Advertisement

ಬೆಳ್ಮಣ್‌ ಗಡಿಭಾಗದಲ್ಲಿ ಬಿಗಿ ಭದ್ರತೆ

11:49 PM Apr 20, 2020 | Sriram |

ಬೆಳ್ಮಣ್‌: ಲಾಕ್‌ ಡೌನ್‌ ಹಿನ್ನೆಲೆಯಲ್ಲಿ ಉಡುಪಿ ಜಿಲ್ಲೆಯ ಗಡಿ ಭಾಗದ ಬೆಳ್ಮಣ್‌ ಚೆಕ್‌ ಪೋಸ್ಟ್‌ನಲ್ಲಿ ಬಿಗಿ ಪೊಲೀಸ್‌ ವ್ಯವಸ್ಥೆ ಇದ್ದು ಶನಿವಾರ ಅ ಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿ ವಿಚಾರ ವಿನಿಮಯ ನಡೆಸಿದರು.

Advertisement

ಎ.ಡಿ.ಸಿ. ಸದಾಶಿವ ಪ್ರಭು , ಕಾರ್ಕಳ ತಾಲೂಕು ತಹಶೀಲ್ದಾರ್‌ ಪುರಂದರ ಹೆಗ್ಡೆ, ಕಾರ್ಯನಿರ್ವಹಣಾಧಿ ಕಾರಿ ಡಾ| ಮೇ| ಹರ್ಷ ಬೆಳ್ಮಣ್‌ ಚೆಕ್‌ ಪೋಸ್ಟ್‌ಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಚೆಕ್‌ ಪೋಸ್ಟ್‌ ಇನ್ನಷ್ಟು ಬಿಗಿ
ಶನಿವಾರ, ರವಿವಾರ ಹಾಗೂ ಸೋಮವಾರ ಬೆಳಗ್ಗಿನಿಂದ ಅಹೋರಾತ್ರಿ ವಾಹನ ಹಾಗೂ ಜನರ ತಪಾಸಣೆ ನಡೆಯುತ್ತಿದೆ. ಮಂಗಳೂರು ಭಾಗದಿಂದ ಬಂದ ಹಲವಾರು ವಾಹನಗಳನ್ನು ತಪಾಸಣೆ ನಡೆಸಿ ಮರಳಿ ಹಿಂದೆ ಕಳುಹಿಸಲಾಗಿದೆ. ಲಾರಿಯೊಂದರಲ್ಲಿ 6 ಮಂದಿ ಪ್ರಯಾಣಿಸುತ್ತಿದ್ದು ಚೆಕ್‌ ಪೋಸ್ಟ್‌ ನಲ್ಲಿ ತಪಾಸಣೆ ನಡೆಸಿದಾಗ ಓರ್ವನಿಗೆ ಜ್ವರವಿದ್ದ ಕಾರಣ ಕೂಡಲೇ ಉಡುಪಿ ಜಿಲ್ಲಾಸ್ಪತ್ರೆಗೆ ಕಳುಹಿಸಿಕೊಡಲಾಗಿದೆ.

ಮಾತು ಕೇಳದವರಿಗೆ ಲಾಠಿ ರುಚಿ
ಬೆಳಗ್ಗೆ 11 ಗಂಟೆಯವರೆಗೆ ದಿನಸಿ ಹಾಗೂ ಹಾಲು ಮಾರಾಟದ ಅಂಗಡಿಗಳು ತೆರೆಯಲು ಅವಕಾಶವನ್ನು ನೀಡಿದ್ದು ಬೆಳ್ಮಣ್‌ ನಲ್ಲಿ ಮೊಬೈಲ್‌ ಶಾಪ್‌ಗ್ಳು, ಹಾರ್ಡ್‌ವೇರ್‌ ಅಂಗಡಿ ಹಾಗೂ ಇತರ ಅಂಗಡಿಗಳು ತೆರೆದು ವ್ಯಾಪರ ನಡೆಸುತ್ತಿದ್ದು ಪೊಲೀಸರು ಬಂದ್‌ ಮಾಡುವಂತೆ ಎಚ್ಚರಿಕೆಯನ್ನು ನೀಡಿ ಮಾತು ತಪ್ಪಿದವರಿಗೆ ಲಾಠಿ ರುಚಿಯನ್ನು ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next