Advertisement
ಮಂಗಳೂರಿನಲ್ಲಿ ಕಳೆದ ಮೂರ್‍ನಾಲ್ಕು ವರ್ಷಗಳಿಂದ ಕುಡಿಯುವ ನೀರಿನ ಸಮಸ್ಯೆ ವಿಪರೀತವಾದರೆ, ದ.ಕ. ಮತ್ತು ಉಡುಪಿ ಜಿಲ್ಲಾದ್ಯಂತ ಕಳೆದ ವರ್ಷದ ಬೇಸಗೆ ಯಲ್ಲಿ ನೀರಿಗಾಗಿ ಪರಿತಪಿಸಿದ್ದೇ ಜಾಸ್ತಿ. ಈ ವರ್ಷದ ಮಟ್ಟಿಗೆ ಬಹುತೇಕ ಕಡೆ ಕುಡಿಯುವ ನೀರಿನ ಸಮಸ್ಯೆ ಎದುರಾಗಿರಲಿಲ್ಲ. ಇದೇ ರೀತಿ ಬೇಸಗೆಯಲ್ಲಿನ ಜಲಕ್ಷಾಮ ದೂರಗೊಳಿಸಬೇಕಾದರೆ ಎಲ್ಲರ ಮನೆ-ಕಟ್ಟಡಗಳಲ್ಲಿಯೂ ಮಳೆಕೊಯ್ಲು ಅಳವಡಿಕೆಯಾಗಬೇಕು.
ಮಳೆಕೊಯ್ಲು ಅಳವಡಿಸಿಕೊಂಡವರೆಲ್ಲ ಈ ಬಾರಿ ತಮ್ಮ ಮನೆಯ ಬಾವಿ, ಬೋರ್‌ವೆಲ್‌ಗಳಲ್ಲಿ ನೀರಿನ ಮಟ್ಟ ಹೆಚ್ಚಳವಾಗಿರುವುದಕ್ಕೆ ಖುಷಿಯಾಗಿದ್ದಾರೆ. ಈ ಬೇಸಗೆಯಲ್ಲಿ ನೀರಿನ ಅಭಾವ ಎದುರಾದರೂ ತಮ್ಮ ಮನೆಯ ಬಾವಿಯಲ್ಲಿ ಕಡಿಮೆಯಾಗದು ಎಂಬ ವಿಶ್ವಾಸವನ್ನು ಮೊದಲೇ ಹೊಂದಿದ್ದರು.
Related Articles
Advertisement
ಈ ಬಾರಿಯೂ ನಿರಂತರ ಜಾಗೃತಿ
ನಿರ್ಮಿತಿ ಕೇಂದ್ರದ ಮುಖಾಂತರ ಒಂದು ವರ್ಷದಿಂದ ನಿರಂತರವಾಗಿ ಮಳೆಕೊಯ್ಲು ಜಾಗೃತಿ ನಡೆಯುತ್ತಿದೆ. ಉದಯವಾಣಿಯ “ಮನೆ ಮನೆಗೆ ಮಳೆಕೊಯ್ಲು’ ಅಭಿಯಾನಕ್ಕೆ ಪೂರಕವಾಗಿ ಮಳೆಕೊಯ್ಲು ಅಳವಡಿಸುವುದರ ಬಗ್ಗೆ ಉಚಿತವಾಗಿಯೇ ಪ್ರಾತ್ಯಕ್ಷಿಕೆ ನೀಡಲಾಗಿದೆ. ಯಾರೇ ಮಾಹಿತಿಗಾಗಿ ಕರೆದರೂ ನಿರ್ಮಿತಿ ಕೇಂದ್ರ ಉಚಿತವಾಗಿ ಮಾಹಿತಿ ಒದಗಿಸಲಿದೆ.
-ರಾಜೇಂದ್ರ ಕಲ್ಬಾವಿ, ಯೋಜನಾ ನಿರ್ದೇಶಕರು ನಿರ್ಮಿತಿ ಕೇಂದ್ರ ಸುರತ್ಕಲ್ ಮಳೆಕೊಯ್ಲು ಅಳವಡಿಸಿ
ಕಳೆದ ಬೇಸಗೆಯಲ್ಲಿ ನೀರಿಗಾಗಿ ಪರಿತಪಿಸುವ ಹಾಗಾಗಿತ್ತು. ಈ ವರ್ಷ ನೀರಿನ ಸಮಸ್ಯೆ ಉಂಟಾಗಿಲ್ಲ. ಆದಾಗ್ಯೂ ಮುಂದೆ ಹೇಗೆಂದು ಹೇಳಲಾಗುವುದಿಲ್ಲ. ಜನ ಈಗಿಂದಲೇ ನೀರು ಉಳಿತಾಯದ ದಾರಿಗಳನ್ನು ಕಂಡುಕೊಳ್ಳಬೇಕು. “ಉದಯವಾಣಿ’ ಕಳೆದ ವರ್ಷ ಆರಂಭಿಸಿದ್ದ ಮನೆ-ಮನೆಗೆ ಮಳೆಕೊಯ್ಲು ಅಭಿಯಾನಕ್ಕೆ ಜನ ಸ್ಪಂದನೆ ನೀಡಿದ ರೀತಿ ಉತ್ತಮವಾಗಿತ್ತು. ಈ ಬಾರಿಯೂ ಮಳೆ ನೀರಿಂಗಿಸಲು ಇದು ಪ್ರಶಸ್ತವಾದ ಸಮಯ. ಜನರು ಈ ವರ್ಷ ಹೆಚ್ಚಿನ ಸಂಖ್ಯೆಯಲ್ಲಿ ನೀರಿಂಗಿಸುವುದು, ಮಳೆಕೊಯ್ಲು ಅಳವಡಿಸುವುದಕ್ಕೆ ಮುಂದಾಗಬೇಕು.
-ಡಾ| ಆರ್. ಸೆಲ್ವಮಣಿ,
ದ.ಕ. ಜಿಲ್ಲಾ ಪಂಚಾಯತ್ ಸಿಇಒ