ಕೊಚ್ಚಿ: ಅಪ್ರಾಪ್ತ ವಯಸ್ಕ ಬಾಲಕಿಯನ್ನು ಮದುವೆಯಾಗುವುದಾಗಿ ನಂಬಿಸಿ ಅತ್ಯಾಚಾರಗೈದು ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿ ಕೇರಳದ ಟಿಕ್ ಟಾಕ್ ಸ್ಟಾರ್ ಓರ್ವನನ್ನು ಪೊಲೀಸರು ಬಂಧಿಸಿದ್ದಾರೆ. ಅಂಬಿ ಯಾನೆ ವಿಘ್ನೇಶ್ ಕೃಷ್ಣ ಬಂಧಿತ ಆರೋಪಿ.
19 ವರ್ಷದ ಈ ವಿಘ್ನೇಶ್ ಕೃಷ್ಣ ಟಿಕ್ ಟಾಕ್ ಆ್ಯಪ್ ವಿಡಿಯೋಗಳಲ್ಲಿ ಪ್ರಸಿದ್ದಿ ಪಡೆದಿದ್ದ. ಸಾಮಾಜಿಕ ಜಾಲತಾಣದ ಮೂಲಕ ಕಳೆದ ವರ್ಷ ಈತನಿಗೆ ಹುಡುಗಿಯ ಪರಿಚಿಯವಾಗಿತ್ತು. ಆಕೆಯನ್ನು ಭೇಟಿಯಾಗುತ್ತಿದ್ದ ಆರೋಪಿ ಮದುವೆಯಾಗುವುದಾಗಿ ಭರವಸೆ ನೀಡಿದ್ದ. ತನ್ನ ಮನೆಗೆ ಕರೆದುಕೊಂಡು ಹೋಗಿ ಆಕೆಯ ಮೇಲೆ ಅತ್ಯಾಚಾರವೆಸಗಿದ್ದ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ:ಕ್ರಿಕೆಟ್ ಆಡುತ್ತಿದ್ದಾಗ ಉರುಳಿ ಬಿದ್ದ ತೆಂಗಿನ ಮರ: 6 ವರ್ಷದ ಬಾಲಕ ಸಾವು
ಪರಿಣಾಮ ಅಪ್ರಾಪ್ತ ವಯಸ್ಕ ಬಾಲಕಿ ಗರ್ಭಿಣಿಯಾಗಿದ್ದು, ಆಕೆಯ ಪೋಷಕರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಈ ಮಾಹಿತಿ ತಿಳಿದ ವಿಘ್ನೇಶ್ ಕೃಷ್ಣ ಪರಾರಿಯಾಗಿದ್ದ. ಪೊಲೀಸರು ಹುಡುಕಾಟ ನಡೆಸುತ್ತಿದ್ದಂತೆ, ವಿದೇಶಕ್ಕೆ ಪರಾರಿಯಾಗುವ ಉದ್ದೇಶದಿಂದ ಪಾಸ್ ಪೋರ್ಟ್ ಗೆ ಅರ್ಜಿ ಸಲ್ಲಿಸಿದ್ದ.
ಈ ಬಗ್ಗೆ ಮಾಹಿತಿ ಪಡೆದ ಪೊಲೀಸರು, ಪಾಸ್ ಪೋರ್ಟ್ ಸಿದ್ದವಾಗಿ ಎಂದು ಕೃಷ್ಣ ಮನೆಯವರಿಗೆ ತಿಳಿಸಿದ್ದಾರೆ. ಇದನ್ನು ನಂಬಿದ ಆತನನ್ನು ಭೇಟಿಯಾಗಲು ಹೋದಾಗ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.