Advertisement

Times Now Survey!: ಎನ್‌ಡಿಎಗೆ 400 ಸ್ಥಾನ ಗೆಲುವು ಡೌಟು?

12:43 AM Mar 09, 2024 | Team Udayavani |

ಹೊಸದಿಲ್ಲಿ: ಈಗಲೇ ಲೋಕಸಭಾ ಚುನಾವಣೆ ನಡೆದರೆ ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟ 378 ಸ್ಥಾನ ಹಾಗೂ ಕಾಂಗ್ರೆಸ್‌ ನೇತೃತ್ವದ ಇಂಡಿಯಾ ಒಕ್ಕೂಟ 120 ಸ್ಥಾನಗಳಲ್ಲಿ ಜಯಗಳಿಸಲಿದೆ ಎಂದು ಟೈಮ್ಸ್‌ ನೌ’ ಮತ್ತು “ಇಟಿಜಿ’ ಸಮೀಕ್ಷೆ ತಿಳಿಸಿದೆ.

Advertisement

ದೇಶದ 543 ಲೋಕಸಭಾ ಸ್ಥಾನಗಳ ಸಮೀಕ್ಷೆಯನ್ನು ಪ್ರಕಟಿಸಲಾಗಿದ್ದು, ಈ ಬಾರಿ 400ಕ್ಕೂ ಹೆಚ್ಚು ಸ್ಥಾನ ಗೆಲ್ಲಬೇಕು ಎಂಬ ಎನ್‌ಡಿಎ ಮೈತ್ರಿಕೂಟದ ಕನಸು ಕಸನಾಗಿಯೇ ಉಳಿಯುವ ಸಾಧ್ಯತೆ ಇದೆ ಎಂದು ಸಮೀಕ್ಷೆ ಹೇಳಿದೆ. ಆದರೆ ಇದೇ ಮೊದಲ ಬಾರಿಗೆ ಟಿಎಂಸಿ ಭದ್ರಕೋಟೆಯಾದ ಪಶ್ಚಿಮ ಬಂಗಾಲದಲ್ಲಿ ಬಿಜೆಪಿ 22 ಸ್ಥಾನಗಳನ್ನು ಗೆಲ್ಲಲಿದೆ. ಮಧ್ಯಪ್ರದೇಶ ಮತ್ತು ರಾಜಸ್ಥಾನಗಳು ಸಂಪೂರ್ಣವಾಗಿ ಎನ್‌ಡಿಎ ಪಾಲಾಗಲಿವೆ. ದಕ್ಷಿಣ ಭಾರತದ ಐದು ರಾಜ್ಯಗಳಲ್ಲಿ ಇಂಡಿಯಾ ಒಕ್ಕೂಟ 65 ಸ್ಥಾನ ಗೆಲ್ಲಲಿದೆ ಎಂದು ಸಮೀಕ್ಷೆ ತಿಳಿಸಿದೆ.
2019ರ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ 353, ಕಾಂಗ್ರೆಸ್‌ ನೇತೃತ್ವದ ಯುಪಿಎ 90 ಮತ್ತು ಇತರು 99 ಕ್ಷೇತ್ರಗಳಲ್ಲಿ ಜಯ­ಗಳಿಸಿದ್ದರು. ಇನ್ನು ಇದೇ ಮೊದಲ ಬಾರಿಗೆ ಕೇರಳದಲ್ಲಿ ಬಿಜೆಪಿ ಖಾತೆ ತೆರೆಯುವ ಸಂಭವ­ವಿದೆ ಎಂದು ಸಮೀಕ್ಷೆ ಹೇಳಿದೆ. ಜ.18ರಿಂದ ಫೆ.28ರ ಅವಧಿಯಲ್ಲಿ ಈ ಸಮೀಕ್ಷೆಯನ್ನು ತಯಾರಿಸಲಾಗಿದೆ.

ಕರ್ನಾಟಕದ 28ರಲ್ಲಿ ಬಿಜೆಪಿಗೆ 22 ಸ್ಥಾನ!
ಟೈಮ್ಸ್‌ನೌ ಸಮೀಕ್ಷೆಯ ಪ್ರಕಾರ ಕರ್ನಾಟಕ­ದ ಒಟ್ಟು 28 ಸ್ಥಾನಗಳಲ್ಲಿ ಬಿಜೆಪಿ 21ರಿಂದ 22 ಸ್ಥಾನಗಳಲ್ಲಿ, ಕಾಂಗ್ರೆಸ್‌ 4ರಿಂದ 6 ಹಾಗೂ ಜೆಡಿಎಸ್‌ 1ರಿಂದ2 ಸ್ಥಾನ ಗೆಲ್ಲ ಲಿವೆ. ಕಳೆದ ಚುನಾ ವಣೆಗೆ ಹೋಲಿಸಿದರೆ ಬಿಜೆಪಿ ಒಂದೆರಡು ಸ್ಥಾನಗಳನ್ನು ಕಳೆದುಕೊಳ್ಳ ಲಿದ್ದು, ಕಾಂಗ್ರೆಸ್‌ ಅದನ್ನು ಗಳಿಸಿಕೊಳ್ಳಲಿದೆ.

Advertisement

Udayavani is now on Telegram. Click here to join our channel and stay updated with the latest news.

Next