Advertisement

ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಸೈಕಲ್ ಸವಾರಿ-ಚಿತ್ರಕ್ಕೆ ಬಣ್ಣ

11:51 AM Jun 03, 2019 | Suhan S |

ಹುಬ್ಬಳ್ಳಿ: ವಿಕಾಸ ನಗರ ಸಿದ್ಧಲಿಂಗೇಶ್ವರ ಕಾಲೋನಿಯ ಸೂಪರ್‌ ಬ್ರೇನ್‌ ಸಂಸ್ಥೆ ಆಶ್ರಯದಲ್ಲಿ ಮಕ್ಕಳಿಂದ ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಸೈಕಲ್ ಸವಾರಿ ಹಾಗೂ ಬಸವೇಶ್ವರ ಚಿತ್ರಕ್ಕೆ ಬಣ್ಣ ತುಂಬುವ ಕಾರ್ಯಕ್ರಮ ರವಿವಾರ ನಡೆಯಿತು.

Advertisement

ಸಂಗೊಳ್ಳಿ ರಾಯಣ್ಣ ಪ್ರತಿಮೆ ಮುಂಭಾಗದಿಂದ ನಡೆದ ಸೈಕಲ್ ಸವಾರಿಯಲ್ಲಿ ಹಲವು ಮಕ್ಕಳು ಪಾಲ್ಗೊಂಡು ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಮೂರುಸಾವಿರ ಮಠದವರೆಗೆ ಸೈಕಲ್ ಜಾಥಾ ನಡೆಸಿದರು. ನಂತರ ಮೂರುಸಾವಿರ ಮಠದ ಆವರಣದಲ್ಲಿ ಶ್ರೀ ಬಸವೇಶ್ವರ ಭಾವಚಿತ್ರಕ್ಕೆ ಕಣ್ಣು ಮುಚ್ಚಿಕೊಂಡೇ ಬಣ್ಣ ತುಂಬಿದರು.

ಸಭೆಯ ಅಧ್ಯಕ್ಷತೆ ವಹಿಸಿದ್ದ ವಿಧಾನ ಪರಿಷತ್‌ ಸದಸ್ಯ ಬಸವರಾಜ ಹೊರಟ್ಟಿ ಮಾತನಾಡಿ, ವೈಜ್ಞಾನಿಕ ತರಬೇತಿ ನೀಡುತ್ತಿರುವ ಅನುಷಾ ಕೊರವಿ ಅವರ ಕಾರ್ಯ ಶ್ಲಾಘನೀಯ. ಇಂದಿನ ದಿನಗಳಲ್ಲಿ ಮಕ್ಕಳಿಗೆ ಇಂತಹ ತರಬೇತಿಯ ಅವಶ್ಯಕತೆ ಇದೆ. ಮಕ್ಕಳ ಬೌದ್ಧಿಕ ತರಬೇತಿ ಬಗ್ಗೆ ನಾವೆಲ್ಲ ಒತ್ತು ಕೊಡಬೇಕೆಂದರು.

ಸಾನ್ನಿಧ್ಯ ವಹಿಸಿದ್ದ ಮೂರುಸಾವಿರ ಮಠದ ಜಗದ್ಗುರು ಶ್ರೀ ಗುರುಸಿದ್ಧ ರಾಜಯೋಗೀಂದ್ರ ಸ್ವಾಮೀಜಿ, ಡಾ| ಸತೀಶ್‌ ಛಬ್ಬಿ ಮಾತನಾಡಿದರು. ಮಹಾಂತೇಶ ಗೋಂಗಡಶೆಟ್ಟಿ, ರುದ್ರಪ್ಪ ಹಲಗತ್ತಿ, ರಾಜಣ್ಣ ಕೊರವಿ, ನಂದಾ ಆನೆಗುಂದಿ, ಡಾ| ವಿಶ್ವನಾಥ ಕೊರವಿ, ಪ್ರಭು ಶೆಟ್ಟರ, ಪಟ್ಟಣಶೆಟ್ಟಿ, ಜೋಡಳ್ಳಿ, ಅರುಣ ಪಾಟೀಲ, ಈರಣ್ಣ ಎಮ್ಮಿ, ತರಬೇತಿದಾರೆ ಅನುಷಾ ಕೊರವಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next