೆ ಜನರ ಬಳಿ ಕ್ಷಮೆ ಕೇಳಿ ಹೋಗಬೇಕು. ಸರ್ಕಾರ ಹೀಗೆ ನೆಡೆಯೋದು ಹಾಗಾಗಿ ಜನ ಬೀದಿಗಿಳಿದು ಚಾಟಿ ತೆಗೆದುಕೊಳ್ಳಬೇಕು ಎಂದು ಆಕ್ರೋಶ ಭರಿತರಾಗಿ ಮಾತನಾಡಿದರು.
ನಮ್ಮ ಸರ್ಕಾರ ಇರುವಾಗ ಕಾರ್ ಇದ್ದವರಿಗೆ ಬಿಪಿಎಲ್ ಕಾರ್ಡ್ ರದ್ದು ಮಾಡಲಾಗಿತ್ತು ಆದರೆ ಆಗ ನಾನೇ ಇದು ಆಗುವುದಿಲ್ಲ ಎಂದು ಹೇಳಿದ್ದೆ. ಸಣ್ಣ ಪುಟ್ಟ ಕೆಲಸ ಮಾಡುವವರು ಕಾರ್ ತೆಗೆದುಕೊಂಡಿರುತ್ತಾರೆ. ಅಂತವರ ಬಿಪಿಎಲ್ ಕಾರ್ಡ್ ರದ್ದು ಮಾಡಿದರೆ ಆ ಕುಟುಂಬದ ಕಥೆ ಏನು? ಹಾಗಾಗಿ ನಮ್ಮ ಸರ್ಕಾರ ಕೊಡಲೇ ಆ ಆದೇಶ ವಾಪಾಸ್ ತೆಗೆದುಕೊಂಡಿತ್ತು. ಕಾರ್ ತೆಗೆದುಕೊಂಡು ಬಾಡಿಗೆ ಹೊಡೆಯುವವರು ಇದ್ದಾರೆ. ಅವರಿಗೆ 2 ದಿನಕ್ಕೂ ಬಾಡಿಗೆ ಸಿಗಲ್ಲ ಅಂತವರ ಕುಟುಂಬದ ಕಥೆ ಏನಾಗುತ್ತೆ? ಬಡವರ ಅನ್ನವನ್ನು ಕಸಿಯುವ ಕೆಲಸವನ್ನು ಕಾಂಗ್ರೆಸ್ ಸರ್ಕಾರ ಮಾಡುತ್ತಿದೆ ಎಂದರು.
ಈ ಸಂದರ್ಭದಲ್ಲಿ ಸಾಲೆಕೊಪ್ಪ ರಾಮಚಂದ್ರ, ಬಾಳೆಬೈಲು ರಾಘವೇಂದ್ರ, ಸಂದೇಶ್ ಜವಳಿ, ಕಾಸರವಳ್ಳಿ ಶ್ರೀನಿವಾಸ, ಸುಮಾ ರಾಮಚಂದ್ರ, ನಾಗರಾಜ್ ಶೆಟ್ಟಿ, ಕುಕ್ಕೆ ಪ್ರಶಾಂತ್ ಸೇರಿದಂತೆ ಅನೇಕ ಬಿಜೆಪಿ ಮುಖಂಡರು ಉಪಸ್ಥಿತರಿದ್ದರು.