ಹುಣಸೂರು: ನಾಗರಹೊಳೆ ರಾಷ್ಟ್ರೀಯ ಉದ್ಯಾನವನದಲ್ಲಿ ಹುಲಿ ಗಣತಿ ವೇಳೆಯೇ ಹುಲಿ ದಾಳಿಗೆ ಸಿಲುಕಿ ಎರಡು ಹುಲಿ ಮರಿಗಳು ಸಾವನ್ನಪ್ಪಿರುವ ಸಾವನ್ನಪ್ಪಿರುವ ಘಟನೆ ಡಿ.ಬಿ.ಕುಪ್ಪೆ ವಲಯದಲ್ಲಿ ನಡೆದಿದೆ.
ಉದ್ಯಾನದ ಡಿ.ಬಿ. (ದೊಡ್ಡ ಬೈರನಕುಪ್ಪೆ)ಕುಪ್ಪೆವಲಯದ ಕಾಕನಕೋಟೆ ಅರಣ್ಯ ಪ್ರದೇಶದಲ್ಲಿ ನಾಗರಹೊಳೆ ಉದ್ಯಾನದ ಹುಲಿಯೋಜನೆ ಮುಖ್ಯಸ್ಥ ಮಹೇಶ್‌ಕುಮಾರ್ ನೇತೃತ್ವದ ತಂಡ ಗಣತಿ ನಡೆಸುತ್ತಿದ್ದ ವೇಳೆ ಸುಮಾರು 8-9ತಿಂಗಳ ಹುಲಿ ಮರಿಗಳ ಶವ ಪತ್ತೆಯಾಗಿದ್ದು, ಇದರಲ್ಲಿ ಒಂದು ಹೆಣ್ಣು ಮರಿ ಶವವಾಗಿದ್ದು, ಮತ್ತೊಂದು ಹುಲಿಮರಿಯ ಮಾಂಸವನ್ನು ಬಲಿಷ್ಠ ಹುಲಿ ತಿಂದು ಹಾಕಿರಬಹುದೆಂದು ಶಂಕಿಸಲಾಗಿದ್ದು, ಯಾವುದೆಂದು ತಿಳಿದು ಬಂದಿಲ್ಲ. ಪರೀಕ್ಷೆಗಾಗಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ.
ಸ್ಥಳದಲ್ಲೇ ಹುಲಿಗಳ ಮರಣೋತ್ತರ ಪರೀಕ್ಷೆಯು ಡಿಸಿಎಫ್ ಮಹೇಶ್ ಕುಮಾರ್, ಎನ್.ಟಿ.ಸಿ.ಎ.ಯ ಗುಂಡ್ಲುಪೇಟೆಯ ರಘುರಾಂ, ವನ್ಯಜೀವಿ ಪರಿಪಾಲಕಿ ಕೃತಿಕಾ ಸಮ್ಮುಖದಲ್ಲಿ ನಾಗರಹೊಳೆ ಪಶುವೈದ್ಯ ಡಾ.ರಮೇಶ್ ಹಾಗೂ ಎಚ್.ಡಿ.ಕೋಟೆ ಪಶುವೈದ್ಯ ಡಾ.ಪ್ರಸನ್ನ ನಡೆಸಿದರು. ಎಸಿಎಫ್. ಮಹದೇವ್, ಆರ್.ಎಫ್.ಓ.ಗಳಾದ ಮಧು, ಸಿದ್ದರಾಜು ಇದ್ದರು. ನಂತರ ಅಲ್ಲಿಯೇ ಹುಲಿ ಮರಿಗಳ ಶವವನ್ನು ಸುಟ್ಟು ಹಾಕಲಾಯಿತು.
ಮುಖ್ಯಸ್ಥರ ಕಣ್ಣಿಗೆ ಬಿದ್ದ ಹುಲಿಮರಿ ಶವಗಳು:
ಬಲಿಷ್ಟ ಹುಲಿಯೊಂದು ಹೆಣ್ಣು ಹುಲಿಯನ್ನು ಸೇರುವ ವೇಳೆ ಘಟನೆ ಸಂಭವಿಸಿರಬಹುದೆAದು ಶಂಕಿಸಲಾಗಿದೆ. ಒಂದು ಮರಿಯ ಎರಡೂ ಕಾಲುಗಳು ಮುರಿದಿದೆ. ಮತ್ತೊಂದರ ಮಾಂಸ ತಿಂದುಹಾಕಿದ ಸ್ಥಿತಿಯಲ್ಲಿ ಶವಗಳು ಪತ್ತೆಯಾಗಿದು. ಘಟನೆ ನಡೆದ ಹತ್ತಿರದಲ್ಲೇ ಹುಲಿಯೊಂದು ಓಡಾಡಿರುವ ಗುರುತುಗಳು ಪತ್ತೆಯಾಗಿದೆ, ತಾವು ಹುಲಿ ಗಣತಿ ಸಂಬಂಧ ಮಂಗಳವಾರದಂದು ಕಾಕನಕೋಟೆ ಅರಣ್ಯ ಪ್ರದೇಶದ ಬೀಟ್‌ನಲ್ಲಿ ಗಣತಿಗೆ ತೆರಳುತ್ತಿದ್ದ ಸಿಬ್ಬಂದಿಗಳ ತಂಡದಲ್ಲಿದ್ದ ತಮಗೆ ಮರಿ ಹುಲಿಗಳ ಶವ ಕಾಣಿಸಿತ್ತೆಂದು ನಾಗರಹೊಳೆ ಮುಖ್ಯಸ್ಥ ಡಿ.ಮಹೇಶ್‌ಕುಮಾರ್ ತಿಳಿಸಿದ್ದಾರೆ.