Advertisement
ತಮಗೇ ಟಿಕೆಟ್ ಸಿಗಬಹುದು ಎಂಬ ನಿರೀಕ್ಷೆಯಿಂದ ಅರ್ಜಿ ಸಲ್ಲಿಸಿರುವ ಆಕಾಂಕ್ಷಿಗಳಿಗೆ ನಿರಾಶೆಯಾಗಿದ್ದು, ಇದರ ಪರಿಣಾಮ ಕೆಲವು ಕ್ಷೇತ್ರಗಳಲ್ಲಿ ಬಂಡಾಯ ಅಥವಾ ಪಕ್ಷಾಂತರ ಕಾಣಿಸಬಹುದು. ಆದರೆ ಬಹುತೇಕ ಕ್ಷೇತ್ರಗಳಲ್ಲಿ ಪ್ರಭಾವಿ ಶಾಸಕರ ವಿರುದ್ಧ “ನಾಮಕಾವಸ್ಥೆ’ಗೆ ಅರ್ಜಿ ಸಲ್ಲಿಸಿರುವವರ ಸಂಖ್ಯೆ ಹೆಚ್ಚಿದೆ ಎನ್ನಲಾಗಿದೆ.
Related Articles
Advertisement
ಕೆಪಿಸಿಸಿ ಚುನಾವಣಾ ಸಮಿತಿ ವತಿಯಿಂದ ಸಿದ್ಧಪಡಿಸಿರುವ ಪಟ್ಟಿಯಲ್ಲಿ ಹೆಸರು ಇಲ್ಲದಿದ್ದರೂ ಎಐಸಿಸಿ ತೀರ್ಮಾನ ಅಂತಿಮವಾಗುವ ಕಾರಣ ಬ್ಲಾಕ್ ಹಾಗೂ ಜಿಲ್ಲಾ ಮಟ್ಟದಿಂದ ಶಿಫಾರಸು ಆಗಿರುವ ಪಟ್ಟಿಯಲ್ಲಿ ಇದೆ ಎಂಬ ಕಾರಣ ಮುಂದಿಟ್ಟು ಈಗಾಗಲೇ ಹೈಕಮಾಂಡ್ ಕದ ತಟ್ಟಲು ಮುಂದಾಗಿದ್ದಾರೆ.
ಪೈಪೋಟಿ: ಈ ಮಧ್ಯೆ, ಹಾಲಿ ಶಾಸಕರು ಇರುವ ಕ್ಷೇತ್ರಗಳಿಗಿಂತ ಬಿಜೆಪಿ ಹಾಗೂ ಜೆಡಿಎಸ್ ಗೆಲುವು ಸಾಧಿಸಿರುವ ಕ್ಷೇತ್ರಗಳಲ್ಲೇ ಅತಿ ಹೆಚ್ಚು ಪೈಪೋಟಿ ಇದೆ. ಅಲ್ಲಿ ಒಬ್ಬರಿಗೆ ಟಿಕೆಟ್ ಕೊಟ್ಟರೆ ಮತ್ತೂಬ್ಬರು ಬೇರೊಂದು ಪಕ್ಷ ಅಥವಾ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಲು ತಯಾರಿ ನಡೆಸಿದ್ದಾರೆ.
ಇದೇ ಕಾರಣಕ್ಕೆ ತೀವ್ರ ಪೈಪೋಟಿ ಇಲ್ಲದ 130 ರಿಂದ 140 ಕ್ಷೇತ್ರಗಳ ಮೊದಲ ಪಟ್ಟಿ ಬಿಡುಗಡೆ ಮಾಡಿ ಪೈಪೋಟಿ ಇರುವ ಕ್ಷೇತ್ರಗಳಿಗೆ ಕೊನೇ ಗಳಿಗೆಯಲ್ಲಿ ಬಿಡುಗಡೆ ಮಾಡಲು ನಿರ್ಧರಿಸಲಾಗಿದೆ.
ಅಭ್ಯರ್ಥಿಗಳ ಆಯ್ಕೆಗಾಗಿ ನಡೆದ ಸಭೆ ಸುಸೂತ್ರವಾಗಿ ಆಗಿದೆ. ಆದಷ್ಟು ಬೇಗ ಹೈಕಮಾಂಡ್‌ಗೆ ಕರಡು ಪಟ್ಟಿ ರವಾನೆ ಮಾಡಲಾಗುವುದು. ಫೆಬ್ರವರಿ 15 ರೊಳಗೆ ಪಟ್ಟಿ ಬಿಡುಗಡೆಯಾಗಲಿದೆ.– ಡಿ.ಕೆ.ಶಿವಕುಮಾರ್