ನವದೆಹಲಿ: 200 ಕೋಟಿ ರೂ. ಸುಲಿಗೆ ಪ್ರಕರಣದಲ್ಲಿ ತಿಹಾರ್ ಜೈಲಿನಲ್ಲಿರುವ ಬೆಂಗಳೂರು ಮೂಲದ ಸುಖೇಶ್ ಚಂದ್ರಶೇಖರ್‌ನ ಎಲ್ಲ ವ್ಯವಹಾರಗಳಿಗೆ ಆತನ ಪತ್ನಿ ಲೀನಾ ಮರಿಯಾನೇ ಮಾಸ್ಟರ್ ಮೈಂಡ್ ಆಗಿದ್ದಳು. ಹೀಗೆಂದು ಜಾರಿ ನಿರ್ದೇಶನಾಲಯವು(ಇಡಿ) ಚಾರ್ಜ್‌ಶೀಟ್‌ನಲ್ಲಿ ನಮೂದಿಸಿದೆ.
ಸುಖೇಶ್‌ನ ಎಲ್ಲ ವ್ಯವಹಾರಗಳ ಮಾಸ್ಟರ್ ಮೈಂಡ್ ಆಗಿ ಲೀನಾ ಕೆಲಸ ಮಾಡುತ್ತಿದ್ದಳು. ಆತ ಬಂಧನವಾದ ಎನ್ನುವ ವಿಚಾರ ತಿಳಿದಾಕ್ಷಣ ತನ್ನ ಬಳಿ ಇದ್ದ ಎಲ್ಲ ಸಾಕ್ಷ್ಯಗಳನ್ನು ನಾಶ ಮಾಡಿದ್ದಾಳೆ.
ಪ್ರಕರಣದ ಆರೋಪಿಗಳಾದ ಅರುಣ್ ಮುಥು, ಆನಂದ್ ಮೂರ್ತಿ ಮತ್ತು ಜಗದೀಶ್‌ಗೆ ಆಕೆ ಯಾವುದೇ ಮಾಹಿತಿ ಹೊರಬಿಡದಂತೆ ಬೆದರಿಕೆಯನ್ನೂ ಹಾಕಿದ್ದಳು ಎಂದು ಅವರು ಇಡಿಗೆ ತಿಳಿಸಿರುವುದಾಗಿ ಹೇಳಲಾಗಿದೆ.
ಇದನ್ನೂ ಓದಿ:ವ್ಯಕ್ತಿಯನ್ನು ಕೊಂದು ಗ್ರಾಮದಲ್ಲೇ ಹೂತಿಟ್ಟರು : ಮೂರು ದಿನಗಳ ಬಳಿಕ ಪ್ರಕರಣ ಬೆಳಕಿಗೆ
ಹಾಗೆಯೇ ಪ್ರಕರಣದಲ್ಲಿ ಇತ್ತೀಚೆಗೆ ಬಂಧಿಸಲಾದ ಪಿಂಕಿ ಇರಾಣಿ, ಸುಖೇಶ್‌ಗೆ ಬಾಲಿವುಡ್ ನಟಿ ಜಾಕ್ವೆಲಿನ್ ಫರ್ನಾಂಡಿಸ್ ಪರಿಚಯ ಮಾಡಿಸಿಕೊಟ್ಟಿದ್ದಳು. ಆಕೆಗೆ ಸುಖೇಶ್ ಕೊಡಬೇಕಾದ ಉಡುಗೊರೆಯನ್ನು ಪಿಂಕಿಯೇ ಆಯ್ಕೆ ಮಾಡಿ, ಅದನ್ನು ನಟಿಗೆ ತಲುಪಿಸುತ್ತಿದ್ದಳು ಎಂದು ಚಾರ್ಜ್‌ಶೀಟ್‌ನಲ್ಲಿ ತಿಳಿಸಲಾಗಿದೆ.