Advertisement

ಉನ್ನತ ಶಿಕ್ಷಣಕ್ಕೆ ಟೈಮ್‌ ಫೌಂಡೇಷನ್‌ ಸಹಕಾರಿ

01:02 PM May 19, 2019 | Team Udayavani |

ರಾಣಿಬೆನ್ನೂರ: ಇಂದಿನ ಆಧುನಿಕತೆಯ ತಂತ್ರಜ್ಞಾನ ಯುಗದಲ್ಲಿ ಪಾಲಕರು ಮತ್ತು ಪೋಷಕರು ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಿ ಅವರ ಮುಂದಿನ ಭವಿಷ್ಯಕ್ಕಾಗಿ ಕನಸು ಕಾಣುತ್ತಿರುತ್ತಾರೆ. ಅವರ ಅನುಕೂಲಕ್ಕಾಗಿಯೇ ನಗರದಲ್ಲಿ ಇದೀಗ ಟೈಮ್‌ ಫೌಂಡೇಷನ್‌ ಎಂಬ ಸಂಸ್ಥೆಯನ್ನು ಪ್ರಾರಂಭಿಸಲಾಗಿದೆ ಎಂದು ಟೈಮ್‌ ಫೌಂಡೇಷನ್‌ ಆಡಳಿತಾಧಿಕಾರಿ ನಿರಂಜನ ಪೂಜಾರ ಹೇಳಿದರು.

Advertisement

ಶನಿವಾರ ನಗರದ ಉನ್ನತಿ ಪದವಿ ಪೂರ್ವ ಕಾಲೇಜಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇಂತಹ ಸಂದರ್ಭದಲ್ಲಿ ಕೆಲ ಪಾಲಕರು ಮತ್ತು ಪೋಷಕರು ತಮ್ಮ ಮಕ್ಕಳಿಗೆ ವೈದ್ಯಕೀಯ ಮತ್ತು ಐಐಟಿ ಶಿಕ್ಷಣ ಕೊಡಿಸುವ ಗುರಿಯನ್ನು ಹೊಂದಿರುತ್ತಾರೆ. ದೇಶದ ಪ್ರತಿಷ್ಠಿತ ಸಂಸ್ಥೆಗಳಾದ ಐಐಟಿ ಮತ್ತು ಎಐಐಎಂಎಸ್‌ ಶಿಕ್ಷಣ ಪಡೆಯಬೇಕು ಎಂಬುದು ಪ್ರತಿ ವಿದ್ಯಾರ್ಥಿಗಳ ಕನಸಾಗಿರುತ್ತದೆ. ಅಂತಹ ವಿದ್ಯಾರ್ಥಿಗಳ ಕನಸು ನನಸು ಮಾಡುವ ಉದ್ದೇಶದಿಂದ ಈ ಸಂಸ್ಥೆಯನ್ನು ಸಾಮಾಜಿಕ ಕಳಕಳಿಯ ಹಿತದೃಷ್ಟಿಯಿಂದ ನಗರದಲ್ಲಿ ತೆರೆಯಲಾಗಿದೆ ಎಂದರು. ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಬಸವರಾಜ ಪಾಟೀಲ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next