Advertisement

ಸಾರ್ವಜನಿಕವಾಗಿ ಮಾಸ್ಕ್ ಕಳಚುವ ಮುನ್ನ ಕೋವಿಡ್ ವಾರಿಯರ್ಸ್ ನೆನಪಿಸಿಕೊಳ್ಳಿ: ಪ್ರಧಾನಿ ಮೋದಿ

02:27 PM Jul 26, 2020 | Mithun PG |

ನವದೆಹಲಿ: ಕೋವಿಡ್-19 ಸಾಂಕ್ರಾಮಿಕ ರೋಗದ ವಿರುದ್ಧದ ಹೋರಾಡುತ್ತಿರುವ ಈ ಸಂದರ್ಭದಲ್ಲಿ ಜನರು ಸದಾ ಜಾಗರೂಕರಾಗಿರಿ. ಸಾವರ್ಜನಿಕವಾಗಿ ಮಾಸ್ಕ್ ಧರಿಸದೇ ಆಥವಾ ತೆಗೆಯುವ ಮುನ್ನ  ಕೋವಿಡ್ ವಾರಿಯರ್ ಗಳ  ಶ್ರಮದ ಕುರಿತು ಒಮ್ಮೆ ಅಲೋಚಿಸಿ ಎಂದು ಪ್ರಧಾನಿ ಮೋದಿ ದೇಶದ ಜನರಲ್ಲಿ ವಿನಂತಿಸಿದ್ದಾರೆ.

Advertisement

67ನೇ ಮನ್ ಕಿ ಬಾತ್‌ ರೇಡಿಯೊ ಕಾರ್ಯಕ್ರಮದಲ್ಲಿ ರಾಷ್ಟ್ರವನ್ನುದ್ದೇಶಿ ಮಾತನಾಡಿದ ಅವರು, ಕೋವಿಡ್ ಸೊಂಕಿನಿಂದ ಹಲವಾರು ಜನರು ಶೀಘ್ರ ಚೇತರಿಸುತ್ತಿದ್ದಾರೆ. ಮಾತ್ರವಲ್ಲದೆ ಸಾವಿನ ಪ್ರಮಾಣ ಕೂಡ ಕಡಿಮೆಯಿದೆ. ಇದೊಂದು ಆಶಾದಾಯಕ ಬೆಳವಣಿಗೆ. ಆದಾಗ್ಯೂ ಸೊಂಕಿತರ ಸಂಖ್ಯೆ ಪ್ರತಿನಿತ್ಯ ದಾಖಲೆಯ ಮಟ್ಟದಲ್ಲಿ ಏರುತ್ತಿರುವುದು ಮಾರಕವಾಗಿ ಪರಿಣಮಿಸಿದೆ ಎಂದರು.

ಇಂದು ನಾವು ಲಕ್ಷಾಂತರ ಜನರ ಪ್ರಾಣ ಉಳಿಸಲು ಸಮರ್ಥರಾಗಿದ್ದೇವೆ. ಆದರೆ ವೈರಸ್ ಹರಡುವುದು ನಿಯಂತ್ರಣಕ್ಕೆ ಬರಲಿಲ್ಲ. ಅನೇಕ ಪ್ರದೇಶಗಳಲ್ಲಿ ಸೊಂಕು ವೇಗವಾಗಿ ಹರಡುತ್ತಿದೆ. ಜನರು ಸದಾ ಜಾಗರೂಕರಾಗಿರಬೇಕು ಎಂದು ಹೇಳಿದರು.

ನಾಗರಿಕರು ಮಾಸ್ಕ್ ಧರಿಸುವುದನ್ನು ಮುಂದುವರಿಸಬೇಕು, ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು, ನಿರಂತರವಾಗಿ ಕೈ ತೊಳೆಯಬೇಕು, ಎಲ್ಲಿಯೂ ಉಗುಳಬಾರದು ಮತ್ತು ಸ್ವಚ್ಚತೆಯ ಬಗ್ಗೆ ಸಂಪೂರ್ಣ ಕಾಳಜಿ ವಹಿಸಬೇಕು. ಏಕೆಂದರೆ ಇವುಗಳು ಕೋವಿಡ್ ಸೊಂಕಿನಿಂದ ನಮ್ಮನ್ನು ರಕ್ಷಿಸಬಲ್ಲ ಶಸ್ತ್ರಾಸ್ತ್ರಗಳಾಗಿವೆ ಎಂದು ತಿಳಿಸಿದರು.

Advertisement

ಕೆಲವರಿಗೆ ಮಾಸ್ಕ್ ಧರಿಸುವುದರಿಮದ ತೊಂದರೆಗಲಾಗುತ್ತಿವೆ. ಮಾತ್ರವಲ್ಲದೆ ಆಗಿಂದ್ದಾಗೆ ಕಳಚುತ್ತಾರೆ, ಮಾಸ್ಕ್ ಧರಿಸದೆ ಇತರರೊಂದಿಗೆ ಮಾತನಾಡುತ್ತಾರೆ. ಅಂತಹ ಸಮಯದಲ್ಲಿ ವೈದ್ಯರನ್ನು, ನರ್ಸ್ ಗಳನ್ನು ಇತರ ಕೋವಿಡ್ ವಾರಿಯರ್ ಗಳ ಸೇವೆಯನ್ನು ನೆನಪು ಮಾಡಿಕೊಳ್ಳಿ !

ಕೋವಿಡ್ ವಾರಿಯರ್ ಗಳು ನಮ್ಮ ಪ್ರಾಣ ಉಳಿಸಲು ಹೋರಾಡುತ್ತಿದ್ದಾರೆ. 8ರಿಂದ 10 ಗಂಟೆಗಳ ಕಾಲ  ಮಾಸ್ಕ್ ಧರಿಸುತ್ತಾರೆ. ಅವರಿಗೆ ತೊಂದರೆಯಾಗುವುದಿಲ್ಲವೇ ? ಎಂದು ಪ್ರಶ್ನಿಸಿದ್ದಾರೆ.

ಇದೇ ವೇಳೆ ಪ್ರಧಾನಿ ಮೋದಿ ಕಾರ್ಗಿಲ್ ವಿಜಯ್ ದಿವಸ್ ಹಿನ್ನಲೆಯಲ್ಲಿ ಮನ್ ಕೀ ಬಾತ್ ಕಾರ್ಯಕ್ರಮದ ಮೂಲಕ 21 ವರ್ಷಗಳ ಹಿಂದೆ ದೇಶಕ್ಕಾಗಿ ಪ್ರಾಣ ಅರ್ಪಿಸಿದ ವೀರ ಯೋಧರಿಗೆ ಗೌರವ ಸಲ್ಲಿಸಿದರು.

ಕಳೆದ 24 ಗಂಟೆಗಳಲ್ಲಿ ಭಾರತದಲ್ಲಿ 48,661 ಜನರಿಗೆ ಮಾರಕ ಕೋವಿಡ್ ಸೋಂಕು ತಗುಲಿದ್ದು 705 ಜನರು ಮೃತಪಟ್ಟಿದ್ದಾರೆ. ಒಟ್ಟು ಸೊಂಕಿತರ ಪ್ರಮಾಣ 13. 85 ಲಕ್ಷಕ್ಕೆ ತಲುಪಿದೆ.

Advertisement

Udayavani is now on Telegram. Click here to join our channel and stay updated with the latest news.

Next