ಹೊನ್ನಾಳಿ: ಸಕಾಲ ಅಡಿಬರುವ ಅರ್ಜಿಗಳನ್ನು ತ್ವರಿತ ಗತಿಯಲ್ಲಿ ವಿಲೇವಾರಿ ಮಾಡಬೇಕು. ತಪ್ಪಿದಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ಉಪವಿಭಾಗಾ ಧಿಕಾರಿ ಮಮತಾ ಹೊಸಗೌಡರ್ ಎಚ್ಚರಿಸಿದರು.
ತಾಲೂಕು ಕಚೇರಿ ಸಭಾಂಗಣದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಸಕಾಲ ಸೇವೆ ಅನುಷ್ಠಾನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಜನರು ಸವಲತ್ತು ಪಡೆಯಲು ಎಲ್ಲಾ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಿದ್ದರೂ ನೌಕರ ವರ್ಗ ಆ ಧಾಖಲೆ ಇಲ್ಲಾ ಈ ದಾಖಲೆ ಇಲ್ಲ ಎಂದು ಸತಾಯಿಸುವುದನ್ನು ನಾನು ಕಂಡಿದ್ದೇನೆ.
ಹೊನ್ನಾಳಿ ತಾಲೂಕಿನ ಸೊರಟೂರು ಗ್ರಾಮದವರೊಬ್ಬರು ಜಾತಿ ಮತ್ತು ಆದಾಯ ಪ್ರಮಾಣಪತ್ರ ಪಡೆಯಲು ಎಲ್ಲಾ ದಾಖಲೆಗಳನ್ನು ಕೊಟ್ಟರೂ ಅರ್ಜಿ ವಾಪಸ್ ಹಾಕಿರುವುದು ಗಮನಕ್ಕೆ ಬಂದಿದೆ ಎಂದರು. ಈ ಸಂದರ್ಭದಲ್ಲಿ ಸಮಜಾಯಿಸಿ ನೀಡಲು ಮುಂದಾದ ನ್ಯಾಮತಿ ತಾಲೂಕು ಉಪ ತಹಶೀಲ್ದಾರ್ ನಾಗರಾಜ್ ಅವರಿಗೆ, ಜಾತಿ ಮತ್ತು ಆದಾಯ ಪ್ರಮಾಣಪತ್ರಕ್ಕೆ ಬಂದಿರುವ ಅರ್ಜಿ ತೋರಿಸಿ. ಇದರಲ್ಲಿ ಯಾವ ದಾಖಲೆ ಹಾಕಿಲ್ಲ ತೋರಿಸಿ ಎಂದು ಉಪವಿಭಾಗಾಧಿಕಾರಿ ಪ್ರಶ್ನಿಸಿದರು. ಸ್ಪಷ್ಟ ಉತ್ತರನೀಡಲು ಉಪ ತಹಶೀಲ್ದಾರ್ ವಿಫಲರಾದರು.
ಇದನ್ನೂ ಓದಿ:ರೈತರ ಹೋರಾಟ ಹತ್ತಿಕ್ಕಲು ಹುನ್ನಾರ
ಪಶು ಸಂಗೋಪನಾ ಅಧಿ ಕಾರಿ ಒಂದು ತಿಂಗಳಲ್ಲಿ ಒಂದೇ ಅರ್ಜಿ ಸಕಾಲದಲ್ಲಿ ಬಂದಿದೆ. ಉಪವಿಭಾಗಾಧಿಕಾರಿ ಕೋಪಗೊಂಡು ಒಂದು ತಿಂಗಳಿಗೆ ಕೇವಲ ಒಂದೇ ಅರ್ಜಿ ಬಂದಿದೆ ಎಂದರೆ ಹೇಗೆ ಎಂದು ಪ್ರಶ್ನಿಸಿದ ಉಪವಿಭಾಗಾಧಿ ಕಾರಿ, ಮುಂದಿನ ದಿನಗಳಲ್ಲಿ 15 ದಿನಗಳಿಗೊಮ್ಮೆ ಸಕಾಲ ಸಭೆ ಕರೆದು ಪುನರಾವಲೋಕನ ಮಾಡುತ್ತೇನೆ ಎಂದು ಹೇಳಿದರು.ಕಾರ್ಮಿಕ ಇಲಾಖೆಯಲ್ಲಿ ಶೇ. 50 ರಷ್ಟು ಅರ್ಜಿಗಳು ಬಾಕಿ ಇದೆ ಎನ್ನುವ ಮಾಹಿತಿ ತಿಳಿದ ಉಪವಿಭಾಗಾಧಿ ಕಾರಿ, ಶೀಘ್ರವಾಗಿ ಎಲ್ಲಾ ಅರ್ಜಿಗಳ ಬಗ್ಗೆ ಕ್ರಮ ಕೈಗೊಳ್ಳಲು ಸೂಚಿಸಿದರು.
ಹೊನ್ನಾಳಿ ಮತ್ತು ನ್ಯಾಮತಿ ಬೆಸ್ಕಾಂ ಅ ಧಿಕಾರಿಗಳು ತಮ್ಮ ಇಲಾಖೆಗೆ ಸಕಾಲದಲ್ಲಿ ಬಂದಂತಹ ಎಲ್ಲಾ ಅರ್ಜಿಗಳನ್ನು ವಿಲೇವಾರಿ ಮಾಡಲಾಗಿದೆ ಎಂದು ತಿಳಿಸಿದರು. ಹೊನ್ನಾಳಿ ತಹಶೀಲ್ದಾರ್ ಬಸನಗೌಡ ಕೋಟೂರು, ನ್ಯಾಮತಿ ತಹಶೀಲ್ದಾರ್ ತನುಜಾ ಸೌದತ್ತಿ, ತಾಪಂ ಇಒ ಎಸ್.ಎಲ್. ಗಂಗಾಧರಮೂರ್ತಿ, ಪಿಎಸ್‌ಐ ಬಸವರಾಜ ಬಿರಾದಾರ್ ಸೇರಿದಂತೆ ತಾಲೂಕು ಮಟ್ಟದ ಅಧಿ ಕಾರಿಗಳು ಹಾಜರಿದ್ದರು.