Advertisement

ಹುಲಿ ಹೋಯಿತು 350 ಕಿ.ಮೀ.

07:30 AM Nov 02, 2018 | Team Udayavani |

ನಾಗ್ಪುರ: ಮಹಾರಾಷ್ಟ್ರದ ಚಂದ್ರಾಪುರದಿಂದ ಮಧ್ಯಪ್ರದೇಶದ ಬೀಟುಲ್‌ ಜಿಲ್ಲೆಗೆ ಹೊಸ ತಾಣವನ್ನು ಹುಡುಕಿ ಪ್ರಯಾಣಿಸಿದ ಹುಲಿ ಈಗ ಇತಿಹಾಸ ಸೃಷ್ಟಿಸಿದೆ. 350 ಕಿ.ಮೀ. ಸಂಚರಿಸಿದ ಹುಲಿ ಇನ್ನೂ ಸುರಕ್ಷಿತ ತಾಣಕ್ಕಾಗಿ ಹುಡುಕಾಟ ನಡೆಸುತ್ತ ಸಾಗುತ್ತಲೇ ಇದೆ. ಅತ್ಯಂತ ಕಡಿಮೆ ಅವಧಿಯಲ್ಲಿ ಅತಿ ಹೆಚ್ಚು ದೂರ ಕ್ರಮಿಸಿದ ದಾಖಲೆಯನ್ನು ಈ ಹುಲಿ ಮಾಡಿದೆ. ಮಧ್ಯಪ್ರದೇಶದವರೆಗೆ ಸಾಗುವ ದಾರಿಯಲ್ಲಿ ಹುಲಿ ಹಲವು ಅಡೆತಡೆಗಳನ್ನು ಎದುರಿಸಿದೆ. ಅಮರಾವತಿ-ನಾಗ್ಪುರ ಹೆದ್ದಾರಿಯನ್ನು ದಾಟಿದ ಹುಲಿ, ಕೃಷಿ ಭೂಮಿ, ಹಳ್ಳಿ ರಸ್ತೆಗಳನ್ನೆಲ್ಲ ದಾಟಿ ಸಾಗಿದೆ. ಅಷ್ಟೇ ಅಲ್ಲ, ಇದು ಸಾಗುವ ದಾರಿಯಲ್ಲಿ ಸಿಕ್ಕ ಇಬ್ಬರು ಮನುಷ್ಯರನ್ನೂ ಸಾಯಿಸಿದೆ.

Advertisement

ಮೊದಲು ಇದರ ಪ್ರಯಾಣ ಪತ್ತೆಯಾಗಿದ್ದು ಅಮರಾವತಿ ಜಿಲ್ಲೆಯಲ್ಲಿ. ಅಷ್ಟರ ವೇಳೆಗಾಗಲೇ ಹುಲಿ 220 ಕಿ.ಮೀ. ಸಾಗಿತ್ತು. ಮೂಲಗಳ ಪ್ರಕಾರ ಇದು ಆಗಸ್ಟ್‌ 15-20ರ ಹೊತ್ತಿಗೆ ಚಂದ್ರಾಪುರ‌ ಸೂಪರ್‌ ಥರ್ಮಲ್‌ ಪವರ್‌ ಸ್ಟೇಷನ್‌ ವ್ಯಾಪ್ತಿಯಿಂದ ಹೊರಟಿತ್ತು. ಈ ಹುಲಿ ಜನಿಸಿದ್ದೇ ಚಂದ್ರಪುರದಲ್ಲಿ. 70 ದಿನಗಳಲ್ಲಿ ಇದು 350 ಕಿ.ಮೀ. ಸಂಚರಿಸಿದೆ.

ಈ ಹಿಂದೆ 2011ರಲ್ಲಿ ಕರ್ನಾಟಕದ ಹುಲಿಯೊಂದು 15 ತಿಂಗಳಲ್ಲಿ 280 ಕಿ.ಮೀ ಸಂಚರಿಸಿತ್ತು. ತನ್ನ ದಾರಿಗೆ ತೀರಾ ಸಮೀಪ ಬಂದವರನ್ನು ಮಾತ್ರ ಹುಲಿ ಸಾಯಿಸಿದೆ. ಹೀಗಾಗಿ ಹುಲಿಯನ್ನು ಕಂಡಲ್ಲಿ ಗುಂಡಿಟ್ಟು ಕೊಲ್ಲುವ ಆದೇಶ ನೀಡಲಾಗಿತ್ತು. ಹಲವು ಬಾರಿ ಇದನ್ನು ಹಿಡಿಯುವ ಅವಕಾಶ ಲಭ್ಯವಾಗಿದ್ದರೂ, ಸ್ಥಳೀಯರ ಗದ್ದಲದಿಂದಾಗಿ ಅವಕಾಶ ತಪ್ಪಿಹೋಗಿದೆ. ಸದ್ಯ ಮಧ್ಯಪ್ರದೇಶ ಹಾಗೂ ಮಹಾರಾಷ್ಟ್ರ ಅರಣ್ಯ ಇಲಾಖೆಯ ತಂಡಗಳು ಹುಲಿ ಸೆರೆಹಿಡಿಯಲು ಯತ್ನಿಸುತ್ತಿವೆ.

Advertisement

Udayavani is now on Telegram. Click here to join our channel and stay updated with the latest news.

Next