ಬೆಂಗಳೂರು : ಮೇ 19 ರಂದು ನಡೆಯುವ ಚಿಂಚೋಳಿ ಮೀಸಲು ಮತ್ತು ಕುಂದಗೋಳ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಗಾಗಿ ಬಿಜೆಪಿಯಲ್ಲಿ ಟಿಕೆಟ್ ಫೈಟ್ ಆರಂಭವಾಗಿದೆ.
ಕಾಂಗ್ರೆಸ್ ಶಾಸಕ ಡಾ.ಉಮೇಶ್ ಜಾಧವ್ ರಾಜೀನಾಮೆ ನೀಡಿ ಬಿಜೆಪಿ ಸೇರಿದ ಕಾರಣ ಚಿಂಚೋಳಿಯಲ್ಲಿ ಚುನಾವಣೆ ಎದುರಾಗಿದೆ. ಸಚಿವ ಸಿ.ಎಸ್.ಶಿವಳ್ಳಿ ಅವರು ಆಕಾಲಿಕ ನಿಧನ ಹೊಂದಿದ ಕಾರಣ ಕುಂದಗೋಳದಲ್ಲಿ ಉಪಚುನಾವಣೆ ಎದುರಾಗಿದೆ.
ಕುಂದೋಗಳ ಕ್ಷೇತ್ರದಲ್ಲಿ 2018 ರಲ್ಲಿ ಅಭ್ಯರ್ಥಿಯಾಗಿದ್ದ ಚಿಕ್ಕನಗೌಡ್ರು ಮತ್ತು ಎಂ.ಆರ್.ಪಾಟೀಲ್ ನಡುವೆ ಟಿಕೆಟ್‌ಗಾಗಿ ತೀವ್ರ ಪೈಪೋಟಿ ನಡೆಯುತ್ತಿದ್ದು, ರಾಜ್ಯ ಬಿಜೆಪಿ ನಾಯಕರ ಬಳಿ ಇಬ್ಬರೂ ಲಾಬಿ ನಡೆಸುತ್ತಿದ್ದಾರೆ. ಚಿಕ್ಕನಗೌಡ್ರ ಯಡಿಯೂರಪ್ಪ ಅವರ ಸಂಬಂಧಿಕರಾಗಿದ್ದಾರೆ.
ಚಿಂಚೋಳಿಯಲ್ಲಿ ಟಿಕೆಟ್‌ಗಾಗಿ ಮಾಜಿ ಶಾಸಕ, ಬಿ.ಎಸ್.ಯಡಿಯೂರಪ್ಪ ಆಪ್ತ ಸುನೀಲ್ ವಲ್ಯಾಪುರೆ ಮತ್ತು ಡಾ.ಉಮೇಶ್ ಜಾಧವ್ ಕುಟುಂಬಸ್ಥರ ನಡೆವೆ ಪೈಪೋಟಿ ಆರಂಭವಾಗಿದೆ. ಸುನೀಲ್ ಮತ್ತುಜಾಧವ್ ಇಬ್ಬರೂ ಬೆಂಗಳೂರಿನಲ್ಲಿದ್ದು ಬಿಜೆಪಿ ನಾಯಕರ ಬಳಿ ಟಿಕೆಟ್ ಗಿಟ್ಟಿಸಿಕೊಳ್ಳಲು ಕಸರತ್ತುನಡೆಸುತ್ತಿದ್ದಾರೆ.
ಇನ್ನೊಂದೆಡೆ ಬಿಜೆಪಿ ಚಿಂಚೋಳಿಯಿಂದ ಮಾಜಿ ಮುಖ್ಯ ಕಾರ್ಯದರ್ಶಿ ರತ್ನ ಪ್ರಭಾ ಅವರನ್ನು ಕಣಕ್ಕಿಳಿಸಲು ಮುಂದಾಗಿದೆ ಎಂದು ಹೇಳಲಾಗಿದೆ.
ಮೇ 23 ರಂದು ಲೋಕಸಭಾ ಚುನಾವಣಾ ಫಲಿತಾಂಶದೊಂದಿಗೆ ಎರಡೂ ಕ್ಷೇತ್ರಗಳ ಫಲಿತಾಂಶ ಪ್ರಕಟವಾಗಲಿದೆ.