Advertisement

ಗ್ರಾಮ ಪರಿಮಿತಿಯಲ್ಲಿ ಹುಲಿ ಹೆಜ್ಜೆ ಪತ್ತೆ :ಆತಂಕ

11:19 AM Nov 05, 2021 | Team Udayavani |

ಹುಣಸೂರು: ನಾಗರಹೊಳೆ ರಾಷ್ಟ್ರೀಯ ಉದ್ಯಾನವನದಂಚಿನ ತಾಲೂಕಿನ ನೇರಳಕುಪ್ಪೆ ಗ್ರಾಮದ ಬಳಿಯ ತೋಟದಲ್ಲಿ ಹುಲಿ ಕಾಣಿಸಿಕೊಂಡಿದ್ದು, ಹಲವೆಡೆ ಹೆಜ್ಜೆ ಸಹ ಪತ್ತೆಯಾಗಿದೆ. ಉದ್ಯಾನದ ಹುಣಸೂರು ವಲಯ ವ್ಯಾಪ್ತಿಯ ಕಚುವಿನಹಳ್ಳಿ ಶ್ರೇಣಿಯ ನೇರಳಕುಪ್ಪೆ ಗ್ರಾಮ ಪರಿಮಿತಿ ವ್ಯಾಪ್ತಿಯ ಹಂದಿಹಳ್ಳ ಅರಣ್ಯ ಪ್ರದೇಶದಿಂದ ಕೆ.ಜಿ.ಹಬ್ಬನಕುಪ್ಪೆಯ ತರಗನ್‌ ಮಾನಿನ ತೋಟಕ್ಕೆ ಹುಲಿ ದಾಟುವುದನ್ನು ತೋಟದ ಉಸ್ತುವಾರಿ ಜಯಣ್ಣ ಕಂಡಿದ್ದು, ಡಿಆರ್‌ಎಫ್‌ಒ ವೀರಭದ್ರಯ್ಯ ಅವರಿಗೆ ತಿಳಿಸಿದ್ದಾರೆ.

Advertisement

ವಿಷಯ ತಿಳಿಯುತ್ತಿದ್ದಂತೆಯೇ ಸಿಬ್ಬಂದಿಯೊಂದಿಗೆ ಭೇಟಿ ನೀಡಿ ಸ್ಥಳ ಮಹಜರು ಮಾಡಿ ಹೆಜ್ಜೆ ಜಾಡನ್ನು ಪರಿಶೀಲಿಸಿ ಹುಲಿ ದಾಟಿರುವುದನ್ನು ಖಚಿತಪಡಿಸಿದ್ದಾರೆ. ಗ್ರಾಮ ಪರಿಮಿತಿಯಲ್ಲಿ ಹುಲಿ ಹೆಜ್ಜೆ ಪತ್ತೆ: ನೇರಳಕುಪ್ಪೆ ಗ್ರಾಮ ಪರಿಮಿತಿಯಲ್ಲಿರುವ ಗ್ರಾಮ ಪಂಚಾಯಿತಿ ಕಚೇರಿ ಮುಂಭಾಗದ ದಿ. ಮಾದೇ ಗೌಡರ ಜಮೀನಿನಲ್ಲಿ ಮಂಗಳವಾರ ಸಹ ರಾತ್ರಿ ಹುಲಿ ಓಡಾಟ ನಡೆಸಿರುವ ಜಾಡು ಪತ್ತೆಯಾಗಿದೆ.

ಇದನ್ನೂ ಓದಿ:- ಧರ್ಮಸ್ಥಳ: ಆದಿಶಂಕರಾಚಾರ್ಯರ ಪ್ರತಿಮೆ ಸಮರ್ಪಣೆ ಕಾರ್ಯಕ್ರಮ ನೇರ ಪ್ರಸಾರ ವೀಕ್ಷಣೆ

ಕಳೆದ ನಾಲ್ಕು ದಿನಗಳ ಹಿಂದಷ್ಟೆ ಕೆ.ಜಿ.ಹಬ್ಬನಕುಪ್ಪೆಯಲ್ಲಿ ಹಸುವಿನ ಮೇಲೆ ಹುಲಿ ದಾಳಿ ನಡೆಸಿ ಕೊಂದಿತ್ತು. ಇದೀಗ ಗ್ರಾಮ ವ್ಯಾಪ್ತಿಯಲ್ಲಿ ಹುಲಿ ಅಡ್ಡಾಡುತ್ತಿ ರುವುದು ಹಳ್ಳಿಗರು ಜಮೀನುಗಳಿಗೆ ತೆರಳಲು ಹೆದರುತ್ತಿದ್ದಾರೆ. ಗ್ರಾಮಸ್ಥರಿಗೆ ಎಚ್ಚರಿಕೆ: ಕಳೆದ ನಾಲ್ಕೈದು ದಿನಗಳಿಂದ ನೇರಳಕುಪ್ಪೆ ಆರಣ್ಯದಂಚಿನ ಪ್ರದೇಶದಲ್ಲಿ ಹುಲಿ ಓಡಾಡುತ್ತಿದ್ದು, ಈ ಭಾಗದ ರೈತರು, ದನಗಾಹಿಗಳು ಅರಣ್ಯದಂಚಿನಲ್ಲಿ ಜಾನುವಾರುಗಳನ್ನು ಬಿಡಬಾರದು ಹಾಗೂ ರಾತ್ರಿ ವೇಳೆ ಎಚ್ಚರಿಕೆಯಿಂದ ಓಡಾಡಬೇಕೆಂದು ಡಿಆರ್‌ಎಫ್‌ಒ ವೀರಭದ್ರಯ್ಯ ಮನವಿ ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next