Advertisement
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಟಿಪ್ಪು ಸುಲ್ತಾನ್ ಮೈಸೂರು ಹುಲಿ ಯಾವಾಗ ಆಗಿದ್ದ? ಯಾವ ಹುಲಿ ಕೊಂದಿದ್ದನಂತೆ. ಪೋಸ್ಟರ್ ಗಳಲ್ಲಿ ಹುಲಿ ಚಿತ್ರಗಳನ್ನು ಹಾಕಿಬಿಟ್ಟರೆ ಮೈಸೂರು ಹುಲಿ ಆಗಬಿಡ್ತಾನ? ಮೂರನೇ ಮತ್ತು ನಾಲ್ಕನೇ ಆಂಗ್ಲೋ ಮೈಸೂರು ಯುದ್ದದಲ್ಲಿ ಟಿಪ್ಪು ಸುಲ್ತಾನ್ ಯಾವ ರಣರಂಗದಲ್ಲಿ ಹೋರಾಟ ಮಾಡಿದ್ದ? ಟಿಪ್ಪು ಸುಲ್ತಾನ್ ಕೋಟೆಯೊಳಗೆ ಸತ್ತಿದ್ದು. ಆದರೆ ಹುಲಿ ಎಂದಿಗೂ ಬೋನ್ ನಲ್ಲಿ ಸಾಯುವುದಿಲ್ಲ ಎಂದು ಟೀಕಿಸಿದರು.
Related Articles
Advertisement
ಇಷ್ಟೊಂದು ಪ್ರೀತಿ ಯಾಕೆ?: ಪಠ್ಯ ಪುಸ್ತಕದಿಂದ ಭಗತ್ ಸಿಂಗ್, ನಾರಾಯಣಗುರು ಅವರ ಪಠ್ಯವನ್ನ ಕೈ ಬಿಟ್ಟಿಲ್ಲ. ಕಾಂಗ್ರೆಸ್ ವಿನಾಕಾರಣ ಈ ವಿಚಾರದಲ್ಲಿ ವಿವಾದ ಮಾಡುತ್ತಿದೆ. ಕಾಂಗ್ರೆಸ್‌ಗೆ ದಿಢೀರನೆ ಭಗತ್ ಸಿಂಗ್ ಮೇಲೆ ಯಾಕೆ ಇಷ್ಟೊಂದು ಪ್ರೀತಿ ಬಂತೆಂದು ಗೊತ್ತಾಗುತ್ತಿಲ್ಲ. ಈ ವಿಚಾರದಲ್ಲಿ ಕಾಂಗ್ರೆಸ್ ಸುಳ್ಳು ಹೇಳುತ್ತಿದೆ. ಭಗತ್ ಸಿಂಗ್ ಪಠ್ಯ ಮುಂದುವರೆದಿದೆ. ನಾರಾಯಣಗುರು ಅವರ ಪಠ್ಯ ಒಂದು ವಿಷಯದಿಂದ ಮತ್ತೊಂದು ವಿಷಯಕ್ಕೆ ವರ್ಗಾವಣೆಯಾಗಿದೆ ಎಂದರು.
ಆರ್ ಎಸ್ಎಸ್ ಸಂಸ್ಥಾಪಕ ಹೆಡಗೆವಾರ್ ಅವರ ಪಠ್ಯ ಯಾಕೆ ಇರಬಾರದು? ಅವರು ದೇಶ ಪ್ರೇಮದ ಬಗ್ಗೆ ಮಾಡಿದ ಭಾಷಣ ಮಕ್ಕಳಿಗೆ ಸ್ಪೂರ್ತಿಯಾಗಲು ಪಠ್ಯದಲ್ಲಿ ಅಳವಡಿಸಿದ್ದೇವೆ. ಅದರಲ್ಲಿ ತಪ್ಪೇನಿದೆ? ಚಕ್ರವರ್ತಿ ಸೂಲಿಬೆಲೆ ಒಬ್ಬ ಶ್ರೇಷ್ಠ ವಾಗ್ಮಿ. ಅವರು ರಚಿಸಿದ ಪಠ್ಯ ಮಕ್ಕಳಿಗೆ ದೇಶ ಭಕ್ತಿ ತುಂಬಲಿದೆ. ತಾಯಿ ಭಾರತೀಯ ಅಮರ ಪುತ್ರರು ಎಂಬ ಪಠ್ಯ ದೇಶ ಪ್ರೇಮ ಬೆಳಸಲಿದೆ. ಇದರಲ್ಲೂ ಕಾಂಗ್ರೆಸ್‌ನವ್ರು ತಪ್ಪು ಹುಡುಕುವುದು ಯಾಕೆ ಎಂದು ಖಾರವಾಗಿ ಪ್ರಶ್ನಿಸಿದರು.
ಬೋಲೋ ಭಾರತ್ ಮಾತಕೀ ಜೈ ಎನ್ನುವುದಕ್ಕೂ ಕಾಂಗ್ರೆಸ್ ಗೆ ಸಮಸ್ಯೆಯಿದೆ. ದೇಶಪ್ರೇಮದ ಪಾಠ ಬೋಧಿಸುವುದು ಕಾಂಗ್ರೆಸ್ ಸಮಸ್ಯೆಯಾಗಿದೆ. ಕಾಂಗ್ರೆಸ್ ಯಾವಾಗಲೂ ದೇಶ ವಿರೋಧಿಯಾಗಿಯೇ ವರ್ತಿಸುತ್ತಿದೆ ಎಂದು ಪ್ರತಾಪ್ ಸಿಂಹ ಟೀಕಿಸಿದರು.