ಚಿಕ್ಕಮಗಳೂರು : ಹುಲಿ ಅಭಯಾರಣ್ಯ ನಿರ್ಮಿಸುವುದಕ್ಕಾಗಿ ತಮ್ಮ ಗ್ರಾಮವನ್ನು ಸ್ಥಳಾಂತರ ಮಾಡಲಾಗುತ್ತಿದ್ದು, ನಮ್ಮ ಬದುಕನ್ನು ಕಿತ್ತುಕೊಳ್ಳಬೇಡಿ ಎಂದು ಚಿಕ್ಕಮಗಳೂರು ಜಿಲ್ಲೆ ನರಸಿಂಹರಾಜಪುರ ತಾಲೂಕಿನ ಹೆನ್ನಂಗಿ ಗ್ರಾಮದ ಯುವಕನೋರ್ವ ಸಾಮಾಜಿಕ ಜಾಲತಾಣದ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಮಾಡಿದ್ದಾನೆ.
ನರಸಿಂಹರಾಜಪುರ ತಾಲೂಕಿನ ಕೆಲವು ಪ್ರದೇಶಗಳನ್ನು ನಿರ್ಬಂಧಿತ ವಲಯ ಎಂದು ಸರ್ಕಾರ ಗುರುತಿಸಿದೆ. ಅದರಲ್ಲಿ ನಮ್ಮ ಊರು ಹೆನ್ನಂಗಿ ಸಹ ಸೇರಿದೆ ಎಂದು ರಾಕೇಶ್ ಎಂಬ ಯುವಕ ಕೂ ಮೂಲಕ ಮನವಿ ಮಾಡಿದ್ದಾನೆ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ @bsbommai ಎಂದು ಟ್ಯಾಗ್ ಮಾಡಿ ತಮ್ಮ ಅಳಲು ತೋಡಿಕೊಂಡಿದ್ದಾನೆ.
ಹುಲಿ ಅಭಯಾರಣ್ಯ ಮಾಡುವುದಕ್ಕಾಗಿ ಇಲ್ಲಿನ ಜನರನ್ನು ಸ್ಥಳಾಂತರ ಮಾಡಲು ಸ್ಥಳೀಯ ಅಧಿಕಾರಿಗಳು ಮುಂದಾಗಿದ್ದಾರೆ. ಜನರನ್ನು ಇರುವ ಜಾಗದಿಂದ ಇನ್ನೊಂದು ಜಾಗಕ್ಕೆ ಸ್ಥಳಾಂತರ ಮಾಡಿದರೆ ಬದುಕುವುದು ಹೇಗೆ ಸಾಧ್ಯ ಎಂದು ಯುವಕ ಮುಖ್ಯಮಂತ್ರಿಗಳಲ್ಲಿ ಪ್ರಶ್ನಿಸಿದ್ದಾನೆ.
ಇದನ್ನೂ ಓದಿ : ನಿಯಮ ಉಲ್ಲಂಘಿಸಿದ ಬಿಜೆಪಿ ವಿರುದ್ಧವೂ ಪ್ರಕರಣ ದಾಖಲಾಗಬೇಕು: ಡಿಕೆಶಿ ಎಚ್ಚರಿಕೆ