Advertisement

Surathkal ಪೆರ್ಮುದೆಯಲ್ಲಿ ಹುಲಿ – ವದಂತಿ!

11:16 PM Jan 03, 2024 | Team Udayavani |

ಸುರತ್ಕಲ್‌: ಸುರತ್ಕಲ್‌ ಹೊರ ವಲಯದ ಪೆರ್ಮುದೆ ಕಾಯರ್‌ಕಟ್ಟೆ ಗಡು ಪ್ರದೇಶದಲ್ಲಿ ಹುಲಿಯ ಹೆಜ್ಜೆ ಗುರುತು, ಹುಲಿ ಸಂಚರಿಸಿರುವ ಸಿಸಿ ಟಿವಿ ದೃಶ್ಯಾವಳಿ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದ್ದು, ಬುಧವಾರ ಪರಿಸರದ ನಿವಾಸಿಗಳಲ್ಲಿ ಆತಂಕ, ಕುತೂಹಲವನ್ನು ಸೃಷ್ಟಿಸಿತು.

Advertisement

3 ದಶಕಗಳ ಹಿಂದೆ ಎಂಆರ್‌ಪಿಎಲ್‌ ಕಂಪೆನಿಗಾಗಿ ಕಾಯರ್‌ ಕಟ್ಟೆ ಪ್ರದೇಶ ಭೂಸ್ವಾಧೀನ ಗೊಂಡು ದೈವದ ಗಡು ಪಾಡಿ ನೇಮ ಸ್ಥಗಿತಗೊಂಡಿತ್ತು. ಕಳೆದೆರಡು ವರ್ಷಗಳ ಹಿಂದೆ ಸ್ಥಳೀಯ ಪೆರ್ಮುದೆ ಸೋಮನಾಥೇಶ್ವರ ದೇವಸ್ಥಾನದಲ್ಲಿ ನಿರ್ಮಾಣ ಕಾಮಗಾರಿ ನಿರತನಾಗಿದ್ದ ಉತ್ತರ ಭಾರತ ಮೂಲದ ಮುಸ್ಲಿಂ ಕಾರ್ಮಿಕನ ಮೈಮೇಲೆ ದೈವದ ಆವೇಶ ಬಂದ ಹಿನ್ನೆಲೆಯಲ್ಲಿ ಪ್ರಶ್ನಾ ಚಿಂತನೆ ನಡೆಸಿ ಪ್ರಶ್ನೆಯಲ್ಲಿ ಕಂಡುಬಂದಂತೆ ದೈವಕ್ಕೆ ಬೇಕಾದ ಧಾರ್ಮಿಕ ಕಾರ್ಯಕ್ರಮ ಜ. 4ರಂದು ಆಯೋಜಿಸಲಾಗುತ್ತಿದೆ.

ಇದಕ್ಕೂ ಮುನ್ನ ಕಳೆದ ರವಿವಾರ ಸ್ಥಳಕ್ಕೆ ಹೋಗಿದ್ದ ಕೆಲವರಿಗೆ ಪರಿಸರದಲ್ಲಿ ಹುಲಿ ಹೆಜ್ಜೆಯಂತೆ ಇರುವ ಗುರುತು ಕಂಡು ಬಂದಿತ್ತು. ಅವರು ಅದನ್ನು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಮಾಡಿದ್ದರು. ಅದು ಹುಲಿಯ ಹೆಜ್ಜೆಯೋ ಚಿರತೆಯದೋ ಎಂದು ಚರ್ಚೆ ಆರಂಭವಾಗಿತ್ತು. ಆದರೆ ಅರಣ್ಯ ಇಲಾಖೆಯವರು ಹುಲಿ ಬಂದಿರುವ ವಿಚಾರವನ್ನು ನಿರಾಕರಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next