Advertisement

4 ಮರಿಗಳೊಂದಿಗೆ ತಾಯಿ ಹುಲಿ ಪ್ರತ್ಯಕ್ಷ

03:46 PM Dec 11, 2022 | Team Udayavani |

ಎಚ್‌.ಡಿ.ಕೋಟೆ: ಸಫಾರಿ ವೇಳೆ ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ದಮ್ಮನಕಟ್ಟೆ ಅರಣ್ಯ ಪ್ರದೇಶದಲ್ಲಿ 4 ಮರಿಗಳೊಂದಿಗೆ ತಾಯಿಹುಲಿ ಪ್ರತ್ಯಕ್ಷಗೊಂಡಿದ್ದು, ವನ್ಯಜೀವಿ ಛಾಯಾಗ್ರಾಹಕರು ವಿಡಿಯೋ ಹಾಗೂ ಫೋಟೋ ಸೆರೆ ಹಿಡಿದಿದ್ದು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿವೆ.

Advertisement

ತಾಲೂಕಿನ ಅಂತರಸಂತೆ ಸಮೀಪದ ದಮ್ಮನಕಟ್ಟೆ ಅರಣ್ಯ ಪ್ರದೇಶದ ಕಬಿನಿ ಹಿನ್ನೀರಿನಲ್ಲಿ ತಾಯಿ ಹುಲಿಯೊಂದಿಗೆ 4 ಮರಿಗಳು ಪ್ರತ್ಯಕ್ಷಗೊಂಡಿದ್ದು, 3 ಹುಲಿ ಮರಿಗಳು ತಾಯಿ ಹುಲಿಯಿಂದ ಕೆಲವೇ ಅಡಿಗಳ ಪೊದೆಯಲ್ಲಿ ಅಡಗಿಕುಳಿತುಕೊಂಡರೆ ಅರಣ್ಯ ಮಾರ್ಗದ ರಸ್ತೆ ಮಧ್ಯದಲ್ಲಿ ಕುಳಿತ ತಾಯಿ ಹುಲಿ ಬಳಿಗೆ ಮರಿಹುಲಿಯೊಂದು ಆಗಮಿಸಿ ತಾಯಿಯೊಂದಿಗೆ ಸರಸ ಸಲ್ಲಾಪದಲ್ಲಿ ಕಾಲ ಹರಣ ಮಾಡುತ್ತಿತ್ತು.

ಈ ದೃಶ್ಯ ಕಂಡ ವನ್ಯಜೀವಿ ಛಾಯಾಗ್ರಾಹಕರ ತಂಡ ಹುಲಿ ಮರಿ ತಾಯಿ ಹುಲಿಯೊಂದಿಗೆ ತಾಯಿಯ ಮಮಕಾರದೊಂದಿಗೆ ಸಂಚರಿಸುತ್ತಿದ್ದ ನೈಜತೆಯ ದೃಶ್ಯ ವಿಡಿಯೋ ಮತ್ತು ಫೋಟೋ ಕ್ಲಿಕ್ಕಿಸಿ ಜಾಲ ತಾಣದಲ್ಲಿ ಹರಿಬಿಟ್ಟಾರೆ. ಇದು ವನ್ಯ ಜೀವಿ ಪ್ರಿಯರಿಗಷ್ಟೇ ಅಲ್ಲದೆ ಛಾಯಾಗ್ರಾಹಕರು ಮತ್ತು ಹುಲಿ ಪ್ರಿಯರಲ್ಲಿ ಹರ್ಷ ಮೂಡಿಸಿದೆ.

ಎಚ್‌.ಡಿ.ಕೋಟೆ ತಾಲೂಕಿನ ದಮ್ಮನಕಟ್ಟೆ ವನ್ಯಜೀವಿ ವಲಯದ ಸಫಾರಿ ಪ್ರಿಯರಿಗೆ ಆಗಾಗ ಹುಲಿಗಳು ದರ್ಶನ ನೀಡುವುದ ರಿಂದ ಸಫಾರಿ ಪ್ರಿಯರು ಬಹುಸಂಖ್ಯೆಯಲ್ಲಿ ಇತ್ತ ಹರಿದು ಬರುವಂತೆ ಮಾಡಿದೆ. ಹಲವು ದಿನಗಳ ಹಿಂದಿನಿಂದ ಹಸಿರಾಗಿರುವ ಅರಣ್ಯದೊಳಗೆ ಸಫಾರಿ ಪ್ರಿಯರಿಗೆ ವನ್ಯಜೀವಿಗಳ ದರ್ಶನ ಲಭಿಸುವುದೇ ಕಷ್ಟಕರ ಹೀಗಿರುವಾಗ 4 ಮರಿಗಳೊಂದಿಗೆ ತಾಯಿ ಹುಲಿ ಸೇರಿ 5 ಹುಲಿಗಳ ಏಕಕಾಲದಲ್ಲಿ ದರ್ಶನ ನೀಡಿರುವುದು ಸಫಾರಿ ಪ್ರಿಯರಲ್ಲಿ ಅಚ್ಚರಿ ಮೂಡುವಂತೆ ಮಾಡಿದೆ

Advertisement

Udayavani is now on Telegram. Click here to join our channel and stay updated with the latest news.

Next