Advertisement

ಟಿಕ್ ಟಾಕ್ ಒಡೆತನದ ಬೈಟೆಡಾನ್ಸ್ ಕಂಪೆನಿಯಿಂದ ಹೊಸ ಸ್ಮಾರ್ಟ್ ಫೋನ್: ಇದರ ವಿಶೇಷತೆಯೇನು ?

04:16 PM Jan 04, 2020 | Team Udayavani |

ಜನಪ್ರಿಯ ಟಿಕ್ ಟಾಕ್ ಆ್ಯಪ್ ಕಂಡುಹಿಡಿದ ಬೈಟೆಡಾನ್ಸ್ ಕಂಪೆನಿ ಸ್ಮಾರ್ಟ್ ಫೋನ್ ತಯಾರಿಸುವ ಕುರಿತು ಈ ಹಿಂದೆಯೇ ಸುಳಿವು ನೀಡಿತ್ತು. ಅದರೀಗ ಸ್ಮಾರ್ಟಿಸನ್ ಜಿಯಾಂಗ್ ಪ್ರೊ 3 ಹೆಸರಿನ ಹೊಸ ಸ್ಮಾರ್ಟ್ ಫೋನ್ ಅನ್ನು ಮಾರುಕಟ್ಟೆಗೆ ಪರಿಚಯಿಸಲು ಸಿದ್ಧತೆ ಮಾಡಿಕೊಂಡಿದೆ ಎಂಬ ಅಧಿಕೃತ ಮಾಹಿತಿ ಲಭ್ಯವಾಗಿದೆ.

Advertisement

ಮೂಲಗಳು ಪ್ರಕಾರ 2020 ರಲ್ಲಿ ಈ ಫೋನ್ ಮಾರುಕಟ್ಟೆಗೆ ಬರಲಿದೆ. ಹಲವು ಹೊಸ ಫೀಚರ್ ಗಳು ಈ ಫೋನ್ ನಲ್ಲಿರಲಿದ್ದು ಗ್ರಾಹಕರ ಮನಗೆಲ್ಲುವಲ್ಲಿ ಯಶಸ್ವಿಯಾಗಲಿದೆ ಎಂದು ತಿಳಿದು ಬಂದಿದೆ.

ಮಾರುಕಟ್ಟೆಗೆ ಬಿಡುಗಡೆಯಾಗಲಿರುವ ಸ್ಮಾರ್ಟಿಸನ್ ಜಿಯಾಂಗು ಪ್ರೋ 3 ಸ್ಮಾರ್ಟ್ ಫೋನ್ ಸ್ನ್ಯಾಪ್ ಡ್ರ್ಯಾಗನ್ 855+ ಎಸ್ ಒಸಿ ಪ್ರೊಸೆಸರ್ ಹೊಂದಿದ್ದು, 4 ಕ್ಯಾಮಾರಗಳನ್ನು ಅಳವಡಿಸಲಾಗಿದೆ. ಜೊತೆಗೆ ಟಿಕ್ ಟಾಕ್ ಆ್ಯಪ್ ಅನ್ನು ಇಲ್ಲಿ ಇನ್ ಬಿಲ್ಟ್ ಆಗಿ ನೀಡಲಾಗಿದೆ. ಮಾತ್ರವಲ್ಲದೆ ಸಿಂಗಲ್ ಸ್ವೈಪ್ ಲಾಕ್ ಆಯ್ಕೆಯನ್ನು ಹೊಂದಿದೆ.

ಸ್ಮಾರ್ಟಿಸನ್​ ಜಿಯಾಂಗು ಪ್ರೊ 3 ಬೆಲೆ:

ಈ ಸ್ಮಾರ್ಟ್ ಫೋನ್ ಮೂರು ಕಾನ್ಫಿಗರೇಶನ್ ನಲ್ಲಿ ಲಭ್ಯವಾಗಲಿದ್ದು ಬೆಲೆಗಳಲ್ಲೂ ಏರಿಳಿಗೊಂಡಿದೆ. ಕ್ರಮವಾಗಿ 8ಜಿಬಿ ರ್ಯಾಮ್​​ + 128 ಜಿಬಿ ಸ್ಟೊರೇಜ್ ಹೊಂದಿರುವ ಸ್ಮಾರ್ಟಿಸನ್​ ಜಿಯಾಂಗು ಪ್ರೊ 3 ಬೆಲೆ 29 ಸಾವಿರ ಎಂದು ಅಂದಾಜಿಸಲಾಗಿದೆ.

Advertisement

8ಜಿಬಿ ರ್ಯಾಮ್​ + 256 ಸ್ಟೊರೇಜ್​ ಹೊಂದಿರುವ ಸ್ಮಾರ್ಟ್​ಫೋನ್​ ಬೆಲೆ 32 ಸಾವಿರ.

ಹಾಗೂ 12ಜಿಬಿ ರ್ಯಾಮ್​ ಮತ್ತು 256ಜಿಬಿ ಸ್ಟೊರೇಜ್ ಹೊಂದಿರುವ ಸ್ಮಾರ್ಟಿಸನ್​ ಜಿಯಾಂಗು ಪ್ರೊ 3 ಬೆಲೆ 36 ಸಾವಿರ ಎಂದು ಅಂದಾಜಿಸಲಾಗಿದೆ.

ಸ್ಮಾರ್ಟಿಸನ್​ ಜಿಯಾಂಗು ಪ್ರೊ 3 ವಿಶೇಷತೆ:

ಸ್ಮಾರ್ಟಿಸನ್​ ಜಿಯಾಂಗು ಪ್ರೊ 3 ಎರಡು ಸಿಮ್ ಸ್ಲಾಟ್ (ನ್ಯಾನೋ ಸಿಮ್ ), ಸ್ಮಾರ್ಟ್​ಫೋನ್​ 6.39 ಇಂಚಿನ ಫುಲ್​ ಹೆಚ್​ಡಿ+ ಅಮೋಲ್ಡ್​ ಡಿಸ್​ಪ್ಲೇ ನೀಡಲಾಗಿದೆ. ಸ್ನಾಪ್​ಡ್ರ್ಯಾಗನ್​ 855+ ಎಸ್​ಒಸಿ ಪ್ರೊಸೆಸರ್​ನಿಂದ ಕಾರ್ಯ ನಿರ್ವಹಿಸಲಿದೆ. ಗ್ರಾಹಕರಿಗಾಗಿ 8GB RAM​​ + 128GB ಸ್ಟೊರೇಜ್ ಆಯ್ಕೆಯಲ್ಲಿ, 8GB RAM​ + 256 ಸ್ಟೊರೇಜ್​ನಲ್ಲಿ ಮತ್ತು 12GB RAM​ ಮತ್ತು 256GB ಸ್ಟೊರೇಜ್​ನಲ್ಲಿ ಸಿಗಲಿದೆ.

ನೂತನ ಸ್ಮಾರ್ಟ್​ಫೋನಿನಲ್ಲಿ 48 ಮೆಗಾಫಿಕ್ಸೆಲ್​ ಕ್ಯಾಮೆರಾವನ್ನು + 13 ಮೆಗಾಫಿಕ್ಸೆಲ್​ ವೈಡ್​ ಆ್ಯಂಗಲ್​ ಕ್ಯಾಮೆರಾ + 8 ಮೆಗಾಫಿಕ್ಸೆಲ್​ ಟೆಲಿಫೋಟೋ + 5 ಮೆಗಾಫಿಕ್ಸೆಲ್​ ಮಾಕ್ರೊ ಕ್ಯಾಮೆರಾ​ ನೀಡಲಾಗಿದೆ. ಸೆಲ್ಫಿಗಾಗಿ 20 ಮೆಗಾಫಿಕ್ಸೆಲ್​ ಕ್ಯಾಮೆರಾವನ್ನು ಅಳವಡಿಸಲಾಗಿದೆ. ಇದರ ಜೊತೆಗೆ 4G LTE, ಬ್ಲೂಟೂತ್​( v5.0,), ವೈ-ಫೈ, ಜಿಪಿಎಸ್​( a/b/g/n/ac) ನೀಡಲಾಗಿದೆ. 4000mAh​ ಬ್ಯಾಟರಿ ಅಳವಡಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next