Advertisement
ಮಂಗಳವಾರ ಕುಟುಂಬ ಸದಸ್ಯರಿಂದ ಹಾಲು-ತುಪ್ಪ ಕಾರ್ಯ ಇರುವುದರಿಂದ ಸಮಾಧಿಗೆ ಬಿಗಿ ಪೊಲೀಸ್ ಭದ್ರತೆ ಒದಗಿಸಲಾಗಿದ್ದು, ಸಾರ್ವಜನಿಕರ ಪ್ರವೇಶ ನಿರ್ಬಂಧಿಸಲಾಗಿದೆ. ನಂದಿನಿ ಲೇಔಟ್ ಠಾಣೆ ಇನ್‌ಸ್ಪೆಕ್ಟರ್ ವೆಂಕಟೇಗೌಡ ನೇತೃತ್ವದಲ್ಲಿ ನಾಲ್ಕು ಕೆಎಸ್‌ಆರ್‌ಪಿ ತುಕಡಿಗಳು ಸೇರಿ 300 ಮಂದಿ ಪೊಲೀಸರನ್ನು ನಿಯೋಜಿಸಲಾಗಿದೆ.
ಪುನೀತ್ ನಿಧನ ಅನಂತರ ಸದಾಶಿವನಗರದ ಅವರ ಮನೆಗೂ ಭದ್ರತೆ ನೀಡಲಾಗಿದೆ. ಕೆಲ ಅಭಿಮಾನಿಗಳು ಅವರ ಮನೆ ಬಳಿ ಹೋಗಿ ಕಿರಿಕಿರಿ ಉಂಟು ಮಾಡುವ ಸಾಧ್ಯತೆಯಿದೆ ಹಿನ್ನೆಲೆಯಲ್ಲಿ ಭದ್ರತೆ ನೀಡಲಾಗಿದೆ.
Related Articles
Advertisement
ಶಿವಕಾರ್ತಿಕೇಯನ್ ಭೇಟಿಕಂಠೀರವ ಸ್ಟುಡಿಯೋದ ಪುನೀತ್ ಸಮಾಧಿಗೆ ತಮಿಳುನಾಡಿನ ನಟ ಶಿವಕಾರ್ತಿಕೇಯನ್ ಭೇಟಿ ನೀಡಿ ಪೂಜೆ ಸಲ್ಲಿಸಿದರು. ಬಳಿಕ ಮಾತನಾಡಿದ ಅವರು, ಪುನೀತ್ ಅವರನ್ನು ಕಾರ್ಯಕ್ರಮವೊಂದರಲ್ಲಿ ಭೇಟಿಯಾಗಿದ್ದೆ. ಅವರ ಒಳ್ಳೆಯ ಗುಣಗಳು ತುಂಬ ಇಷ್ಟ ಆಯಿತು. ಅವರಿಂದ ಸಾಕಷ್ಟು ಕಲಿತಿದ್ದೇನೆ ಎಂದರು. ಮನೆಗೆ ಪ್ರಭು ಗಣೇಶನ್ ಭೇಟಿ
ಸದಾಶಿವನಗರದ ಪುನೀತ್ ಮನೆಗೆ ತಮಿಳು ನಟ ಪ್ರಭು ಗಣೇಶನ್ ಭೇಟಿ ನೀಡಿ, ಪುನೀತ್ ಪತ್ನಿ ಅಶ್ವಿನಿ ಅವರೊಂದಿಗೆ ಕೆಲ ಹೊತ್ತು ಚರ್ಚಿಸಿ ಧೈರ್ಯ ತುಂಬಿದರು.