Advertisement

Tiger claw case: ದೂರು ಕರೆಗಳ ಸುರಿಮಳೆ!

12:50 AM Oct 28, 2023 | Team Udayavani |

ಉಡುಪಿ: ರಾಜ್ಯದಲ್ಲಿ ವನ್ಯಜೀವಿ ಕಾಯ್ದೆ ಉಲ್ಲಂಘನೆ ಸಂಬಂಧಿಸಿ ಹುಲಿ ಉಗುರು ಪ್ರಕರಣದ ತನಿಖೆ ತೀವ್ರಗೊಳ್ಳುತ್ತಿದ್ದಂತೆ ಜಿಲ್ಲೆಯಲ್ಲಿ ದೂರು ಕರೆಗಳ ಸಂಖ್ಯೆ ಹೆಚ್ಚಾಗಿದೆ ಎಂದು ಅರಣ್ಯ ಇಲಾಖೆ ಮೂಲಗಳಿಂದ ತಿಳಿದು ಬಂದಿದೆ.

Advertisement

ವ್ಯಕ್ತಿಯ ಕೊರಳಿನ ಸರದಲ್ಲಿ ಹುಲಿ ಉಗುರು ಇದೆ. ಮನೆಯಲ್ಲಿ ಜಿಂಕೆ ಕೊಂಬು ಇರಿಸಿಕೊಂಡಿದ್ದಾರೆ ಸೇರಿದಂತೆ ಹಲವು ದೂರು ಕರೆಗಳು ಇಲಾಖೆಗೆ ಬರುತ್ತಿವೆ. ಲಿಖೀತವಾಗಿ ಯಾರು ದೂರು ಸಲ್ಲಿಸಿಲ್ಲ. ದೂರವಾಣಿ ಮೂಲಕ ಬಂದಿರುವ ದೂರುಗಳನ್ನು ಪರಿಶೀಲಿಸುತ್ತಿದ್ದೇವೆ. ಸದ್ಯಕ್ಕೆ ವನ್ಯಜೀವಿ ಕಾಯ್ದೆ ಉಲ್ಲಂಘನೆ ಸಂಬಂಧಿಸಿ ಯಾವುದೇ ಪ್ರಕರಣ ದಾಖಲಾಗಿಲ್ಲ ಎಂದು ಅರಣ್ಯ ಇಲಾಖೆಯ ಕುಂದಾಪುರ ಉಪ ವಿಭಾಗದ ಡಿಎಫ್ಒ ಉದಯ ನಾಯ್ಕ ತಿಳಿಸಿದ್ದಾರೆ.

ದೂರು ನೀಡುವ ಸಾರ್ವಜನಿಕರು ಅಧಿಕಾರಿಗಳ ಮೊಬೈಲ್‌ ಸಂಖ್ಯೆಗೆ ಕರೆ ಮಾಡದೆ ಅರಣ್ಯ ಇಲಾಖೆ ದೂರು ವಿಭಾಗ 1926ಕ್ಕೆ ದೂರು ನೀಡಬೇಕು. ಅಲ್ಲಿಗೆ ನೀಡಿದ ದೂರು ಅಧಿಕೃತವಾಗಿ ದಾಖಲಾಗುತ್ತದೆ. ಈ ಮೂಲಕ ತನಿಖೆ ನಡೆಸಿ ಸರಕಾರಕ್ಕೆ ವರದಿ ಸಲ್ಲಿಸುವ ಪ್ರಕ್ರಿಯೆ ನಡೆಯಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸರಕಾರದಿಂದ ಹೊಸ ಮಾರ್ಗಸೂಚಿ ಸಾಧ್ಯತೆ
ಈಗಾಗಲೇ ಮನೆಗಳಲ್ಲಿ ನವಿಲು ಗರಿ ಹೊಂದಿರುವುದು, ಹುಲಿ ಉಗುರು ಸಹಿತ ಮೊದಲಾದ ಪುರಾತನ ಪಳಿಯುಳಿಕೆ ಇದ್ದರೆ ಏನು ಮಾಡಬೇಕು ಎಂಬ ಪ್ರಶ್ನೆಗಳು ಸಾರ್ವಜನಿಕರಿಂದ ಕೇಳಿ ಬರುತ್ತಿವೆ. ಹುಲಿ ಉಗುರು, ನವಿಲು ಗರಿ, ಚರ್ಮ, ಕೊಂಬು ಇಟ್ಟುಕೊಳ್ಳುವುದು ವನ್ಯಜೀವಿ ಕಾಯ್ದೆ ಉಲ್ಲಂಘನೆಯಾಗಲಿದೆ.

ರಾಜ್ಯ ಸರಕಾರ ಈ ಬಗ್ಗೆ ಗೊಂದಲ ನಿವಾರಿಸಲು ಸಮಿತಿಯೊಂದನ್ನು ರಚಿಸಿದ್ದು, ಈ ಸಮಿತಿ ನಿರ್ಣಯ ತೆಗೆದುಕೊಂಡು ಇನ್ನೆರಡು ದಿನಗಳಲ್ಲಿ ಹೊಸ ಮಾರ್ಗಸೂಚಿ ಹೊರಡಿಸುವ ಸಾಧ್ಯತೆ ಇದೆ ಎಂದು ಅರಣ್ಯ ಇಲಾಖೆ ಮೂಲಗಳಿಂದ ತಿಳಿದು ಬಂದಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next