Advertisement

ಟಿಪ್ಪು ಸ್ಮರಣೆ: ಡಿಬಿಸಿ ಸಮರ್ಥನೆ

07:50 AM Oct 26, 2017 | |

ಬೆಂಗಳೂರು: ವಿಧಾನಮಂಡಲದ ವಜ್ರಮಹೋತ್ಸವದ ಅಂಗವಾಗಿ ನಡೆದ ವಿಶೇಷ ಜಂಟಿ ಅಧಿವೇಶನ ಉದ್ದೇಶಿಸಿ ರಾಷ್ಟ್ರಪತಿಯವರು ತಮ್ಮ ಭಾಷಣದಲ್ಲಿ ಟಿಪ್ಪು ಸುಲ್ತಾನ್‌ ಹೆಸರು ಪ್ರಸ್ತಾಪಿಸಿದ್ದನ್ನು ಹಿರಿಯ ಸಂಸದೀಯ ಪಟು, ಬಿಜೆಪಿ
ನಾಯಕ ಡಿ.ಬಿ.ಚಂದ್ರೇಗೌಡ ಸಮರ್ಥಿಸಿಕೊಂಡಿದ್ದಾರೆ. 

Advertisement

ರಾಷ್ಟ್ರಪತಿಯವರು  ತಮ್ಮ ಭಾಷಣದಲ್ಲಿ ಟಿಪ್ಪು ಬಗ್ಗೆ ಪ್ರಸ್ತಾಪಿಸಿದ್ದು ತಪ್ಪಲ್ಲ. ವಿವಾದ ಮಾಡಲೇ ಬೇಕು ಅನ್ನೋರಿಗೆ ಟಿಪ್ಪು ವಿವಾದ ಆಗ್ತಾನೆ. ಟಿಪ್ಪು ಒಳ್ಳೆಯ ಆಡಳಿತಗಾರ ಮತ್ತು ಹೋರಾಟಗಾರನಾಗಿದ್ದ. ಅಭಿವೃದ್ಧಿಯ ಹರಿಕಾರನಾಗಿದ್ದ ಅನ್ನೋದು ಸಹ ನಮಗೆ ಗೊತ್ತಿದೆ. ಟಿಪ್ಪು ಕೂಡ ಮೈಸೂರು ಅರಸರಷ್ಟೇ ಪ್ರಭಾವಿಯಾಗಿದ್ದ ಎಂದು ಹೇಳಿದರು. ಟಿಪ್ಪು ವಿಚಾರವನ್ನು ಯಾಕೆ ಇವತ್ತಿನ ಭಾಷಣದಲ್ಲಿ ಪ್ರಸ್ತಾಪ ಮಾಡಬಾರದು. ಈ ಬಗ್ಗೆ ವಿರೋಧ ಮಾಡುವವರೇ ಸಮಜಾಯಿಷಿ ಕೊಡಬೇಕು.ನಮಗೆ ಗೊತ್ತಿರುವ ಇತಿಹಾಸದ ಪ್ರಕಾರ ನಾನು ಇದನ್ನು ಹೇಳಬಲ್ಲೆ. ಟಿಪ್ಪು ಅಭಿವೃದ್ಧಿಯ ಹರಿಕಾರ ಅಂತ ನಮಗೆ ಗೊತ್ತಿದೆ ಎಂದರು.

ವಜ್ರ ಮಹೋತ್ಸವ ಒಳ್ಳೆಯ ಕಾರ್ಯಕ್ರಮ ಅನ್ನೋ ತೃಪ್ತಿ ಇದೆ. ಬರಬೇಕಾದವರೆಲ್ಲಾ ಬಂದು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ರಾಷ್ಟ್ರಪತಿಗಳು ಸಹ ರಾಜ್ಯದ ಬಗ್ಗೆ ಒಳ್ಳೆಯ ಭಾಷಣ ಮಾಡಿದ್ದಾರೆ. ನಮ್ಮ ರಾಜ್ಯದ ಬಗ್ಗೆ ಕೆಲವು ಒಳ್ಳೆಯ ವಿಚಾರ ಹೇಳಿದ್ದಾರೆ. ಇದು ಕೇವಲ ಸಚಿವಾಲಯದ ಕಾರ್ಯಕ್ರಮ ಅಲ್ಲ. ರಾಜ್ಯ ಸರ್ಕಾರದ ಕಾರ್ಯಕ್ರಮವೂ ಅಲ್ಲ ಅನ್ನೋದನ್ನು ಗಮನಿಸಬೇಕು ಎಂದು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next