Advertisement

ಆನೇಕಲ್: ಕಾಳೇಶ್ವರಿ- ರಾಗಿಹಳ್ಳಿ ರಸ್ತೆಯಲ್ಲಿ ಕಂಡ ಹುಲಿ; ಗ್ರಾಮಸ್ಥರಲ್ಲಿ ಮನೆಮಾಡಿದ ಆತಂಕ

04:28 PM Dec 23, 2021 | Team Udayavani |

ಆನೇಕಲ್: ಅರಣ್ಯದಲ್ಲಿ ಹಾದು ಹೋಗುವ  ಕಾಳೇಶ್ವರಿ- ರಾಗಿಹಳ್ಳಿ ರಸ್ತೆಯಲ್ಲಿ ಹುಲಿ ಒಂದು ರಸ್ತೆ  ದಾಟುವ ದೃಶ್ಯ ಮೊಬೈಲ್ ನಲ್ಲಿ ಸೆರೆಯಾಗಿದ್ದು, ಈ ಭಾಗದ ಜನರಲ್ಲಿ ಆತಂಕ ಮೂಡಿಸಿದೆ.

Advertisement

ಬುಧವಾರ ರಾತ್ರಿ 10 ಗಂಟೆ ಸುಮಾರಿನಲ್ಲಿ ಕಾಳೇಶ್ವರಿ ಅರಣ್ಯ ಕಾವಲು ದ್ವಾರದ ಮೂಲಕ ರಾಗಿಹಳ್ಳಿ ಕಡೆಗೆ ಕಾರಿನಲ್ಲಿ ಹೊರಟಿದ್ದವರಿಗೆ ಎಡ ಭಾಗದ ಪೊದೆಯಿಂದ ಬಲ ಭಾಗಕ್ಕೆ ಹುಲಿ ಒಂದು ರಸ್ತೆ ದಾಟಿ ಹೋಗುವುದನ್ನು ಕಂಡು ತಮ್ಮ ಮೊಬೈಲ್ ನಲ್ಲಿ ಸರೆಹಿಡಿದು ಕೊಂಡಿದ್ದಾರೆ. ಸದ್ಯ ಈ ದೃಶ್ಯ ವೈರಲ್ ಆಗಿದ್ದು  ರಾಗಿಹಳ್ಳಿ ಸುತ್ತ ಮುತ್ತಲ ಗ್ರಾಮದ ಜನರು , ಈ ಭಾಗದಲ್ಲಿ ಬೈಕ್ ಗಳಲ್ಲಿ ಸಂಚರಿಸುವ ಸವಾರರು ತೀವ್ತ ಆತಂಕ್ಕೆ ಒಳಗಾಗಿದ್ದಾರೆ.

ಕಳೆದ ಏಳು ವರ್ಷಗಳ ಹಿಂದೆ ಬನ್ನೇರುಘಟ್ಟ ಜೈವಿಕ ಉದ್ಯಾನ ವನದ ಸಫಾರಿ ರಸ್ತೆಯಲ್ಲಿ ಮೊಟ್ಟ ಮೊದಲ ಬಾರಿಗೆ ಸಾರ್ವಜನಿಕರಿಗೆ ಹುಲಿ ಕಂಡು ಬಂದಿತ್ತು. ಆದಾದ ಬಳಿ ಎರಡು ಮೂರುವರ್ಷಗಳು ಜೈವಿಕ ಉದ್ಯಾನದ ಸಫಾರಿಯಲ್ಲಿನ ಹುಲಿ ಆವರಣದ ಬೇಲಿ ಬಳಿ ಓಡಾಡುತ್ತ ಸಾಕು ಹುಲಿ ಜೊತೆ ಕಾದಾಡಿ ಸುದ್ದಿ ಆಗಿತ್ತು.

ಕಳೆದ ಆರು ವರ್ಷಗಳಿಂದ  ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನದ ನಾಲ್ಕು ವಲಯಗಳಲ್ಲಿ ಹುಲಿ ಸಂಚರಿಸುತ್ತಿದ್ದು, ತನ್ನ ವ್ಯಾಪ್ತಿಯನ್ನು ವಿಸ್ತರಿಸಿ ಕೊಂಡಿದೆ‌ ಎಂಬುದನ್ನು ಈ ಭಾಗದ ವನ್ಯಜೀವಿ ಆಸಕ್ತರು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next