Advertisement

ನಾಳೆ ಮೈಕ್ರೋಸಾಫ್ಟ್ ನ ಇಂಟರ್‌ನೆಟ್‌ ಎಕ್ಸ್‌ಪ್ಲೋರರ್‌ಗೆ ಗುಡ್‌ ಬೈ

12:00 AM Jun 14, 2022 | Team Udayavani |

ವಾಷಿಂಗ್ಟನ್‌: ಒಂದು ಕಾಲದಲ್ಲಿ ಎಲ್ಲರ ಕಂಪ್ಯೂಟರ್‌ನಲ್ಲಿ ಮಿಂಚಿದ್ದ ಮೈಕ್ರೋಸಾಫ್ಟ್ ನ  ಇಂಟರ್‌ನೆಟ್‌ ಎಕ್ಸ್‌ಪ್ಲೋರರ್‌ ಜೂ.15ರಂದು ತನ್ನ ಕಾರ್ಯವನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಲಿದೆ.

Advertisement

1995ರಲ್ಲಿ ಕಂಪ್ಯೂಟರ್‌ಗಳಿಗೆ ಹೆಜ್ಜೆ ಇಟ್ಟಿದ್ದ ಎಕ್ಸ್‌ ಪ್ಲೋರರ್‌ 2003ಕ್ಕಾಗಲೇ ಭಾರೀ ಪ್ರಸಿದ್ಧತೆ ಪಡೆದುಕೊಂಡಿತ್ತು. ವಿಶ್ವದ ಶೇ.95 ಕಂಪ್ಯೂಟರ್‌ಗಳಲ್ಲಿ ಎಕ್ಸ್‌ಪ್ಲೋರರ್‌ ಬಳಕೆಗೆ ಬಂದಿತ್ತು.

ಆದರೆ ಅನಂತರದ ದಿನಗಳಲ್ಲಿ ಬೇರೆ ಬೇರೆ ಬ್ರೌಸರ್‌ಗಳಿಂದ ಭಾರೀ ಪ್ರಮಾಣದಲ್ಲಿ ಸ್ಪರ್ಧೆ ಏರ್ಪಟ್ಟಿದ್ದು, ಬಳಕೆ ಕಡಿಮೆಯಾಗಿತ್ತು. ಮೈಕ್ರೋಸಾಫ್ಟ್ ಸಂಸ್ಥೆ ಹೊಸದಾಗಿ ಎಡ್ಜ್ ಆರಂಭಿಸಿದ ಹಿನ್ನೆಲೆ 2016ರಿಂದ ಎಕ್ಸ್‌ಪ್ಲೋರರ್‌ಗೆ ಅಪ್‌ಡೇಟ್‌ಗಳನ್ನು ನಿಲ್ಲಿಸಿತ್ತು.

ಇದೀಗ ಎಕ್ಸ್‌ ಪ್ಲೋರರ್‌ ಕೆಲಸವನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಲಾಗುತ್ತಿದೆ. ಎಡ್ಜ್ ಬ್ರೌಸರ್‌ ಎಕ್ಸ್‌ಪ್ಲೋರರ್‌ ಗಿಂತ ವೇಗದ ಬ್ರೌಸರ್‌ ಆಗಿದೆ ಎಂದು ಮೈಕ್ರೋಸಾಫ್ಟ್ ಸಂಸ್ಥೆ ಹೇಳಿಕೊಂಡಿದೆ.

Advertisement

Udayavani is now on Telegram. Click here to join our channel and stay updated with the latest news.

Next