ವಾಷಿಂಗ್ಟನ್: ಅತಿಯಾದ ಮೈಗ್ರೇನ್ ನಿಂದಾಗಿ ಟಿಕ್ ಟಾಕ್ ಸ್ಟಾರ್ ಜೇಹಾನೆ ಥಾಮಸ್ (30ವರ್ಷ) ಕೊನೆಯುಸಿರೆಳೆದಿರುವುದಾಗಿ ನ್ಯೂಯಾರ್ಕ್ ಪೋಸ್ಟ್ ವರದಿ ಮಾಡಿದೆ.
ಇದನ್ನೂ ಓದಿ:ವರುಣಾ- ಕೋಲಾರ.. ಕ್ಷೇತ್ರ ಯಾವುದಯ್ಯಾ? ಮತ್ತಷ್ಟು ಗೊಂದಲ ಮೂಡಿಸಿದ ಸಿದ್ದರಾಮಯ್ಯ ಹೇಳಿಕೆ
ವರದಿಯ ಪ್ರಕಾರ, ಜೇಹಾನೆ ನಿಧನದ ಸುದ್ದಿಯನ್ನು ಆಕೆಯ ಗೆಳತಿ ಅಲಿಕ್ಸ್ ರೀಕ್ಸ್ GoFundMe ಪೇಜ್ ನಲ್ಲಿ ಶೇರ್ ಮಾಡಿಕೊಂಡಿರುವುದಾರಿ ವರದಿ ತಿಳಿಸಿದೆ. ಕೆಲವು ವಾರಗಳ ಹಿಂದೆ ಜೇಹಾನೆ ತನ್ನ ಇನ್ಸ್ ಟಾಗ್ರಾಮ್ ಪೇಜ್ ನಲ್ಲಿ, ಮೈಗ್ರೇನ್ ಗೆ ಸಂಬಂಧಿಸಿದಂತೆ ಎರಡು ವರ್ಷಗಳ ನಂತರ ಆಪ್ಟಿಕ್ ನ್ಯೂರಿಟಿಸ್ ಇದೆ ಎಂಬುದು ಪತ್ತೆಯಾಗಿತ್ತು. ಇದರಿಂದ ನನಗೆ ಅಪಾಯವಿದೆ ಎಂಬುದನ್ನು ನಾನು ಅಲ್ಲಗಳೆಯಲಾರೆ. ಆದರೆ ಏತನ್ಮಧ್ಯೆ ಮೈಗ್ರೇನ್ ನನ್ನ ಜೀವ ಹಿಂಡುತ್ತಿದೆ ಎಂದು ಉಲ್ಲೇಖಿಸಿದ್ದಾಳೆ.
“ನನ್ನ ಮಕ್ಕಳಿಗೆ ಸಹಾಯ ಮಾಡುತ್ತಿರುವ ನನ್ನ ತಾಯಿ ಮತ್ತು ತಂದೆಗೆ ಕೃತಜ್ಞತೆ ಅರ್ಪಿಸುತ್ತೇನೆ ಎಂದು” ಜೇಹಾನೆ ಬರೆದುಕೊಂಡಿದ್ದರು. ಜೇಹಾನೆ ಇಬ್ಬರು ಪುತ್ರರು, ಪೋಷಕರು ಹಾಗೂ ಅಭಿಮಾನಿಗಳನ್ನು ಅಗಲಿದ್ದು, ಇದೊಂದು ಆಕಸ್ಮಿಕ ಸಾವು ಎಂದು GoFundMe ಪೇಜ್ ನಲ್ಲಿ ತಿಳಿಸಲಾಗಿದೆ.
ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಇತ್ತೀಚೆಗಿನ ವಿಡಿಯೋದಲ್ಲಿ ಜೇಹಾನೆ ಥಾಮಸ್, ನನ್ನ ಮೈಗ್ರೇನ್ ನಿಂದಾಗಿ ನನಗೆ ತಲೆಯನ್ನು ಎತ್ತಲೂ ಸಾಧ್ಯವಾಗುತ್ತಿಲ್ಲ, ಜೊತೆಗೆ ನಡೆಯಲು ಆಗುತ್ತಿಲ್ಲ. ಇದರಿಂದಾಗಿ ವ್ಹೀಲ್ ಚೇರ್ ಆಶ್ರಯಿಸಬೇಕಾಗಿದೆ. ಇದೊಂದು ಕೆಟ್ಟ ತಲೆನೋವು ಎಂದು ಮಾತನಾಡಿರುವುದು ದಾಖಲಾಗಿದೆ ಎಂದು ವರದಿ ತಿಳಿಸಿದೆ.