ಮುಂಬಯಿ: ತಿಲಕ್ ನಗರ ಪೆಸ್ತೂಮ್ ಸಾಗರ್ ಕರ್ನಾಟಕ ಸಂಘದ ಮಹಿಳಾ ವಿಭಾಗದ ವತಿಯಿಂದ ವಿಶ್ವ ಮಹಿಳಾ ದಿನಾಚರಣೆಯನ್ನು ಇತ್ತೀಚೆಗೆ ಚೆಂಬೂರ್‌ನ ನ್ಯಾಷನಲ್ ಸೊಸೈಟಿ ಫಾರ್ ಈಕ್ವಲ್ ಅಪಾರ್‌ಚ್ಯುನೇಟಿಸ್ ಫಾರ್ ಹ್ಯಾಂಡಿಕ್ಯಾಪ್ (ಎನ್‌ಎಎಸ್‌ಇಒಎಚ್) ವಿಕಲ ಚೇತನ ಮಕ್ಕಳೊಂದಿಗೆ ನಡೆಸಿದರು.
ಈ ಸಂದರ್ಭದಲ್ಲಿ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ನಾಗವೇಣಿ ಎಸ್. ಶೆಟ್ಟಿ ಅವರು ಮಾತನಾಡಿ, ಈ ರೀತಿಯ ಕಾರ್ಯಕ್ರಮವನ್ನು ಮಾಡುವುದರಿಂದ ಸಮಾಜದ ಬುದ್ಧಿಮಾಂದ್ಯ ಮತ್ತು ವಿಕಲ ಚೇತನ ಮಕ್ಕಳ ಭವಿಷ್ಯದ ಶ್ರೇಯಸ್ಸಿಗೆ ಪ್ರೋತ್ಸಾಹ ನೀಡಿದಂತಾಗುತ್ತದೆ. ಇಂತಹ ಕಾರ್ಯಕ್ರಮಗಳಿಗೆ ಎಲ್ಲರ ಸಹಕಾರ ಪ್ರೋತ್ಸಾಹವಿರಲಿ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ತಿಲಕ್ ನಗರ ಪೆಸ್ತೂಮ್ ಸಾಗರ್ ಕರ್ನಾಟಕ ಸಂಘದ ಅಧ್ಯಕ್ಷ ರಾಮಣ್ಣ ಬಿ. ದೇವಾಡಿಗ, ಗೌರವ ಸಲಹೆಗಾರ ಹಾಗೂ ಕಟ್ಟಡ ಸಮಿತಿಯ ಗೌರವ ಕಾರ್ಯದರ್ಶಿ ಶ್ರೀಧರ ಶೆಟ್ಟಿ, ನಿಕಟಪೂರ್ವ ಅಧ್ಯಕ್ಷ ನಿತ್ಯಾನಂದ ಶೆಟ್ಟಿ, ಮಹಿಳಾ ವಿಭಾಗದ ಗೌರವ ಕಾರ್ಯದರ್ಶಿ ಮಾಲತಿ ಮೊಲಿ, ಉಪ ಕಾರ್ಯಾಧ್ಯಕ್ಷೆ ಶಾಲಿನಿ ಶೆಟ್ಟಿ,
ಜತೆ ಕಾರ್ಯದರ್ಶಿ ಹೇಮಲತಾ ಶೆಟ್ಟಿ, ಸುಧಾ ರಾವ್,ಚಂದ್ರಾ ಶೆಟ್ಟಿ, ಹರಿಣಾಕ್ಷೀ ಶೆಟ್ಟಿ, ಆಶಾ ಶೆಟ್ಟಿ, ಪ್ರಮೀಳಾ ಶೆಟ್ಟಿ, ರಾಗಿಣಿ ಶೆಟ್ಟಿ, ವೇದಾವತಿ ಶೆಟ್ಟಿ, ನಿರ್ಮಲಾ ಆರ್. ದೇವಾಡಿಗ, ಕುಸುಮಾ ಬಂಗೇರ, ಶಕುಂತಳಾ ಶೆಟ್ಟಿ ಉಪಸ್ಥಿತರಿದ್ದರು.
ಚೆಂಬೂರ್‌ನ ನ್ಯಾಷನಲ್ ಸೊಸೈಟಿ ಫಾರ್ ಈಕ್ವಲ್ ಅಪಾರ್‌ಚ್ಯುನೇಟಿಸ್ ಫಾರ್ ಹ್ಯಾಂಡಿ ಕ್ಯಾಪ್ ಇದರ ಡೈರೆಕ್ಟರ್ ಜನರಲ್ ಯೋಗೇಂದ್ರ ಶೆಟ್ಟಿ ಅವರು ಸುಮಾರು 170 ಬುದ್ಧಿಮಾಂದ್ಯ ಮತ್ತು ವಿಕಲ ಚೇತನ ಮಕ್ಕಳಿಗೆ ಅವರವರ ಬುದ್ಧಿಗೆ, ಸಾಮರ್ಥ್ಯಕ್ಕೆ ಅನುಗುಣವಾಗಿ ವಿಶೇಷ ತರಬೇತಿ ನೀಡಿ, ಉದ್ಯೋಗ ಅವಕಾಶ ಮಾಡಿಕೊಡುವಂತಹ ಮಹತ್ತರ ವಾದ ಸೇವೆಯಲ್ಲಿ ತಮ್ಮನ್ನು ತೊಡಗಿಸಿ
ಕೊಂಡಿರುವುದಾಗಿ ತಿಳಿಸಿದರು.
ಸಂಘದ ಮಹಿಳಾ ವಿಭಾಗ ಹಾಗೂ ಕಾರ್ಯಕಾರಿ ಸಮಿತಿಯ ಸದಸ್ಯರು ಮಕ್ಕಳೊಂದಿಗೆ ಕಾಲ ಕಳೆದು, ಸುಮಾರು 180ಕ್ಕೂ ಅಧಿಕ ಮಕ್ಕಳಿಗೆ ಭೋಜನದ ವ್ಯವಸ್ಥೆಯನ್ನು ಆಯೋಜಿಸಿದ್ದರು. ಅಲ್ಲದೆ ಮಕ್ಕಳ ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿ ಸಂಸ್ಥೆಯ ಕಾರ್ಯವನ್ನು ಅಭಿನಂದಿಸಿದರು. ದೇಶ ದಲ್ಲಿ ಸುಮಾರು 7 ಕೋಟಿ ಮಂದಿ ಅಂಗವಿಕಲ ಮಕ್ಕಳಿದ್ದಾರೆ ಎಂಬ ಮಾಹಿತಿಯನ್ನು ನೀಡಿದ ಯೋಗೇಂದ್ರ ಶೆಟ್ಟಿ, ನಿಮ್ಮ ಹಬ್ಬ, ಆಚರಣೆಗಳು ಸಮಾಜಕ್ಕೆ ಒಂದು ಮಾದರಿಯಾಗಿರಲಿ. ಇಂತಹ ಸಂಸ್ಥೆಗಳಿಗೆ ಸದಾ ಸಹಕರಿಸುವ ಮನೋಭಾವ ನಿಮ್ಮದಾಗಲಿ ಎಂದು ನುಡಿದು ಶುಭ ಹಾರೈಸಿದರು.