Advertisement

ಆರೋಗ್ಯಕ್ಕೆ ಭಾರತ ಕೊಡುಗೆ ಅಪಾರ ; ಯೋಗ ಇಂದು ವಿಶ್ವದ ಲೈಫ್ ಸ್ಟೈಲ್‌

01:57 AM Jun 29, 2020 | Hari Prasad |

ವಾಷಿಂಗ್ಟನ್‌: ಜಗತ್ತಿನ ಆರೋಗ್ಯಕ್ಕೆ ಭಾರತ ಯಾವಾಗಲೂ ಕೊಡುಗೆ ನೀಡುತ್ತಿದೆ. ಅದು ಈಗಲೂ ಮುಂದುವರಿದಿದೆ.

Advertisement

ಪ್ರಸ್ತುತ ಭಾರತದ ಯೋಗ ವಿಶ್ವದ ಜನರ ಜೀವನಶೈಲಿಯ ಅವಿಭಾಜ್ಯ ಅಂಗವಾಗಿದೆ. ನಮ್ಮ ಆಯುರ್ವೇದ ಪದ್ಧತಿಯನ್ನೂ ಜಗತ್ತು ವೇಗವಾಗಿ ಅಳವಡಿಸಿಕೊಳ್ಳುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೆಮ್ಮೆ ವ್ಯಕ್ತಪಡಿಸಿದರು.

ಭಾರತ ಮೂಲದ ಅಮೆರಿಕ ವೈದ್ಯರ ಸಮೂಹದ (ಎಎಪಿಐ) ವಾರ್ಷಿಕ ಸಭೆಯಲ್ಲಿ ಪ್ರಧಾನಿ ಶನಿವಾರ ವರ್ಚುವಲ್‌ ಭಾಷಣ ಮಾಡಿದರು.

ಅರಿಶಿನಕ್ಕೆ ಬೇಡಿಕೆ: ಭಾರತದ ಆಯುರ್ವೇದ ಮತ್ತು ಪರ್ಯಾಯ ಚಿಕಿತ್ಸಾ ಪದ್ಧತಿಗಳು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತವೆ ಎಂದು ಈಗಾಗಲೇ ಹಲವು ಸಂಶೋಧನೆಗಳು ಸಾಬೀತುಪಡಿಸಿವೆ.

ಯೋಗ, ಆಯುರ್ವೇದದಿಂದ ಕ್ಷೇಮ ಸಾಧ್ಯವಾಗುತ್ತದೆ. ಭಾರತದಲ್ಲಿ ಫಿಟ್‌ ಇಂಡಿಯಾ ಬೃಹತ್‌ ಆಂದೋಲನವಾಗಿ ರೂಪು­ಗೊಳ್ಳುತ್ತಿದೆ. ಅಮೆರಿಕ ಮತ್ತು ಯುರೋಪ್‌ನಲ್ಲಿ ಭಾರತದ ಅರಿಶಿನಕ್ಕೆ ಭಾರಿ ಬೇಡಿಕೆ ಸೃಷ್ಟಿಯಾಗಿದೆ ಎಂದು ಹೇಳಿದರು.

Advertisement

ಭಾರತದೊಂದಿಗೆ ಕೈಜೋಡಿಸಿ: ಭಾರತದ ಅಭಿವೃದ್ಧಿಯಲ್ಲಿ ನೀವೂ ಪಾಲ್ಗೊಳ್ಳಿ ಎಂದು ವೈದ್ಯರಿಗೆ ಮೋದಿ ಕರೆನೀಡಿದರು.

‘ದೇಶದ ಪ್ರತಿ ಹಳ್ಳಿಗಳಿಗೆ ಟೆಲಿಮೆಡಿಸಿನ್‌ ಕೊಂಡೊಯ್ಯಲು ಸರಕಾರ ಶ್ರಮಿಸುತ್ತಿದೆ. ಇದರಲ್ಲಿ ಅನಿವಾಸಿ ಭಾರತೀಯ ವೈದ್ಯರು ಪ್ರಮುಖ ಪಾತ್ರ ವಹಿಸಬಹುದು’ ಎಂದು ಸಲಹೆ ನೀಡಿದರು.
ಭಾರತೀಯ ಮೂಲದ 80 ಸಾವಿರಕ್ಕೂ ಅಧಿಕ ವೈದ್ಯರು ಈ ವರ್ಚುವಲ್‌ ಸಭೆಯಲ್ಲಿ ಪಾಲ್ಗೊಂಡಿದ್ದರು.

ಸಾವಿನ ಪ್ರಮಾಣ 10 ಲಕ್ಷಕ್ಕೆ 12!
ಅಮೆರಿಕದಲ್ಲಿ 10 ಲಕ್ಷಕ್ಕೆ 350 ಮಂದಿ ಕೋವಿಡ್ 19 ಸೋಂಕಿ­ನಿಂದ ಸಾವನ್ನಪ್ಪುತ್ತಿದ್ದಾರೆ. ಇಂಗ್ಲೆಂಡ್‌, ಇಟಲಿ ಮತ್ತು ಸ್ಪೇನ್‌ನಂಥ ಯುರೋಪಿಯನ್‌ ರಾಷ್ಟ್ರಗಳಲ್ಲಿ ಪ್ರತಿ 10 ಲಕ್ಷಕ್ಕೆ 600ಕ್ಕಿಂತಲೂ ಅಧಿಕ ಮಂದಿ ಅಸುನೀಗುತ್ತಿದ್ದಾರೆ.

ಆದರೆ, ಭಾರತದಲ್ಲಿ 10 ಲಕ್ಷಕ್ಕೆ ಕೇವಲ 12 ಮಂದಿ ಮೃತಪಡುತ್ತಿದ್ದಾರೆ. ಜಗತ್ತಿನಲ್ಲಿ 2ನೇ ಅತಿದೊಡ್ಡ ಜನ­ಸಂಖ್ಯೆ ಹೊಂದಿದ್ದರೂ ಭಾರತ ಕೋವಿಡ್ 19 ಸೋಂಕನ್ನು ಸಮರ್ಥ­ವಾಗಿ ಹಿಮ್ಮೆಟ್ಟಿಸಿದೆ. ಜನರ ಸಹಕಾರದಿಂದ ಲಾಕ್‌ಡೌನ್‌ ಯಶಸ್ವಿಯಾಗಿದೆ ಎಂದು ಮೋದಿ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next