Advertisement
ಈ ಹಿಂದೆ 3.11.2020ರಂದು ಹುಂಡಿ ಹಣವನ್ನು ಎಣಿಕೆ ಮಾಡಲಾಗಿತ್ತು. ಆಗ ಎರಡೂ ದೇವಾಲಯಗಳಿಂದ ಒಟ್ಟಾರೆ 26,10,880 ರೂ. ಸಂಗ್ರಹವಾಗಿತ್ತು. ಈ ಬಾರಿ ಎಣಿಕಾ ಕಾರ್ಯದಲ್ಲಿ 2.32 ಲಕ್ಷ ರೂ. ಹೆಚ್ಚಿನ ಪ್ರಮಾಣದ ಹಣ ಸಂಗ್ರಹವಾಗಿದೆ. ನಾಲ್ಕು ತಿಂಗಳು 6 ದಿನಗಳಲ್ಲಿ ಸಂಗ್ರಹವಾಗಿರುವ ಹುಂಡಿ ಹಣ ಇದಾಗಿದೆ. ಎರಡೂ ದೇವಾಲಯಗಳಲ್ಲಿ ಭಾರೀ ಪ್ರಮಾಣದ ಚಿಲ್ಲರೆ ಸಂಗ್ರಹವಾಗಿತ್ತು. ಹೊರಮಠದಲ್ಲಿ 23,240 ರೂ., ಒಳಮಠದಲ್ಲಿ 89,035 ರೂ. ಸೇರಿದಂತೆ ಒಟ್ಟಾರೆ 1,12,275 ರೂ.ಗಳಷ್ಟು ಚಿಲ್ಲರೆ ನಾಣ್ಯಗಳು ಸಂಗ್ರಹವಾಗಿದ್ದವು.
Related Articles
Advertisement
ಆಂಧ್ರ ಮೂಲದ ವ್ಯಕ್ತಿಯೊಬ್ಬರು ತಮ್ಮ ಮಗ ಸಾಗರ್ ತಿಪ್ಪೇಶನ ದಯೆಯಿಂದ ಎಸ್ಸೆಸ್ಸೆಲ್ಸಿ ಪಾಸಾಗಿದ್ದಾನೆ. ಆದ್ದರಿಂದ 5001 ರೂ.ಗಳನ್ನು ದೇವರಿಗೆ ಅರ್ಪಿಸುತ್ತಿದ್ದೇನೆ. ಮುಂದೆ ಅವನ ವಿದ್ಯಾಭ್ಯಾಸ ಉತ್ತಮವಾಗಿರಲಿ ಎಂದು ಬೇಡಿಕೊಳ್ಳುತ್ತೇನೆ ಎಂದು ಪತ್ರ ಬರೆದು ಹುಂಡಿಗೆ ಹಾಕಿದ್ದಾರೆ.
ಪತ್ರಗಳು, ಕರಪತ್ರಗಳೂ ಬೇಡಿಕೆಗಳು ಹುಂಡಿಯಲ್ಲಿದ್ದವು. ವರ್ಷದಲ್ಲಿ ನಾಲ್ಕು ಬಾರಿ ಹುಂಡಿ ಹಣ ಎಣಿಸಲಾಗುತ್ತಿದೆ. ತಳಕು, ನಾಯಕನಹಟ್ಟಿ, ಚಳ್ಳಕೆರೆ ಸೇರಿದಂತೆ 80ಕ್ಕೂ ಹೆಚ್ಚು ಕಂದಾಯ ಇಲಾಖೆ ಸಿಬ್ಬಂದಿ, ಕೆನರಾ ಬ್ಯಾಂಕ್ ಸಿಬ್ಬಂದಿ ಎಣಿಕಾ ಕಾರ್ಯದಲ್ಲಿ ಪಾಲೊಂಡಿದ್ದರು. ತಹಶೀಲ್ದಾರ್ ಎಂ.ಮಲ್ಲಿಕಾರ್ಜುನ, ದೇವಾಲಯದ ಇಒ ಮಂಜುನಾಥ ಬಿ. ವಾಲಿ, ಉಪ ತಹಶೀಲ್ದಾರ್ ಟಿ.ಜಗದೀಶ್, ಕೆನರಾ ಬ್ಯಾಂಕ್ ಮ್ಯಾನೇಜರ್ ಸೂರ್ಯದೇವ ನಾಯಕ್, ರಾಜಸ್ವ ನಿರೀಕ್ಷಕ ಚೇತನ್, ಗ್ರಾಮ ಲೆಕ್ಕಿಗ ಉಮಾ, ದೇವಾಲಯದ ಸಿಬ್ಬಂದಿ ಸತೀಶ್, ವಿರೂಪಾಕ್ಷಪ್ಪ ಮತ್ತಿತರರಿದ್ದರು. !