Advertisement

Ticketless travel: ಟಿಕೆಟ್‌ ರಹಿತ ಪ್ರಯಾಣ; ತಿಂಗಳಲ್ಲೇ 8 ಲಕ್ಷ ದಂಡ ವಸೂಲಿ

03:00 PM Jun 11, 2024 | Team Udayavani |

ಬೆಂಗಳೂರು: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ)ಯು ಏಪ್ರಿಲ್‌ ಒಂದೇ ತಿಂಗಳಲ್ಲಿ ಟಿಕೆಟ್‌ ರಹಿತ ಪ್ರಯಾಣಿಕರಿಂದ 7,95,540 ರೂ. ದಂಡ ವಸೂಲಿ ಮಾಡಿದ್ದಲ್ಲದೇ, ಸಂಸ್ಥೆಯ ನಿರ್ವಾಹಕರ ವಿರುದ್ಧ 1023 ಪ್ರಕರಣ ದಾಖಲಿಸಿಕೊಂಡಿದೆ.

Advertisement

ಬಿಎಂಟಿಸಿ ವಾಹನಗಳಲ್ಲಿ ಸಂಚರಿಸುವ ಪ್ರಯಾಣಿಕರು ಟಿಕೆಟ್‌ ಪಡೆಯದೆ ಅನಧಿಕೃತವಾಗಿ ಪ್ರಯಾಣಿಸಿದವರನ್ನು ಹಾಗೂ ಸಂಸ್ಥೆಯ ಸಾರಿಗೆ ಆದಾಯದ ಸೋರಿಕೆ ತಡೆಗಟ್ಟುವ ನಿಟ್ಟಿನಲ್ಲಿ, ಸಂಸ್ಥೆಯ ತನಿಖಾ ತಂಡವು ಏಪ್ರಿಲ್‌ ತಿಂಗಳಿನಲ್ಲಿ ಒಟ್ಟು 19,146 ಟ್ರಿಪ್‌ಗ್ಳನ್ನು ತಪಾಸಿಸಿ, 3,924 ಟಿಕೆಟ್‌ ರಹಿತ ಪ್ರಯಾಣಿಕರನ್ನು ಪತ್ತೆಹಚ್ಚಲಾಗಿದೆ. ಜತೆಗೆ ಮೋಟಾರು ವಾಹನ ಕಾಯ್ದೆ 1988ರ ಕಾಲಂ 177 ಮತ್ತು 94ರ ಪ್ರಕಾರ, ಮಹಿಳಾ ಪ್ರಯಾಣಿಕರಿಗೆಂದೇ ಮೀಸಲಾಗಿರುವ ಆಸನಗಳಲ್ಲಿ ಕುಳಿತು ಪ್ರಯಾಣಿಸಿರುವ 489 ಪುರುಷ ಪ್ರಯಾಣಿಕರಿಗೆ ಒಟ್ಟು 48,900 ರೂ. ದಂಡ ವಿಧಿಸಲಾಗಿದೆ.

ಒಟ್ಟಾರೆ ಏಪ್ರಿಲ್‌ ತಿಂಗಳಲ್ಲಿ 4,413 ಪ್ರಯಾಣಿಕರಿಂದ 8,44,440 ರೂ. ದಂಡ ವಸೂಲಿ ಮಾಡಲಾಗಿದೆ ಎಂದು ಸಂಸ್ಥೆ ಪ್ರಕಟಣೆಯಲ್ಲಿ ತಿಳಿಸಿದೆ. ಈ ಸಂದರ್ಭಗಳಲ್ಲಿ ಮಹಿಳಾ ಪ್ರಯಾಣಿಕರಿಗೆಂದೇ ಮೀಸಲಾಗಿರುವ ಆಸನಗಳಲ್ಲಿ ಕುಳಿತು ಪ್ರಯಾಣಿಸಿರುವ 236 ಪುರುಷ ಪ್ರಯಾಣಿಕರಿಂದ ಒಟ್ಟು 13,800 ರೂ. ದಂಡ ವಸೂಲಿ ಆಗಿದೆ. ಆ ಮೂಲಕ ಜೂನ್‌ ತಿಂಗಳಲ್ಲಿ 2,751 ಪ್ರಯಾಣಿಕರಿಂದ ಒಟ್ಟು 4,41,420 ರೂ. ದಂಡ ವಸೂಲಿ ಮಾಡಲಾಗಿದೆ ಎಂದು ಬಿಎಂಟಿಸಿ ಅಧಿಕಾರಿಗಳು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next