ಕುಂದಾಪುರ, ಬ್ರಹ್ಮಾವರ, ಉಡುಪಿ, ಕಾರ್ಕಳ, ಹೆಬ್ರಿ ತಾಲೂಕಿನಲ್ಲಿ 24 ಮರಳು ಅಡ್ಡೆಗಳಿದ್ದರೂ 2 ಅಡ್ಡೆಗಳಿಗೆ ಮಾತ್ರ ಅನುಮತಿ ನೀಡಲಾಗಿದೆ. ಇದರಿಂದ ಮರಳು ಅಭಾವ ಸೃಷ್ಟಿಯಾಗಿದೆ.
Advertisement
ಜಿಲ್ಲೆಯಲ್ಲಿ ಮರಳುಗಾರಿಕೆಗೆ ಅನುಮತಿ ನೀಡಲು ಗುರುತಿಸಲಾದ 24 ಬ್ಲಾಕ್‌ಗಳಿವೆ. ಹಾಲಾಡಿ ಹೊಳೆ, ವಾರಾಹಿ ನದಿ, ಸೀತಾ ನದಿ, ಮಡಿಸಾಲು ಹೊಳೆ, ಶಾಂಭವಿ ನದಿ, ದುರ್ಗಾ ಹೊಳೆ, ಸುಧಾ ಹೊಳೆ, ಗುಂಡಾಳ ಹೊಳೆ, ತೀಥೊìಟ್ಟು ಹೊಳೆಯಲ್ಲಿ ಒಟ್ಟು 43.3 ಹೆಕ್ಟೇರ್ ವಿಸ್ತೀರ್ಣದಲ್ಲಿ 1.99 ಲಕ್ಷ ಮೆ.ಟನ್ ಮರಳು ನಿಕ್ಷೇಪ ಇದೆ.
ಮರಳುಗಾರಿಕೆ ಟೆಂಡರ್ ವಹಿಸಲು ಮೀಸಲಾತಿಯನ್ನು ಕೂಡ ನಿಗದಿಗೊಳಿಸ ಲಾಗಿದೆ. ಜಿಲ್ಲೆಯಲ್ಲಿ ಮರಳಿನ ದೊಡ್ಡ ಬ್ಲಾಕ್ ಎಂದರೆ ಬಳ್ಕೂರು. ಇಲ್ಲಿ 33,116 ಮೆಟ್ರಿಕ್ ಟನ್ ಮರಳು ತೆಗೆಯಬಹುದು. ಹಾಲಾಡಿ, ಹೆಂಗವಳ್ಳಿ, ಕುಳ್ಳುಂಜೆಯಲ್ಲಿ 24,701 ಮೆಟ್ರಿಕ್ ಟನ್, ಅಂಪಾರಿನ ಎರಡು ಬ್ಲಾಕ್‌ಗಳಲ್ಲಿ 36,870 ಮೆಟ್ರಿಕ್ ಟನ್, ಕುಳ್ಳುಂಜೆಯಲ್ಲಿ 13,044 ಮೆಟ್ರಿಕ್ ಟನ್, ಬ್ರಹ್ಮಾವರದ ಹೊಸೂರಿನಲ್ಲಿ 10,436 ಮೆಟ್ರಿಕ್ ಟನ್ ತೆಗೆಯಬಹುದು. ಆದರೆ ಕಂಡೂÉರು, ಬಳ್ಕೂರು, ಹಿರಿಯಡ್ಕದಲ್ಲಿ ಬಜೆ ಡ್ಯಾಮಿನ ಮರಳು, ಬ್ರಹ್ಮಾವರ ಧಕ್ಕೆ ಬಿಟ್ಟರೆ ಬೇರೆಲ್ಲೂ ಏಲಂ ಪ್ರಕ್ರಿಯೆ ನಡೆದಿಲ್ಲ. ಅಧಿಸೂಚನೆಯಾಗಿದ್ದರೂ ಟೆಂಡರ್ ಕರೆದಿಲ್ಲ. ಬಿಗಡಾಯಿಸಿದ ಸಮಸ್ಯೆ
ಸರಕಾರಿ ಕಾಮಗಾರಿಗಳಿಗೆ ಬಜೆ ಡ್ಯಾಮಿನ ಮರಳು, ಹಿನ್ನೀರಿನ ಮರಳು ಬಳಸಲಾಗುತ್ತದೆಯಾದರೂ ಮನೆಯಂತಹ ಕಾಮಗಾರಿಗಳಿಗೆ ನಾನ್ ಸಿಆರ್‌ಝೆಡ್ ಪ್ರದೇಶದ ಸಿಹಿನೀರ ಮರಳಿಗೆ ಹೆಚ್ಚು ಬೇಡಿಕೆಯಿದೆ. ಕಂಡೂರು, ಬಳ್ಕೂರಿನಲ್ಲಿ ಮಾತ್ರ ಇದು ಲಭ್ಯ. ಮರಳು ತೆಗೆಯುವ ಕಾರ್ಮಿಕರು ಕೃಷಿ ಚಟುವಟಿಕೆಗೆ ತೆರಳಿದ್ದಾರೆ ಎಂಬ ಕಾರಣ ನೀಡಲಾಗುತ್ತಿದೆ. ತೂಗುವ ಯಂತ್ರ ಅಳವಡಿಸಿಲ್ಲ ಎಂದು ಈ ಹಿಂದೆ ಜಿಲ್ಲಾಡಳಿತ ಮರಳುಗಾರಿಕೆ ಸ್ಥಗಿತಗೊಳಿಸಿತ್ತು.
Related Articles
ದ.ಕ. ಮತ್ತು ಹಿರಿಯಡ್ಕದಲ್ಲಿ ಆ್ಯಪ್ ಮೂಲಕ ಮರಳು ನೀಡುತ್ತಿದ್ದು, ಕುಂದಾಪುರದಲ್ಲಿ ಮಾತ್ರ ಕೌಂಟರ್‌ಗೆ ತೆರಳಿ ಬುಕ್ಕಿಂಗ್ ಮಾಡುವ ಕ್ರಮ ಇದೆ. ಪಾರದರ್ಶಕ ವ್ಯವಸ್ಥೆ ಕಾಪಾಡಲು ಇಲ್ಲೂ ಆ್ಯಪ್ ಮೂಲಕ ವಿತರಿಸಬೇಕೆಂದು ಜಿಲ್ಲಾಧಿಕಾರಿಗಳಿಗೆ ಬೇಡಿಕೆ ಸಲ್ಲಿಸಲಾಗಿದೆ.
Advertisement
ಅರ್ಹರೇ ಇಲ್ಲ!ಮರಳು ಗುತ್ತಿಗೆಗೆ ಸರಕಾರ ನಿಗದಿಪಡಿಸಿದ ನಿಯಮಗಳ ಪ್ರಕಾರ ಅರ್ಹ ಗುತ್ತಿಗೆದಾರರೇ ಇಲ್ಲ ! ಎರಡು ಬಾರಿ ಟೆಂಡರ್ ಕರೆಯ ಲಾಗಿದ್ದರೂ ಇಬ್ಬರು ಮಾತ್ರ ಗುತ್ತಿಗೆ ಪಡೆದಿದ್ದಾರೆ. ಎರಡು ಬಾರಿ ಟೆಂಡರ್ ಕರೆದರೂ ಎರಡು ಕಡೆಗೆ ಮಾತ್ರ ಟೆಂಡರ್ ಆಗಿದೆ. ಇತರೆಡೆಗೆ ಅರ್ಹ ಗುತ್ತಿಗೆದಾರರು ಬಿಡ್ ಮಾಡಿಲ್ಲ. ಆದ್ದರಿಂದ ಟೆಂಡರ್ ನಿಯಮ ಸಡಿಲಿಸಲು ಸರಕಾರಕ್ಕೆ ಅನುಮತಿಗಾಗಿ ಬರೆಯಲಾಗಿದೆ. ನಿಯಮ ಸಡಿಲಿಕೆಯಾಗಿ ಬಂದ ಬಳಿಕ ಟೆಂಡರ್ ಕರೆಯಲಾಗುವುದು.
ಜಿ. ಜಗದೀಶ್, ಜಿಲ್ಲಾಧಿಕಾರಿ, ಉಡುಪಿ