Advertisement

ಟೈಮ್‌ ಪ್ಲೀಸ್‌! ಗಂಟೆಯ ನೆಂಟನ ಹೊಸ ಅವತಾರ!

07:41 PM May 28, 2019 | sudhir |

ಹಿಂದೆಲ್ಲಾ ವಾಚ್‌ಗಳು ಸಮಯ ಹೇಳುವುದಕ್ಕಷ್ಟೇ ಸೀಮಿತವಾಗಿದ್ದವು. ಇಂದಿನ ವಾಚುಗಳು ಸಮಯವನ್ನಷ್ಟೇ ಹೇಳುವುದಿಲ್ಲ. ತೊಟ್ಟವನ ಸೋಷಿಯಲ್‌ ಸ್ಟೇಟಸ್ಸು, ಕ್ರೀಡಾ ಮನೋಬಾವ, ಫ್ಯಾಷನ್‌ ಅಭಿರುಚಿ ಇನ್ನೂ ಹತ್ತು ಹಲವು ಸಂಗತಿಗಳನ್ನು ಸೂಚಿಸುತ್ತದೆ.

Advertisement

ಉಡುಪಿಗೊಂಡು ವಾಚ್‌
ಕೈಗಡಿಯಾರ ಎಂಬುದು ಪುರುಷರಿಗೆ ಮತ್ತು ಸ್ತ್ರೀಯರಿಗೆ ಪ್ರತ್ಯೇಕವಾಗಿ ಬರುತ್ತಿತ್ತು. ಆದರೀಗ ಪುರುಷರು ಮತ್ತು ಮಹಿಳೆಯರು ಇಬ್ಬರೂ ತೊಡಬಹುದಾದ ಯುನಿಸೆಕÕ… ಕೈಗಡಿಯಾರಗಳು ಮಾರುಕಟ್ಟೆಯಲ್ಲಿವೆ. ಇಂಥ ವಾಚ್‌ಗಳಲ್ಲಿ ನ್ಪೋರ್ಟ್ಸ್ ವಾಚ್‌, ಬಿಗ್‌ ಡಯಲ್‌ ವಾಚ್‌, ಡಿಜಿಟಲ್‌ ವಾಚ್‌, ವಾಟರ್‌ಪೂ›ಫ್ ವಾಚ್‌, ರೇಡಿಯಂ ವಾಚ್‌, ಹೀಗೆ ಅನೇಕ ಬಗೆಯ ವಾಚ್‌ಗಳು ಸಿಗುತ್ತವೆ. ಹೂ ಬಳ್ಳಿಯಂತೆ ಕಾಣುವ ವಾಚ್‌, ಬಳೆಯಂತೆ ಕಾಣುವ ವಾಚ್‌, ಚಂದಿರ ನಕ್ಷತ್ರದಂತೆ ಕಾಣುವ ವಾಚ್‌, ಸೂರ್ಯನ ಮುಖದಲ್ಲಿ ಮೂಡಿದ ವಾಚ್‌, ಕನ್ನಡಿಯ ಮೇಲೆ ಮುಳ್ಳುಗಳಿರುವ ವಾಚ್‌, ತ್ರಿಕೋನ- ಚೌಕ- ವೃತ್ತಾಕಾರ ಹೀಗೆ ಬಗೆ-ಬಗೆಯ ಆಕೃತಿಯ ಮತ್ತು ವಿನ್ಯಾಸದ ವಾಚ್‌ಗಳಿವೆ.

ಆಫೀಸ್‌, ಮೀಟಿಂಗ್‌, ಕಾನ್ಫರೆ®Õ…, ಸಭೆ ಸಮಾರಂಭ ಹೀಗೆ ಸಂದರ್ಭಕ್ಕೆ ತಕ್ಕಂತೆ ತೊಡುವ ವಾಚ್‌ಗಳೂ ಲಭ್ಯ. ಅಲ್ಲದೆ ಫಾರ್ಮಲ್ಸ… ತೊಟ್ಟಾಗ ಅದರ ಜೊತೆ ಹೆಚ್ಚಾಗಿ ಯುನಿಸೆಕÕ… ವಾಚ್‌ಗಳನ್ನು ಮಹಿಳೆಯರು ತೊಡುತ್ತಾರೆ. ಸಾಂಪ್ರದಾಯಿಕ ಉಡುಗೆ ಜೊತೆ ಮಹಿಳೆಯರ ವಾಚ್‌ಗಳೇ ಚೆನ್ನಾಗಿ ಕಾಣಿಸುವುದರಿಂದ ಚೂಡಿದಾರ್‌, ಸಲ್ವಾರ್‌ ಕಮೀಜ್‌, ಸೀರೆ, ಡ್ರೆಸ್‌ ಹಾಗೂ ಗೌನ್‌ ಜೊತೆ ಸಣ್ಣಗಿನ ಸ್ಟ್ರಾಪ್‌ ಇರುವ, ಚಿಕ್ಕ ಡಯಲ್‌ನ ಮಹಿಳೆಯರ ವಾಚ್‌ಅನ್ನು ತೊಡುತ್ತಾರೆ.

ಟೈಮ್‌ ಮತ್ತು ಫ್ಯಾಷನ್‌
ಜಿಮ್‌ಗೆ ಹೋಗುವಾಗ ನ್ಪೋರ್ಟ್ಸ್ ವಾಚ್‌, ಡಿಜಿಟಲ್‌ ವಾಚ್‌, ಟೈಮರ್‌ (ಸ್ಟಾಪ್‌ ಕ್ಲಾಕ್‌) ಉಳ್ಳ ವಾಚ್‌, ವಾಟರ್‌ಪೂ›ಫ್ ವಾಚ್‌ ಮುಂತಾದ ಬಗೆಯ ವಾಚ್‌ ತೊಡಬಹುದು. ಏಕೆಂದರೆ ಯಾವುದೇ ಕ್ರೀಡೆ, ವ್ಯಾಯಾಮವಾಗಲಿ ನೀರು ಅಥವಾ ಬೆವರು ತಾಗಿ ಕೈಗಡಿಯಾರ ಕೆಡಬಾರದಲ್ಲವೆ? ಅಲ್ಲದೆ ವಾಚ್‌ನಲ್ಲಿ ಟೈಮರ್‌ ಇದ್ದರೆ ವ್ಯಾಯಾಮ ಅಥವಾ ಓಟದ ಕ್ರೀಡೆಯಲ್ಲಿ ತಮ್ಮ ಸಾಮರ್ಥ್ಯವನ್ನು ತಿಳಿಯಲು ಸಹಕಾರಿ.

ನ್ಪೋರ್ಟ್ಸ್ ವಾಚ್‌ ಕೇವಲ ಕ್ರೀಡಾಪಟುಗಳಿಗಷ್ಟೇ ಸೀಮಿತವಾಗಿಲ್ಲ. ಮಾರುಕಟ್ಟೆಯಲ್ಲಿರುವ ಕೆಲ ಅತ್ಯಾಧುನಿಕ ಕೈಗಡಿಯಾರಗಳು ಹೃದಯ ಬಡಿತ, ರಕ್ತದೊತ್ತಡ, ಬರ್ನ್ ಆದ ಕ್ಯಾಲೊರಿಗಳು, ದೇಹದ ತಾಪಮಾನ, ಉಸಿರಾಟದಲ್ಲಿ ವ್ಯತ್ಯಯ ಮುಂತಾದ ಮಾಹಿತಿಯನ್ನೂ ನೀಡಬಲ್ಲವು. ಆರೋಗ್ಯದ ಬಗ್ಗೆ ಕಾಳಜಿ ಇರುವವರಿಗೆ ಇಂಥ ಕೈಗಡಿಯಾರಗಳು ಬಹಳ ಉಪಯುಕ್ತ. ನ್ಪೋರ್ಟ್ಸ್ ವಾಚುಗಳನ್ನು ಕ್ರೀಡೆ, ಫಿಟ್‌ನೆಸ್‌ ಮತ್ತು ಆರೋಗ್ಯದ ಕಾರಣಗಳಿಗೆ ಹೊರತಾಗಿ ಫ್ಯಾಷನ್‌ ಸ್ಟೇಟ್‌ಮೆಂಟ್‌ ಆಗಿಯೂ ತೊಡುತ್ತಾರೆ. ಅವರಲ್ಲಿ ಕಾಲೇಜು ತರುಣರೇ ಹೆಚ್ಚು.

Advertisement

ಸಮಯ ಮಾತ್ರವಲ್ಲ ಸ್ಟೇಟಸ್ಸನ್ನೂ ಸೂಚಿಸುತ್ತವೆ
ಕಾಲ ಕಳೆದಂತೆ ಅನುಕೂಲತೆಗಿಂತ ಹೆಚ್ಚಾಗಿ ಈ ಕೈಗಡಿಯಾರಗಳು ಪ್ರತಿಷ್ಟೆಯ ಸಂಕೇತವಾಗಿ ಬದಲಾಗುತ್ತಿವೆ. ದೊಡ್ಡ ದೊಡ್ಡ ಬ್ರಾಂಡ್‌ಗಳ ಕೈಗಡಿಯಾರ ತೊಡುವುದೂ ಫ್ಯಾಷನ್‌ ಟ್ರೆಂಡ್‌. ಇನ್ನೂ ಕೆಲವರು ಕಸ್ಟಮೈÓx… ವಾಚ್‌ಗಳನ್ನು ಅಂದರೆ ತಮಗೆ ಬೇಕಾದ ರೀತಿಯಲ್ಲಿ ವಾಚ್‌ಅನ್ನು ಆರ್ಡರ್‌ ನೀಡಿ ಮಾಡಿಸಿಕೊಳ್ಳುತ್ತಾರೆ. ಅದರದ್ದೇ ಪ್ರತ್ಯೇಕ ಮಾರುಕಟ್ಟೆ ಇದೆ. ಸೆಲಬ್ರಿಟಿಗಳು, ನಟ-ನಟಿಯರು, ಕ್ರೀಡಾಪಟುಗಳು, ರಾಜಕಾರಣಿಗಳು, ಉದ್ಯಮಿಗಳು ನುರಿತ ವಾಚ್‌ ವಿನ್ಯಾಸಕರಿಂದ ಇಂಥ ವಾಚ್‌ಗಳನ್ನು ಮಾಡಿಸಿಕೊಂಡು ತೊಡುವುದು ಸ್ಟೇಟಸ್‌ ಸಂಕೇತ. ಅಲ್ಲದೆ ಇಂಥ ವಾಚ್‌ಗಳನ್ನು ಪ್ರೀತಿಪಾತ್ರರಿಗೆ ಉಡುಗೊರೆಯಾಗಿಯೂ ನೀಡುತ್ತಾರೆ.

– ಅದಿತಿಮಾನಸ ಟಿ. ಎಸ್‌.

Advertisement

Udayavani is now on Telegram. Click here to join our channel and stay updated with the latest news.

Next