Advertisement

ಹುಲಿ ಘರ್ಜನೆ ಜೋರಾಗಿದೆ

11:53 AM Oct 27, 2017 | Team Udayavani |

“ಚಿತ್ರಮಂದಿರಕ್ಕೆ ಮಕ್ಕಳನ್ನು ಕರೆದುಕೊಂಡು ಬರಬೇಡಿ. ನೀವು ನೋಡಿ ಖುಷಿಪಡಿ..’
– ಹೀಗೆ ಹೇಳಿದರು ನೀನಾಸಂ ಸತೀಶ್‌. ಅವರು ಹೇಳಿದ್ದು “ಟೈಗರ್‌ ಗಲ್ಲಿ’ ಚಿತ್ರದ ಬಗ್ಗೆ. ಚಿತ್ರ ಇಂದು ಬಿಡುಗಡೆಯಾಗುತ್ತಿದೆ. ಬಿಡುಗಡೆ ಹೊತ್ತಲ್ಲಿ ಸತೀಶ್‌, ಹೀಗೆ ಹೇಳಲು ಕಾರಣ ಚಿತ್ರಕ್ಕೆ ಸಿಕ್ಕ ಸೆನ್ಸಾರ್‌ ಪ್ರಮಾಣ ಪತ್ರ. ಹೌದು, ಸೆನ್ಸಾರ್‌ ಮಂಡಳಿ ಚಿತ್ರಕ್ಕೆ “ಎ’ ಪ್ರಮಾಣ ಪತ್ರ ಕೊಟ್ಟಿದೆ. ಅದಕ್ಕೆ ಕಾರಣ ಚಿತ್ರದ ಖಡಕ್‌ ಡೈಲಾಗ್‌ ಹಾಗೂ ಕೆಲವು ಸನ್ನಿವೇಶಗಳು.

Advertisement

ಹಾಗಂತ ಚಿತ್ರತಂಡಕ್ಕೇನು ಬೇಸರವಿಲ್ಲ. “ಚಿತ್ರಕ್ಕೆ “ಎ’ ಪ್ರಮಾಣ ಪತ್ರ ಸಿಕ್ಕಿದೆ. ಆದರೆ, ನಮಗೆ ಬೇಕಾದ, ಚಿತ್ರಕ್ಕೆ ತುಂಬಾ ಪ್ರಮುಖವಾಗಿರುವ ಸನ್ನಿವೇಶಗಳನ್ನು ಉಳಿಸಿಕೊಳ್ಳುವ ಅವಕಾಶ ಸಿಕ್ಕಿದೆ. ಚಿತ್ರಕ್ಕೆ ಮಕ್ಕಳು ಬಿಟ್ಟು ಬೇರೆ ಎಲ್ಲರೂ ಬರಬಹುದು.  ಆ ತರಹದ ಒಂದು ಸಿನಿಮಾ ಇದು.

ಇಂತಹ ಸಿನಿಮಾ ಬಾರದೇ ಕನ್ನಡದಲ್ಲಿ ತುಂಬಾ ವರ್ಷಗಳೇ ಆಗಿದೆ. ನನಗೆ ಇದು ಹೊಸ ಅನುಭವ. ಮೊದಲ ಬಾರಿಗೆ
ಆ್ಯಕ್ಷನ್‌ ಮಾಡಿದ್ದೇನೆ’ ಎಂದರು. ಇನ್ನು, ಚಿತ್ರದ ಪ್ರಮೋಶನ್‌ನಲ್ಲಿ ಸಹಕರಿಸಿದ ಶಿವರಾಜಕುಮಾರ್‌, ಸುದೀಪ್‌, ವಿಜಯ್‌, ಪ್ರೇಮ್‌, ಯೋಗರಾಜ ಭಟ್‌ ಅವರಿಗೆ ಥ್ಯಾಂಕ್ಸ್‌ ಹೇಳಲು ಸತೀಶ್‌ ಮರೆಯಲಿಲ್ಲ. ಚಿತ್ರವನ್ನು ಪ್ರಚಾರ ಮಾಡಿದ ರೀತಿ ಸತೀಶ್‌ಗೆ ಖುಷಿಕೊಟ್ಟಿದೆಯಂತೆ.

“ನಿರ್ಮಾಪಕ ಯೋಗಿ ಅವರು ಆರಂಭದಲ್ಲಿ ಹೇಳಿದಂತೆ ಸಿನಿಮಾವನ್ನು ಚೆನ್ನಾಗಿ ಪಬ್ಲಿಸಿಟಿ ಮಾಡುತ್ತಿದ್ದಾರೆ. ಈಗಾಗಲೇ ನಮ್ಮ ಚಿತ್ರ ಮೂರು ಕೋಟಿಗೂ ಅಧಿಕ ಮಂದಿಗೆ ತಲುಪಿದೆ. ಪೋಸ್ಟರ್‌ ಅನ್ನು ಕೂಡಾ ಎರಡೆರಡು ಬಾರಿ ಪ್ರಿಂಟ್‌ ಹಾಕಿಸಿದ್ದಾರೆ. ರೈಲ್ವೆ ಸ್ಪೆಷನ್‌ಗಳಲ್ಲೂ ಚಿತ್ರದ ಟ್ರೇಲರ್‌ ಪ್ಲೇ ಆಗುತ್ತಿದೆ’ ಎಂದು ಖುಷಿಯಾದರು. ಚಿತ್ರದ ನಿರ್ದೇಶಕ ರವಿ ಶ್ರೀವತ್ಸ ಹೆಚ್ಚು ಮಾತನಾಡಲಿಲ್ಲ. “ಸಿನಿಮಾ ಬಗ್ಗೆ ಈಗಾಗಲೇ ಎಲ್ಲವನ್ನು ಮಾತನಾಡಿಬಿಟ್ಟಿದ್ದೇನೆ. ಇನ್ನೇನಿದ್ದರೂ ಪ್ರೇಕ್ಷಕರಿಗೆ ಬಿಟ್ಟಿದ್ದು. ನಿರ್ಮಾಪಕ ಕುಮಾರ್‌ ಅವರು ಕಥೆ ಕೇಳಿ, ಜಗತ್ತಿನಲ್ಲಿ ಯಾರೇ ಬಂದು ಹೇಳಿದರೂ ಕಥೆಯಲ್ಲಿ ಒಂದಂಶವನ್ನು ಬದಲಿಸಬೇಡ, ಏನು ಮಾಡ್ಕೊಂಡಿದ್ದೀಯೋ ಅದನ್ನು ಸಿನಿಮಾ ಮಾಡು ಎಂದರು.  ಅದಕ್ಕಿಂತ ದೊಡ್ಡ ಧೈರ್ಯ ಮತ್ತೂಂದಿಲ್ಲ. ಸಿನಿಮಾ ಈ ವಾರ ಬಿಡುಗಡೆಯಾಗುತ್ತಿದೆ. ಪ್ರೋತ್ಸಾಹಿಸಿ, ಬೆನ್ನು ತಟ್ಟಿ’ ಎಂದು ಕೇಳಿಕೊಂಡರು.  

ನಾಯಕಿಯರಾದ ರೋಶನಿ ಹಾಗೂ ಭಾವನಾ ರಾವ್‌ ಕೂಡಾ “ಟೈಗರ್‌ ಗಲ್ಲಿ’ ಬಗ್ಗೆ ಸಾಕಷ್ಟು ನಿರೀಕ್ಷೆ ಇಟ್ಟಿದ್ದಾಗಿ ಹೇಳಿ
ಕೊಂಡರು. ಪೂಜಾ ಲೋಕೇಶ್‌ ಕೂಡಾ ಇಲ್ಲಿ ಪ್ರಮುಖ ಪಾತ್ರ ಮಾಡಿದ್ದು, ದೊಡ್ಡ ಗ್ಯಾಪ್‌ನ ನಂತರ ಬಂದರೂ ಒಳ್ಳೆಯ
ಪಾತ್ರ ಮಾಡಿದ ಖುಷಿ ಅವರಿಗಿದೆಯಂತೆ. ನಿರ್ಮಾಪಕ ಯೋಗಿ ಹೆಚ್ಚು ಮಾತನಾಡಲಿಲ್ಲ.

Advertisement
Advertisement

Udayavani is now on Telegram. Click here to join our channel and stay updated with the latest news.

Next