Advertisement

ಸಂಗಾತಿಗಾಗಿ ಹುಲಿರಾಯ ನಡಿಗೆ

06:25 AM Dec 08, 2017 | Team Udayavani |

ಭೋಪಾಲ: ಅರಣ್ಯದಲ್ಲಿರುವ ಹುಲಿ ಅಬ್ಬಬ್ಟಾ ಎಂದರೆ ಎಷ್ಟು ದೂರ ಪ್ರಯಾಣಿಸಬಹುದು? 10, 50 ಕಿ.ಮೀ? ಮಧ್ಯಪ್ರದೇಶದ ಅರಣ್ಯದಲ್ಲಿರುವ ಹುಲಿ ಬರೋಬ್ಬರಿ 250 ಕಿ.ಮೀ ಪ್ರಯಾಣಿಸಿದೆ. ಏಕೆ ಅಂತ ಇಲ್ಲಿ ಕೇಳಿ. 3 ವರ್ಷದ ತರುಣ ಹುಲಿಗೆ ಬೇಕಾದದ್ದು ಸಂಗಾತಿ. ಅದರ ಸಾಂಗತ್ಯಕ್ಕಾಗಿ ಮಾಡಿದ್ದೇ ಈ ದೀರ್ಘ‌ ಪ್ರಯಾಣ. ಉಜ್ಜೆ„ನಿ ಅರಣ್ಯ ವ್ಯಾಪ್ತಿಯಲ್ಲಿ ಹೆಣ್ಣು ಹುಲಿ ಇಲ್ಲದ್ದರಿಂದ ದೇವಾಸ್‌, ಧರ್‌ ಮತ್ತು ಜಬುವಾ ವಿಭಾಗದ ಅರಣ್ಯ ಪ್ರದೇಶದಲ್ಲಿ ಸೂಕ್ತ ಸಂಗಾತಿಯನ್ನು ಶೋಧಿಸಿಕೊಂಡು ಹುಲಿರಾಯ ಯಾತ್ರೆ ಕೈಗೊಂಡಿತ್ತು. ಪಾಪ.. ಅದರ ಆಸೆ ಈಡೇರಲೇ ಇಲ್ಲ. 

Advertisement

ಈ ಬಗ್ಗೆ ವಿವರಣೆ ನೀಡಿದ ಮಧ್ಯಪ್ರದೇಶದ ಅರಣ್ಯ ಇಲಾಖೆಯ ಮುಖ್ಯ ಸಂರಕ್ಷಣಾಧಿಕಾರಿ ಬಿ.ಎಸ್‌.ಅಣ್ಣಿಗೇರಿ “ನಾಗಾx ಪ್ರದೇಶದ ಅರಣ್ಯದಲ್ಲಿ ಈ ವರ್ಷದ ಜನವರಿಯಲ್ಲಿ ಈ ಹುಲಿ ಕಂಡುಬಂದಿತ್ತು. ಅದಕ್ಕೆ ಸಂಗಾತಿಯ ಅಗತ್ಯವಿದ್ದ ಕಾರಣ ದೀರ್ಘ‌ ಸಂಚಾರ ಕೈಗೊಂಡಿದೆ’ ಎಂದಿದ್ದಾರೆ. ಅರಣ್ಯ ಇಲಾಖೆ ಅಧಿಕಾರಿಗಳು ಹುಲಿಯ ಸಂಚಾರವನ್ನು ಮತ್ತು ಬರುವ ಔಷಧ ನೀಡಿ ನಿಯಂತ್ರಿಸಲು ಮುಂದಾಗಿದ್ದರು. ಆದರೆ ಅಧಿಕಾರಿಗಳು ಬಂದೂಕು ಬಳಸಿ ಸಿಡಿಸಿದ ಚುಚ್ಚುಮದ್ದನ್ನು ತಪ್ಪಿಸಿಕೊಳ್ಳಲು ಅದು ಯಶಸ್ವಿಯಾಗಿತ್ತು. ಒಂದು ವರ್ಷದಿಂದ ಗೆಳತಿಗಾಗಿ ನಾಗಾxದಲ್ಲೇ ಹುಡುಕಾಟ ನಡೆಸಿತ್ತು ಈ ಹುಲಿ.

ಇಲ್ಲಿಂದ ಇಂದೋರ್‌ನ ಮಂಗಿಲಿಯಾ ಅರಣ್ಯಕ್ಕೆ ತೆರಳಿದ್ದ ಹುಲಿ, ಉಜ್ಜೆ„ನಿಯ ಬಡ್‌ನ‌ಗರ್‌ ಮತ್ತು ಧಾರ್‌ನ ಜವಾಸಿಯಾ ಗ್ರಾಮಕ್ಕೆ ತೆರಳಿತ್ತು. ಗಮನಾರ್ಹ ಅಂಶ ವೆಂದರೆ ಈ ಎಲ್ಲ ಪ್ರದೇಶಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಜನವಸತಿ ಇವೆ. ಯಾವುದೇ ಹಂತದಲ್ಲಿಯೂ ಈ ಹುಲಿ, ಮಾನವ ಸಂಪರ್ಕಕ್ಕೆ ಸಿಕ್ಕಿಲ್ಲ. ಜಬುವಾ ಜಿಲ್ಲೆಯ ಕಸರ್ಬಾರ್ದಿ ಗ್ರಾಮದಲ್ಲಿ ಕೊನೆಯದಾಗಿ ಈ ಹುಲಿ ಪತ್ತೆಯಾಗಿತ್ತು ಎಂದಿದ್ದಾರೆ ಅರಣ್ಯ ಇಲಾಖೆ ಅಧಿಕಾರಿಗಳು.

Advertisement

Udayavani is now on Telegram. Click here to join our channel and stay updated with the latest news.

Next