Advertisement
ಹಲವು ಸಮಸ್ಯೆಗಳು: ನಗರಸಭೆಯ ಸಭಾಂಗಣದಲ್ಲಿ ಅಧ್ಯಕ್ಷ ರಾಮ್‌ಮೋಹನ್ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಆಡಳಿತ ಹಾಗೂ ಪ್ರತಿಪಕ್ಷದ ಬಹುತೇಕ ಸದಸ್ಯರು ಸಮಸ್ಯೆಗಳ ಸರಮಾಲೆಯನ್ನೇ ಬಿಚ್ಚಿಡುತ್ತಾ, ನಗರಸಭೆ ವ್ಯಾಪ್ತಿಯಲ್ಲಿ ಮೂಲ ಸೌಕರ್ಯಗಳ ಕೊರತೆಯಿದ್ದು, ನಗರವಾಸಿಗಳು ಅನೇಕ ಸಮಸ್ಯೆಗಳನ್ನು ಎದುರಿಸುವಂತಾಗಿದೆ. ಮನೆ ಕಸ ತೆಗೆದುಕೊಳ್ಳುವ ವಾಹನದವರು ಸರಿ ಯಾಗಿ ಬರುತ್ತಿಲ್ಲವಾದ್ದರಿಂದ ಮನೆಕಸ ವಿಲೇವಾರಿ ವ್ಯವಸ್ಥೆ ಸಂಪೂರ್ಣ ಹದಗೆಟ್ಟಿದ್ದು, ಬೀದಿ ಬೀದಿಗಳಲ್ಲಿ ಕಸ ಎಸೆಯುವಂತಾಗಿದೆ. ಕಸ ಹಾಕಲು ಮನೆಗಳವರು ನಿತ್ಯ ಕಾಯುವಂತಾಗಿದ್ದು, 2 ದಿನಗಳಾದರೂ ವಾಹನ ಗಳು ಬರುತ್ತಿಲ್ಲ ಎಂದು ಸದಸ್ಯರು ತಿಳಿಸಿದರು.
Related Articles
Advertisement
ನಗರದ ಅನೇಕ ರಸ್ತೆಗಳನ್ನು ನಾನಾ ಕಾರಣಗಳಿಗೆ ಅಗೆದು ಸರಿ ಮಾಡದೇ ಬಿಟ್ಟಿದ್ದು, ಇದರಿಂದ ಅಮಾ ಯಕ ಜನರು ಅಪಘಾತಕ್ಕೀಡಾಗುತ್ತಿದ್ದಾರೆ. ನಗರದ ಸಂಪೂರ್ಣ ಫುಟ್‌ಪಾತ್ ಅನ್ನು ವ್ಯಾಪಾರಿಗಳೇ ಆವ ರಿಸಿ ಕೊಂಡಿದ್ದು ಪಾದಚಾರಿಗಳ ಹಿದೃಷ್ಟಿಯಿಂದ ಕೂಡಲೇ ತೆರವುಗೊಳಿಸಬೇಕೆಂದು ಬಹುತೇಕ ಸದಸ್ಯರು ಒತ್ತಾಯಿಸಿದರು.
ಸಾಮಾನ್ಯ ಸಭೆಯ ಚರ್ಚೆಯಲ್ಲಿ ನಗರಸಭೆ ಉಪಾ ಧ್ಯಕ್ಷ ಸೊಪ್ಪುಗಣೇಶ್, ಸ್ಥಾಯಿ ಸಮಿತಿ ಅಧ್ಯಕ್ಷ ಶಶಿ ಕಿರಣ್, ಪೌರಾಯುಕ್ತ ಉಮಾಕಾಂತ್, ಸದಸ್ಯರುಗಳಾದ ಕೋಟೆ ಪ್ರಭು, ನಗರಸಭಾ ಮಾಜಿ ಅಧ್ಯಕ್ಷ ಹಾಲಿ ಸದಸ್ಯ ಪ್ರಕಾಶ್, ಸದಸ್ಯರುಗಳಾದ ಯಮುನಾ ಧರಣೀಶ್, ಲತಾ ಲೋಕೇಶ್, ಜಯಲಕ್ಷ್ಮೀ, ಗುರು ರಾಜ್, ಯೋಗೇಶ್, ಗಂಗಾ ಆರ್.ಡಿ.ಬಾಬು, ಹೂರ್‌ಬಾನು, ಆಸೀಫಾಬಾನು, ಯೋಗೀಶ್, ಸಂಗ ಮೇಶ್ ಮುಂತಾದವರು ಭಾಗವಹಿಸಿದ್ದರು.
ನಗರಸಭೆ ಆರೋಗ್ಯಾಧಿಕಾರಿಗಳು ನಿರ್ಲಕ್ಷ್ಯ: ನಕಲಿ ಜೆಂಕ್‌ಫುಡ್ ಹಾವಳಿ ಜಾಸ್ತಿಯಾಗಿದ್ದು, ಕೆಲ ಕೂಲ್‌ಡ್ರಿಂಕ್ಸ್, ಕುರ್‌ಕುರೆಯಂತಹ ಚಿಪ್ಸ್, ಡೂಪ್ಲಿಕೇಟ್ ಚಾಕೋಲೆಟ್ಸ್, ಕಾರಗಳನ್ನು ವಿವಿಧ ನಕಲಿ ಬ್ರಾಂಡಿನ ಆಹಾರೋತ್ಪನ್ನ ಮಾರಾಟವಾಗುತ್ತಿದ್ದು, ನಕಲಿ, ಕಳಪೆ ಜೆಂಕ್‌ಫುಡ್ ತಿಂದ ಮಕ್ಕಳು ತೀವ್ರವಾದ ಅನಾರೋಗ್ಯಕ್ಕೆ ತುತ್ತಾಗುತ್ತಿದ್ದಾರೆ. ಹೆಚ್ಚಿನ ಬಣ್ಣ ಹಾಗೂ ಕೆಮಿಕಲ್ ಮಿಶ್ರಿತ ಆಹಾರ ಸೇವಿಸಿದ ಮಕ್ಕಳು ಬಾಲ್ಯದಲ್ಲಿಯೇ ಬಿಪಿ, ಶುಗರ್, ಚರ್ಮ, ತಲೆನೋವು, ಹೊಟ್ಟೆ ನೋವಿನಂತಹ ಅನೇಕ ಸಮಸ್ಯೆಗಳಿಗೆ ತುತ್ತಾಗುತ್ತಿದ್ದಾರೆ. ಆದರೆ ನಕಲಿ ಉತ್ಪನ್ನಗಳು ಹಾಗೂ ಕಳಪೆ ಉತ್ಪನ್ನಗಳ ಬಗ್ಗೆ ನಗರಸಭೆ ಆರೋಗ್ಯಾಧಿಕಾರಿಗಳು ಕಠಿಣ ಕ್ರಮ ಕೈಗೊಳ್ಳದೇ ನಿರ್ಲಕ್ಷಿಸಿದ್ದಾರೆಂದು ಆರೋಪಿಸಿದ ಸದಸ್ಯರು ಈ ಬಗ್ಗೆ ನಗರಸಭೆ ತುರ್ತು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.
ರಿಪೇರಿಯಾಗಿ ಸದ್ಯದಲ್ಲೇ ಬರಲಿದೆ ಜೆಸಿಬಿ : ನಗರಸಭೆಗೆ ಸೇರಿರುವ ಜೆಸಿಬಿಯೊಂದು 2 ವರ್ಷಗಳಿಂದ ರಿಪೇರಿ ಹೆಸರಿನಲ್ಲಿ ಅನಾಮ ದೇಯ ಮೆಕ್ಯಾನಿಕ್ ಶಾಪ್‌ಗೆ ಹೋಗಿದ್ದು, ಈ ವರೆಗೂ ರಿಪೇರಿಯಾಗಿ ಬಂದಿಲ್ಲ ಎಂಬ ಚರ್ಚೆಗೆ ಉತ್ತರಿಸಿದ ಅಧ್ಯಕ್ಷರು ಹಾಗೂ ಪರಿಸರ ಇಂಜಿನಿ ಯರ್ ಅದು ಇದೆ. ಸದ್ಯದಲ್ಲಿಯೇ ರಿಪೇರಿ ಯಾಗಿ ಬರಲಿದೆ ಎಂಬ ಉತ್ತರಕ್ಕೆ ಆಕ್ರೋಶ ಗೊಂಡ ಸದಸ್ಯರು, 2 ವರ್ಷ ಅದರ ಬಗ್ಗೆ ಗಮನ ಹರಿಸದೆ ಈಗ ಬರಲಿದೆ ಎಂಬ ಬೇಜವಾಬ್ದಾರಿ ಉತ್ತರ ನೀಡುತ್ತಿದ್ದು, ಜನರ ತೆರಿಗೆ ಹಣದಲ್ಲಿ ಖರೀದಿಸಿರುವ ಜೆಸಿಬಿ ಜನರ ಕೆಲಸಕ್ಕೆ ಲಭ್ಯವಾಗ ದಂತೆ ಮಾಡಿರುವ ನಿಮಗೆ ಜನರು ತಕ್ಕ ಪಾಠ ಕಲಿಸಿಲಿದ್ದಾರೆ ಎಂದು ಸದಸ್ಯರು ಹೇಳಿದರು.