Advertisement
ನಗರದ ವಿವಿಧೆಡೆಗಳಲ್ಲಿ ಪೊಲೀಸ್ ಚೆಕ್ ಪೋಸ್ಟ್‌ಗಳಲ್ಲಿ ನಡೆಯುತ್ತಿದ್ದ ವಾಹನ ತಪಾಸಣೆ ಸ್ಥಳಗಳಿಗೆಭೇಟಿ ನೀಡಿ ಮಾತನಾಡಿ, ರಾಜ್ಯದಲ್ಲಿ ದೊಡ್ಡಬಳ್ಳಾಪುರತಾಲೂಕು ಪಾಸಿಟಿವ್ ಪಟ್ಟಿಯಲ್ಲಿ ಕೆಂಪು ವಲಯಕ್ಕೆಸೇರ್ಪಡೆಯಾಗಿದೆ. ಈ ನಿಟ್ಟಿನಲ್ಲಿ ಜಿಲ್ಲಾಧಿಕಾರಿಗಳಆದೇಶದ ಮೇರೆಗೆ ತಾಲೂಕಿನ ವಿವಿಧೆಡೆಗಳಲ್ಲಿ ಚೆಕ್‌ಪೋಸ್ಟ್‌ಗಳನ್ನು ನಿರ್ಮಾಣ ಮಾಡಿ, ಅನಗತ್ಯವಾಗಿಸಂಚಾರ ಮಾಡುವ ವಾಹನಗಳನ್ನು ಜಪ್ತಿ ಮಾಡಲು ಸೂಚಿಸಲಾಗಿದೆ.
Related Articles
Advertisement
ಗ್ರಾಪಂ ವ್ಯಾಪ್ತಿಯಲ್ಲಿ ಜಾಗೃತಿ: ತಾಲೂಕಿನಪಾಸಿಟಿವಿಟಿ ದರ ಇಳಿಸುವ ನಿಟ್ಟಿನಲ್ಲಿ ಗ್ರಾಪಂ ವ್ಯಾಪ್ತಿಯಲ್ಲಿ ಜಾಗೃತಿ ಕಾರ್ಯಕ್ರಮಗಳನ್ನು ರೂಪಿಸಲಾಗಿದೆ.ಗ್ರಾಮದ ಮುಖಂಡರು ಇದಕ್ಕೆ ಸಹಕರಿಸಬೇಕಿದೆ.ತಾಲೂಕು ಆಡಳಿತ ಹಾಗೂ ಪೊಲೀಸ್ ಇಲಾಖೆಯೊಂದಿಗೆ ಸಾರ್ವಜನಿಕರು ಜವಾಬ್ದಾರಿಯಿಂದವರ್ತಿಸಿ ಸಹಕರಿಸಬೇಕಿದೆ ಎಂದು ಹೇಳಿದರು.ಮಾಂಸ ಮಾರಾಟ ಬಂದ್: ತಾಲೂಕಿನಲ್ಲಿ ಕೊರೊನಾ ಪ್ರಕರಣಗಳು ಹೆಚ್ಚಿರುವ ಹಿನ್ನೆಲೆಯಲ್ಲಿ ಜೂ.21ರವರೆಗೆದೊಡ್ಡಬಳ್ಳಾಪುರ ತಾಲೂಕಿನಲ್ಲಿ ಎಲ್ಲಾ ರೀತಿಯ ಮಾಂಸ ಮಾರಾಟದ ಅಂಗಡಿಗಳನ್ನು ಬಂದ್ ಮಾಡುವಂತೆ ಜಿಲ್ಲಾಧಿಕಾರಿಗಳು ಸೂಚಿಸಿದ್ದಾರೆ ಎಂದು ತಿಳಿಸಿದರು.
ಉಪನೋಂದಣಿ ಕಚೇರಿ ಮುಂದೆ ಜನ: ರಾಜ್ಯಸರ್ಕಾರ ಉಪನೋಂದಣಾಧಿಕಾರಿಗಳ ಕಚೇರಿಗಳನ್ನುತೆರೆಯಲು ಅವಕಾಶ ಮಾಡಿಕೊಟ್ಟಿರುವುದರಿಂದಸೋಮವಾರ ವಿವಿಧ ನೋಂದಣಿ ಕಾರ್ಯಗಳಿಗಾಗಿಉಪನೋಂದಣಿ ಅಧಿಕಾರಿಗಳ ಕಚೇರಿ ಮುಂಭಾಗಜನರು ಸಾಲುಗಟ್ಟಿ ನಿಂತಿದ್ದರು. ಈ ನಡುವೆ ಸರ್ವರ್‌ಸಮಸ್ಯೆಯಿಂದ ಆಗಬೇಕಾದ ಕಚೇರಿ ಕೆಲಸಗಳುಕೆಲಕಾಲ ಸ್ಥಗಿತಗೊಂಡಿದ್ದರಿಂದ ಹೆಚ್ಚಿನ ಜನಜಂಗುಳಿಉಂಟಾಗಿತ್ತು. ತಾಲೂಕು ಕಚೇರಿ ಮುಂಭಾಗದಲ್ಲಿಕೊರೊನಾ ಲಾಕ್‌ಡೌನ್‌ಗೂ ಮುಂಚೆ ಇದ್ದಂತೆವಾಹನಗಳ ಸಾಲು ಹೆಚ್ಚಾಗಿತ್ತು.