ಕೋಮುವಾದಿ, ಧರ್ಮಾಂಧ, ಹಿಂದೂ-ಕ್ರೈಸ್ತರನ್ನು ಹತ್ಯೆ ಮಾಡುತ್ತಿದ್ದ ಮತ್ತು ಬಲಾತ್ಕಾರವಾಗಿ ಮತಾಂತರಗೊಳಿಸುತ್ತಿದ್ದ ವ್ಯಕ್ತಿ. ಜಾತ್ಯತೀತ ಎಂದರೆ ಎಲ್ಲ ಜಾತಿ-ಧರ್ಮದವರನ್ನು ಸಮಾನವಾಗಿ ರಕ್ಷಿಸುವುದು , ಉತ್ತೇಜಿಸುವುದು, ಆದರೆ ಟಿಪ್ಪು ಹಿಂದೂ-ಕ್ರೈಸ್ತ ವಿರೋಧಿ ಯಾಗಿದ್ದ ಟಿಪ್ಪು ಜಯಂತಿ ಆಚರಣೆಯೇ ಕೋಮುವಾದ. ರಾಜಕೀಯ ಹಿತಾಸಕ್ತಿಯಿಂದ ಟಿಪ್ಪುವನ್ನು ವೈಭವೀಕರಿಸುವ ಟಿಪ್ಪು ಜಯಂತಿ ಆಚರಣೆ ಕೈಬಿಡುವಂತೆ ಬೆಳ್ತಂಗಡಿ ಬಿಜೆಪಿ ಆಗ್ರಹಿಸಿದೆ.
Advertisement
ಈ ಬಗ್ಗೆ ಬೆಳ್ತಂಗಡಿ ತಾ| ಕಚೇರಿ ಮೂಲಕ ರಾಜ್ಯಪಾಲರಿಗೆ ಮನವಿ ನೀಡಲಾಯಿತು. ಬಿಜೆಪಿ ಅಧ್ಯಕ್ಷ ರಂಜನ್ ಜಿ.ಗೌಡ, ಯುವ ಮೋರ್ಚಾ ಅಧ್ಯಕ್ಷ ಸಂಪತ್ ಬಿ. ಸುವರ್ಣ ಮೊದಲಾದವರು ಉಪಸ್ಥಿತರಿದ್ದರು.