Advertisement

ಟಿಕ್‌ಟಾಕ್‌ ಆ್ಯಪ್‌ಗೆ ಎಡಿಕ್ಟ್: ಪತಿಯಿಂದ ತರಾಟೆ;ಮಹಿಳೆ ಆತ್ಮಹತ್ಯೆ

10:01 AM Jun 14, 2019 | Vishnu Das |

ಚೆನ್ನೈ: ಟಿಕ್‌ ಟಾಕ್‌ ಆ್ಯಪ್‌ಗೆ ಎಡಿಕ್ಟ್ ಆಗಿದ್ದ 24 ರ ಹರೆಯದ ಮಹಿಳೆಯೊಬ್ಬಳು ಪತಿ ಬೈದನೆಂದು ನೊಂದು ಕೀಟ ನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ತಮಿಳುನಾಡಿನ ಅರಿಯಾಲೂರಿನಲ್ಲಿ ನಡೆದಿದೆ.

Advertisement

ಪೆರಂಬಲೂರು ಮೂಲದ ಅನಿತಾ ಕೀಟನಾಶಕ ಸೇವಿಸುವ ದೃಶ್ಯವನ್ನ ವಿಡಿಯೋ ಚಿತ್ರೀಕರಣ ನಡೆಸಿದ್ದಾಳೆ.

29 ರ ಹರೆಯ ದ ಪಳನಿವೇಲು ಎನ್ನುವವರನ್ನು ವಿವಾಹವಾಗಿದ್ದ ಅನಿತಾ ಗೆ 4 ವರ್ಷದ ಹೆಣ್ಣು ಮಗಳು ಮತ್ತು 2 ವರ್ಷದ ಗಂಡು ಮಗುವಿತ್ತು.

ಸ್ನೇಹಿತೆಯೊಬ್ಬಳು ಟಿಕ್‌ ಟಾಕ್‌ ಆ್ಯಪ್‌ ಬಗ್ಗೆ ತಿಳಿಸಿಕೊಟ್ಟ ಬಳಿಕ ಹೆಚ್ಚಾಗಿ ಅದರಲ್ಲೇ ಸಮಯ ಕಳೆಯುತ್ತಿದ್ದಳು.ಮಕ್ಕಳ ಬಗ್ಗೆಯೂ ಸರಿಯಾಗಿ ಕಾಳಜಿ ವಹಿಸುತ್ತಿರಲಿಲ್ಲ ಎಂದು ಕುಟುಂಬ ಸದಸ್ಯರು ಹೇಳಿದ್ದಾರೆ.

Advertisement

ಕೆಲ ವರ್ಷದ ಹಿಂದೆ ಉದ್ಯೋಗ ನಿಮಿತ್ತ ಸಿಂಗಾಪುರಕ್ಕೆ ಪತಿ ಪಳನಿವೇಲು ತೆರಳಿದ್ದರು.

ಅನಿತಾ ಮಕ್ಕಳನ್ನು ಸರಿಯಾಗಿ ನೋಡಿಕೊಳ್ಳುತ್ತಿಲ್ಲ ಎಂದು ಅನಿತಾ ವಿರುದ್ಧ ಮನೆ ಮಂದಿ ಪಳನಿವೇಲುಗೆ ದೂರು ನೀಡಿದ್ದರು.

ಪೋನ್‌ ಮಾಡಿ ಪತ್ನಿಯನ್ನು ಪಳನಿವೇಲು ತರಾಟೆಗೆ ತೆಗೆದುಕೊಂಡಿದ್ದರು. ಇದರಿಂದ ಮನನೊಂದು ಕಠಿಣ ನಿರ್ಧಾರ ತಳೆದಿದ್ದಾಳೆ ಎನ್ನಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next