Advertisement
ಕೆಲವು ದಿನಗಳ ಹಿಂದೆಯಷ್ಟೇ ಇದೇ ಭಾಗದಲ್ಲಿ ಹಸುವೊಂದು ಹುಲಿ ದಾಳಿಯಿಂದ ಮೃತಪಟ್ಟಿತ್ತು. ಕಳೆದ ತಿಂಗಳು ಸಿದ್ದಾಪುರ ವ್ಯಾಪ್ತಿಯಲ್ಲಿ ಹುಲಿಯೊಂದನ್ನು ಸೆರೆ ಹಿಡಿದು ಸ್ಥಳಾಂತರಿಸಲಾಗಿತ್ತು. ಆದರೆ ಇದೀಗ ಮತ್ತೂಂದು ಹುಲಿ ಉಪಟಳ ನೀಡಲು ಆರಂಭಿಸಿದ್ದರಿಂದ ಗ್ರಾಮಸ್ಥರು ಆತಂಕಗೊಂಡಿದ್ದಾರೆ.
ಮಡಿಕೇರಿ : ನೆಲ್ಯಹುದಿಕೇರಿ ಭಾಗದಲ್ಲಿ ಕಾಡಾನೆ ಉಪಟಳ ಮಿತಿ ಮೀರಿದೆ. ತೋಟ ಹಾಗೂ ಗದ್ದೆಗಳಿಗೆ ಲಗ್ಗೆ ಇಡುತ್ತಿರುವ ಕಾಡಾನೆಗಳ ಹಿಂಡು ಭಾರೀ ನಷ್ಟ ಉಂಟು ಮಾಡುತ್ತಿವೆ.
ಕಳೆದೊಂದು ವಾರದಿಂದ ಬೀಡು ಬಿಟ್ಟಿರುವ ಕಾಡಾನೆಗಳು ಕೃಷಿಕರಾದ ಕೆ. ಎಂ.ಚಂದ್ರಶೇಖರ್ ಹಾಗೂ ಬೆಟ್ಟದಕಾಡು ರಮೇಶ್ ಅವರ ಅಡಿಕೆ ತೋಟ ಮತ್ತು ಭತ್ತದ ಗದ್ದೆಗಳಿಗೆ ನುಗ್ಗಿ ಹಾನಿ ಮಾಡಿದೆ. ಫಸಲು ಬಿಡಲು ಸಿದ್ಧವಾಗಿದ್ದ ಅಡಿಗೆ ಮರಗಳು ನೆಲಕಚ್ಚಿವೆ. ಗದ್ದೆಯಲ್ಲಿದ್ದ ಸಸಿಗಳು ನಾಶವಾಗಿವೆ. ಕಾಡಾನೆಗಳ ಉಪಟಳದಿಂದ ಬೇಸತ್ತಿರುವ ಕೃಷಿಕರು ಹಾಗೂ ಗ್ರಾಮಸ್ಥರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಬೆಳೆಹಾನಿ ನಿರಂತರವಾಗಿದ್ದು, ಕಳೆದ ಒಂದೂವರೆ ವರ್ಷದಿಂದ ಪರಿಹಾರದ ಅರ್ಜಿಯನ್ನು ವಿಲೇವಾರಿ ಮಾಡಿಲ್ಲ. ಇದೀಗ ಮತ್ತೆ ಬೆಳೆನಾಶವಾಗಿದ್ದು, ಕಳೆದ ಬಾರಿಯ ಪರಿಹಾರವೇ ಬಿಡುಗಡೆಯಾಗದೇ ಇರುವಾಗ ಮತ್ತೆ ಅರ್ಜಿ ಸಲ್ಲಿಸಿ ಏನು ಪ್ರಯೋಜನ ಎಂದು ಪ್ರಶ್ನಿಸಿದ್ದಾರೆ.
Related Articles
Advertisement