Advertisement

ತಿಲಕ್‌ ನಗರ ಪೆಸ್ತೂಮ್‌ ಸಾಗರ್‌ ಕರ್ನಾಟಕ ಸಂಘ: ವಾರ್ಷಿಕೋತ್ಸವ

12:20 PM Feb 02, 2018 | Team Udayavani |

ಮುಂಬಯಿ: ತುಳು-ಕನ್ನಡ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಈ ಕರ್ಮಭೂಮಿಯಲ್ಲಿ ಅನೇಕ ಸಂಘಟನೆಗಳು ಹಾಗೂ ತುಳು ಕನ್ನಡಿಗರ ಸಂಘಟನೆಗಳಿದ್ದು, ನಾವೆಲ್ಲರೂ ಒಂದೇ ಎಂಬ ಭಾವನೆ ನಮ್ಮಲ್ಲಿರಬೇಕು. ಜಾತಿ, ಮತ, ಭೇದವಿಲ್ಲದೆ ನಾವೆಲ್ಲರೂ ಒಗ್ಗಟ್ಟಾಗಿರಬೇಕು. ಇಂದಿನ ಕಾರ್ಯಕ್ರಮಕ್ಕೆ ಸಹಕರಿಸಿದ ಎಲ್ಲರಿಗೂ ವಂದನೆಗಳು. ಪ್ರತಿ ಕಾರ್ಯಕ್ರಮದಲ್ಲಿ ನಮಗೆ ಸಹಕರಿಸುತ್ತಿರುವ ಉದ್ಯಮಿಗಳಾದ ಸತೀಶ್‌ ಶೆಟ್ಟಿ ಹಾಗೂ ಶ್ರೀಧರ್‌ ಶೆಟ್ಟಿ ಅವರಿಗೆ ಕೃತಜ್ಞತೆಗಳನ್ನು ಸಲ್ಲಿಸುತ್ತಿದ್ದೇನೆ ಎಂದು ತಿಲಕ್‌ ನಗರ ಪೆಸ್ತೂಮ್‌ ಸಾಗರ್‌ ಕರ್ನಾಟಕ ಸಂಘದ ರಾಮಣ್ಣ ಬಿ. ದೇವಾಡಿಗ ಅವರು ನುಡಿದರು.

Advertisement

ಜ. 27ರಂದು ಗಣೇಶ್‌ ಮೈದಾನದಲ್ಲಿ ಸಂಜೆ ನಡೆದ ತಿಲಕ್‌ ನಗರ ಪೆಸ್ತೂಮ್‌ ಸಾಗರ್‌ ಕರ್ನಾಟಕ ಸಂಘ ಚೆಂಬೂರು ಇದರ 12 ನೇ ವಾರ್ಷಿಕೋತ್ಸವ ಸಂದರ್ಭದಲ್ಲಿ ಜರಗಿದ ಮಹಿಳಾ ವಿಭಾಗದ ಭಜನೆ, ಅರಸಿನ ಕುಂಕುಮ ಹಾಗೂ ಯಕ್ಷಗಾನ ಪ್ರದರ್ಶನದ ಮಧ್ಯೆ ನಡೆದ ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಂಘದ ಎಲ್ಲಾ ಕಾರ್ಯಕ್ರಮಳಿಗೆ ತುಳು- ಕನ್ನಡಿಗರ ಪ್ರೋತ್ಸಾಹ, ಸಹಕಾರ ಸದಾಯಿರಲಿ ಎಂದರು.

ಮುಖ್ಯ ಅತಿಥಿಯಾಗಿ ಪಾಲ್ಗೊಂಡ ಬಂಟರ ಸಂಘ ಕುರ್ಲಾ-ಭಾಂಡೂಪ್‌ ಪ್ರಾದೇಶಿಕ ಸಮಿತಿಯ ಸಿಎ ವಿಶ್ವನಾಥ್‌ ಶೆಟ್ಟಿ ಅವರು ಮಾತನಾಡಿ,  ಸಂಘದ 12ನೇ ವಾರ್ಷಿಕೋತ್ಸವಕ್ಕೆ ಶುಭಹಾರೈಸಿ, ಸಂಘಕ್ಕೆ ಸ್ವಂತ ಕಚೇರಿಯೊಂದು ಬೇಗನೆ ಆಗಲಿ ಎಂದು ಹಾರೈಸಿದರು.

ಮುಖ್ಯ ಅತಿಥಿಯಾಗಿ ಆಗಮಿಸಿದ ಭಾರತ್‌ ಬ್ಯಾಂಕಿನ ಭಾಂಡೂಪ್‌ ಶಾಖೆಯ ಮ್ಯಾನೇಜರ್‌  ಜಯಂತಿ ಪೂಜಾರಿ ಅವರು ಮಾತನಾಡಿ, ಏಕತೆ, ಪ್ರೀತಿ, ವಿಶ್ವಾಸ ಹಾಗೂ ಇತರರನ್ನು ಗೌರವದಿಂದ ಕಾಣುವುದು ಹಾಗೂ ಪರಸ್ಪರ ಸಹಾಯ, ಸಹಕಾರ ಮಾಡುವುದರಲ್ಲೂ ತುಳು-ಕನ್ನಡಿಗರು ಮೊದಲಿಗರು. ಸಂಘದ ಕಚೇರಿಯ ಕನಸು ಆದಷ್ಟು ಬೇಗನೆ ಈಡೇರಲಿ ಎಂದು ಹಾರೈಸಿದರು.

ಸ್ಟಾರ್‌ ಪ್ಲಸ್‌ ಚಾನೆಲ್‌ ಆಯೋಜಿಸಿದ ಗ್ರೇಟ್‌ ಇಂಡಿಯನ್‌ ಲಾಫ್ಟರ್‌ ಚಾಲೆಂಜ್‌ ಕಾರ್ಯಕ್ರಮದಲ್ಲಿ ಪ್ರಥಮ ರನ್ನರ್‌ ಅಪ್‌ ಪ್ರಶಸ್ತಿ ಪಡೆದು ತುಳು-ಕನ್ನಡಿಗರಿಗೆ ಹೆಮ್ಮೆ ತಂದಿದ್ದ ನಿತೇಶ್‌ ಬಿ. ಶೆಟ್ಟಿ ಅವರನ್ನು ಗಣ್ಯರ ಸಮ್ಮುಖದಲ್ಲಿ ಸಮ್ಮಾನಿಸಲಾಯಿತು. ಸಮ್ಮಾನ ಪಡೆದ ನಿತೇಶ್‌ ಶೆಟ್ಟಿ ಅವರು ಮಾತನಾಡಿ, ನನ್ನ ಯಶಸ್ಸಿಗೆ ನನ್ನ ತಂದೆ-ತಾಯಿ ಹಾಗೂ ಜನತೆಯ ಪ್ರೀತಿ, ವಿಶ್ವಾಸವೇ ಕಾರಣ. ನನ್ನನ್ನು ಗೌರವಿಸಿ ಸಮ್ಮಾನಿಸಿದ್ದ‌ಕ್ಕೆ ಸಂಘಕ್ಕೆ ಚಿರಋಣಿಯಾಗಿದ್ದೇನೆ  ಎಂದರು.

Advertisement

ವೇದಿಕೆಯಲ್ಲಿ ಗೌರವಾಧ್ಯಕ್ಷ ಸತೀಶ್‌ ಆರ್‌. ಶೆಟ್ಟಿ, ಉಪಾಧ್ಯಕ್ಷ ಚಂದ್ರಹಾಸ್‌ ಎನ್‌. ಶೆಟ್ಟಿ, ಗೌರವ ಕಾರ್ಯದರ್ಶಿ ಟಿ. ಆರ್‌. ಶೆಟ್ಟಿ, ಗೌರವ ಕೋಶಾಧಿಕಾರಿ ಅರುಣ್‌ ಕುಮಾರ್‌ ಶೆಟ್ಟಿ, ಗೌರವ ಜೊತೆ ಕಾರ್ಯದರ್ಶಿ ಸಂಪತ್‌ ಶೆಟ್ಟಿ, ಗೌರವ ಜೊತೆ ಕೋಶಾಧಿಕಾರಿ ಚಿತ್ರೇಶ್‌ ಎಸ್‌. ಶೆಟ್ಟಿ, ಸಾಂಸ್ಕೃತಿಕ ವಿಭಾಗದ ಕಾರ್ಯಾಧ್ಯಕ್ಷ ಸುರೇಶ್‌ ಆರ್‌. ಶೆಟ್ಟಿ, ಗೌರವ ಸಲಹೆಗಾರರಾದ ಶ್ರೀಧರ ಶೆಟ್ಟಿ, ಜಯ ಎ. ಶೆಟ್ಟಿ, ಹರಿಶ್ಚಂದ್ರ ಶೆಟ್ಟಿ, ನಿಕಟಪೂರ್ವ ಅಧ್ಯಕ್ಷ ನಿತ್ಯಾನಂದ ಶೆಟ್ಟಿ, ಮಾಜಿ ಅಧ್ಯಕ್ಷ ಶೇಖರ್‌ ಶೆಟ್ಟಿ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ನಾಗವೇಣಿ ಶ್ರೀಧರ್‌ ಶೆಟ್ಟಿ, ಗೌರವ ಕಾರ್ಯದರ್ಶಿ ಮಾಲತಿ ಜೆ. ಮೊಲಿ, ಗೌರವ ಕೋಶಾಧಿಕಾರಿ ಸಂಗೀತಾ ಸಿ. ಶೆಟ್ಟಿ, ಯುವ ವಿಭಾಗದ ಕಾರ್ಯಾಧ್ಯಕ್ಷೆ ಶಿಲ್ಪಾ ಶರತ್‌ ಶೆಟ್ಟಿ, ಉಪಾಧ್ಯಕ್ಷೆ ದೀಪಾ ಶೆಟ್ಟಿ, ಗೌರವ ಕಾರ್ಯದರ್ಶಿ ಕು| ಅಶ್ವಿ‌ತಾ ಶೆಟ್ಟಿ, ಗೌರವ ಕೋಶಾಧಿಕಾರಿ ಕು| ದೀಪಾ ಶೆಟ್ಟಿ, ಜತೆ ಕಾರ್ಯದರ್ಶಿ ಸೂರಜ್‌ ಶೆಟ್ಟಿ, ಜತೆ ಕೋಶಾಧಿಕಾರಿ ಧನ್‌ರಾಜ್‌ ಶೆಟ್ಟಿ ಉಪಸ್ಥಿತರಿದ್ದರು. ಜಯ ಎ. ಶೆಟ್ಟಿ ಅವರು ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು. ಅರುಣ್‌ ಕುಮಾರ್‌ ಶೆಟ್ಟಿ ವಂದಿಸಿದರು. ತುಳು-ಕನ್ನಡಿಗರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next