Advertisement

ಭಾರತ ವಿಶ್ವಗುರು ಆಗುವ ಕಾಲ ಸನ್ನಿಹಿತ: ಶಾಸಕ ರಾಜೇಶ್‌ ನಾೖಕ್‌

10:10 PM Jun 02, 2019 | Team Udayavani |

ಬಂಟ್ವಾಳ : ಭಾರತ ವಿಶ್ವಗುರು ಆಗುವ ಕಾಲ ಸನ್ನಿಹಿತವಾಗಿದ್ದು, ಪ್ರಧಾನಿ ನರೇಂದ್ರ ಮೋದಿ ಅವರನ್ನು ಭಾರತ ಅಭೂತಪೂರ್ವಕ ಬೆಂಬಲಿಸಿದ್ದೇ ಇದಕ್ಕೆ ನಿದರ್ಶನ ಎಂದು ಬಂಟ್ವಾಳ ಶಾಸಕ ರಾಜೇಶ್‌ ನಾೖಕ್‌ ಉಳಿಪ್ಪಾಡಿಗುತ್ತು ಹೇಳಿದರು.

Advertisement

ಮೇ 30ರಂದು ದೇಶದ ಪ್ರಧಾನಿ ಯಾಗಿ ನರೇಂದ್ರ ಮೋದಿ ಅವರು 2ನೇ ಬಾರಿ ಪ್ರಮಾಣವಚನ ಸ್ವೀಕರಿಸಿದ ಸಂಭ್ರಮದ ಅಂಗವಾಗಿ ಸ್ಥಾಪಿಸಲಾದ ಸಜಿಪ ಜನಸೇವಾ ಚಾರಿಟೆಬಲ್‌ ಟ್ರಸ್ಟ್‌ ಉದ್ಘಾಟಿಸಿ ಅವರು ಮಾತನಾಡಿದರು. ಬಿಜೆಪಿ ಮುಖಂಡ ಕೆ. ಹರಿಕೃಷ್ಣ ಬಂಟ್ವಾಳ ಮಾತನಾಡಿ, ಜಾತಿ, ಧರ್ಮ, ಭಾಷೆ, ಮತೀಯ ರಾಜಕಾರಣಕ್ಕೆ ಮುಕ್ತಿ ನೀಡಿದ ಕೀರ್ತಿ ಪ್ರಧಾನಿ ನರೇಂದ್ರ ಮೋದಿಯವರದ್ದಾಗಿದೆ ಎಂದರು. ಸಜಿಪ ಶ್ರೀ ಷಣ್ಮುಖ ಸುಬ್ರಹ್ಮಣ್ಯ ದೇವಸ್ಥಾನದ ಆಡಳಿತ ಮೊಕ್ತೇಸರ ಮುಳ್ಳುಂಜ ವೆಂಕಟೇಶ್ವರ ಭಟ್‌ ಅಧ್ಯಕ್ಷತೆ ವಹಿಸಿದ್ದರು.

ಜಿ.ಪಂ. ಸದಸ್ಯ ರವೀಂದ್ರ ಕಂಬಳಿ, ಮಂಗಳೂರು ಕ್ಷೇತ್ರ ಬಿಜೆಪಿ ಸಮಿತಿ ಅಧ್ಯಕ್ಷ ಸಂತೋಷ್‌ ಕುಮಾರ್‌ ರೈ, ಬಂಟ್ವಾಳ ಬಿಜೆಪಿ ಉಪಾಧ್ಯಕ್ಷ ಶ್ರೀಕಾಂತ ಶೆಟ್ಟಿ , ಪಾಣೆಮಂಗಳೂರು ರೈತರ ಸೇವಾ ಸಹಕಾರಿ ಬ್ಯಾಂಕ್‌ ಅಧ್ಯಕ್ಷ ಜಯಶಂಕರ ಬಾಸ್ರಿತ್ತಾಯ, ಎಂ. ಸುಬ್ರಹ್ಮಣ್ಯ ಭಟ್‌, ಸಜಿಪಮೂಡ ಗ್ರಾ.ಪಂ. ಅಧ್ಯಕ್ಷ ವಿಶ್ವನಾಥ ಬೆಳ್ಚಡ ಕೂಡೂರು, ಸೀತಾರಾಮ ಶೆಟ್ಟಿ, ವಿಜಯಶಂಕರ ರೈ, ರಾಧಾಕೃಷ್ಣ ಆಳ್ವ, ಪ್ರದೀಪ್‌ ಶೆಟ್ಟಿ, ಸುನೀತಾ ಶೆಟ್ಟಿ, ಚಿನ್ನಯ್ಯ ಸಾಲ್ಯಾನ್‌, ಸುರೇಶ್‌ ಸಾರ್ತಾವು ಉಪಸ್ಥಿತರಿದ್ದರು.

ಟ್ರಸ್ಟ್‌ ಸದಸ್ಯರಾದ ಮಹೇಶ್‌ ಕಿಲ್ಲೆ, ದೀಪಕ್‌, ಗಣೇಶ್‌ ಕಾರಾಜೆ, ಲೋಹಿತ್‌ ಪನೋಲಿಬೈಲು, ವಿಟuಲ್‌ ತಲೆಮೊಗರು, ನವೀನ್‌ ಅಂಚನ್‌, ಯಶವಂತ ನಗ್ರಿ, ಹರೀಶ್‌ ಬಂಗೇರ, ನವೀನ್‌ ಸುವರ್ಣ, ಭಾಸ್ಕರ, ಲಿಂಗಪ್ಪ ದೋಟ ಮೊದಲಾದವರು ಸಹಕರಿಸಿದರು. ಇದೇ ಸಂದರ್ಭ ಸಜಿಪನಡು, ಸಜಿಪಪಡು, ಸಜಿಪಮೂಡ ಹಾಗೂ ಸಜಿಪಮುನ್ನೂರು ಗ್ರಾಮಗಳ 400ಕ್ಕೂ ಹೆಚ್ಚು ಶಾಲಾ ಮಕ್ಕಳಿಗೆ ಪುಸ್ತಕ ವಿತರಿಸಲಾಯಿತು.

ಟ್ರಸ್ಟ್‌ ಅಧ್ಯಕ್ಷ ಯಶವಂತ ದೇರಾಜೆ ಪ್ರಸ್ತಾವಿಸಿ, ಸ್ವಾಗತಿಸಿ, ಆರ್ಥಿಕವಾಗಿ ಹಿಂದುಳಿದವರ ಸೇವೆಗೆ ಟ್ರಸ್ಟ್‌ ಸದಾ ಸಿದ್ಧವಾಗಿದ್ದು, ಪ್ರತಿ ತಿಂಗಳು ಜನೋಪಯೋಗಿ ಕಾರ್ಯಕ್ರಮ ಆಯೋಜಿಸಲಿದೆ ಎಂದರು. ಸುರೇಶ್‌ ಬಂಗೇರ ವಂದಿಸಿ, ವಸಂತ ಪೆರಾಜೆ ಕಾರ್ಯಕ್ರಮ ನಿರೂಪಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next