Advertisement

ಸರ್ಕಸ್ ಪ್ರದರ್ಶನದ ವೇಳೆ ತರಬೇತುದಾರನ ಮೇಲೆಯೇ ದಾಳಿ ಮಾಡಿದ ಹುಲಿ…ವಿಡಿಯೋ ವೈರಲ್

08:17 PM Jan 03, 2023 | Team Udayavani |

ಇಟಲಿ: ಸರ್ಕಸ್ ಪ್ರದರ್ಶನ ನಡೆಯುತ್ತಿದ್ದ ವೇಳೆ ತರಬೇತುದಾರನ ಮೇಲೆಯೇ ಹುಲಿಯೊಂದು ದಾಳಿ ನಡೆಸಿದ ಘಟನೆ ಇಟಾಲಿಯನ್ ಪ್ರಾಂತ್ಯದ ಲೆಸ್ಸೆಯಲ್ಲಿ ನಡೆದಿದೆ.

Advertisement

ಟ್ವಿಟರ್ ನಲ್ಲಿ ಹಂಚಿಕೊಂಡ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದ್ದು ಇದರಲ್ಲಿ ಸರ್ಕಸ್ ಪ್ರದರ್ಶನ ನೀಡುತ್ತಿರುವ ವ್ಯಕ್ತಿಯೊಬ್ಬ ಪ್ರದರ್ಶನ ನೀಡುತ್ತಿರುವ ವೇಳೆ ಇದ್ದಕ್ಕಿದ್ದಂತೆ ಅಲ್ಲೇ ಇದ್ದ ಇನ್ನೊಂದು ಹುಲಿ ತರಬೇತುದಾರನ ಮೇಲೆ ಎರಗಿ ಕಾಲು, ಕುತ್ತಿಗೆಗೆ ಗಂಭೀರ ಗಾಯಗೊಳಿಸಿದೆ.

ಗಂಭೀರ ಗಾಯಗೊಂಡ ತರಬೇತುದಾರನನ್ನು ಇವಾನ್ ಓರ್ಫೀ (31) ಎನ್ನಲಾಗಿದೆ, ಕೂಡಲೇ ಅಲ್ಲಿದ್ದ ಇತರ ತರಬೇತುದಾರರು ಹುಲಿಯ ದಾಳಿಯಿಂದ ತಪ್ಪಿಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಹುಲಿ ದಾಳಿ ನಡೆಸಿದ ಘಟನೆಯಿಂದ ಸರ್ಕಸ್ ನೋಡಲು ಬಂದಿದ್ದ ಜನರು ಗಾಬರಿಗೊಂಡು ದಿಕ್ಕುಪಾಲಾಗಿ ಒಡಲು ಆರಂಭಿಸಿದ್ದಾರೆ.

ಕಳೆದ ಹಲವಾರು ವರ್ಷಗಳಿಂದ ಸರ್ಕಸ್ ನಲ್ಲೇ ಜೀವನ ನಡೆಸುತ್ತಿದ್ದ ತರಬೇತುದಾರ ಹುಲಿ ದಾಳಿಯಿಂದ ಕಂಗೆಟ್ಟಂತಾಗಿದೆ. ಅಲ್ಲದೆ ಈ ಘಟನೆಯಿಂದ ಪ್ರೇಕ್ಷಕರೂ ಆಘಾತಕ್ಕೆ ಒಳಗಾಗಿದ್ದಾರೆ.

Advertisement

ಇದನ್ನೂ ಓದಿ: ಕೋವಿಡ್‌ನ 2ನೇ ಬೂಸ್ಟರ್ ಡೋಸ್ ಅಗತ್ಯವಿಲ್ಲ: ಕೇಂದ್ರ ಆರೋಗ್ಯ ಸಚಿವಾಲಯ

Advertisement

Udayavani is now on Telegram. Click here to join our channel and stay updated with the latest news.

Next