Advertisement

ಬೆಳ್ಮಣ್‌:ಟಿಪ್ಪರ್‌-ಬಸ್‌ ಮುಖಾಮುಖಿ;ಯುವತಿ ಸಾವು,ಹಲವರಿಗೆ ಗಾಯ 

01:52 PM Feb 23, 2019 | |

ಉಡುಪಿ:  ಬೆಳ್ಮಣ್‌ನ ಜಂತ್ರ ಎಂಬಲ್ಲಿ ಮುಖ್ಯ ರಸ್ತೆಯಲ್ಲಿ ಶನಿವಾರ ಸಂಜೆ  ಟಿಪ್ಪರ್‌ ಮತ್ತು ಖಾಸಗಿ ಬಸ್‌ ನಡುವೆ ಭೀಕರ ಅಪಘಾತ ಸಂಭವಿಸಿದ್ದು. ಬಸ್‌ನಲ್ಲಿದ್ದ ಯುವತಿಯೊಬ್ಬರು ದಾರುಣವಾಗಿ ಸಾವನ್ನಪ್ಪಿದ್ದು, 15 ಕ್ಕೂ ಹೆಚ್ಚು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ.

Advertisement

ಅಪಘಾತದ ತೀವ್ರತೆಗೆ ಯುವತಿ ಸ್ಥಳದಲ್ಲೇ ಸಾವನ್ನಪ್ಪಿದ್ದು, ಇನ್ನೋರ್ವ ಯುವತಿಯ ಸ್ಥಿತಿ ಚಿಂತಾಜನಕವಾಗಿದೆ ಎಂದು ತಿಳಿದು ಬಂದಿದೆ. 

ಮೃತ ಯುವತಿ 22 ರ ಹರೆಯದ ಮೋಕ್ಷಿತಾ ಎಂದು ತಿಳಿದು ಬಂದಿದೆ. 

ಗಾಯಾಳುಗಳನ್ನು ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿದೆ. 

Advertisement

ಕಾರ್ಕಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ಅಪಘಾತದ ಬಳಿಕ ಸ್ಥಳದಲ್ಲಿ ನೂರಾರು ಜನರು ಜಮಾವಣೆಗೊಂಡ ಪರಿಣಾಮ ಸಂಚಾರ ಬಾಧಿತವಾಗಿತ್ತು. 

ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗುತ್ತಿದೆ. 

Advertisement

Udayavani is now on Telegram. Click here to join our channel and stay updated with the latest news.

Next