Advertisement
ತಾಲೂಕಿನ ತ್ಯಾಮಗೊಂಡ್ಲು ಗ್ರಾಮ ಪಂಚಾಯ್ತಿಯನ್ನು ಪಟ್ಟಣ ಪಂಚಾಯ್ತಿಯಾಗಿ ಮಾಡುವಂತೆ ಸ್ಥಳೀಯ ಜನಪ್ರತಿನಿಧಿಗಳು 2016ರಿಂದಲೇ ಜಿಲ್ಲಾಧಿ ಕಾರಿಗೆ ಅರ್ಜಿ ಸಲ್ಲಿಸಿದ್ದರು. ಕಳೆದ 7ವರ್ಷದಿಂದ ಯಾವುದೇ ಬೆಳವಣಿಗೆಗಳು ಕಂಡು ಬಂದಿರಲಿಲ್ಲ.
Related Articles
Advertisement
ಚುನಾವಣೆ ಬಹಿಷ್ಕಾರ: ತ್ಯಾಮಗೊಂಡ್ಲು ಗ್ರಾಪಂಗೆ 2020 ಡಿಸೆಂಬರ್ ಮತ್ತು 2021ಮಾರ್ಚ್ ತಿಂಗಳಲ್ಲಿ ಘೋಷಣೆಯಾದ ಗ್ರಾಪಂ ಚುನಾವಣೆ ಯಲ್ಲಿ ಒಂದೇ ಒಂದು ನಾಮಪತ್ರವನ್ನು ಸಲ್ಲಿಸದೇ ತ್ಯಾಮಗೊಂಡ್ಲು ಜನತೆ ಚುನಾವಣೆಯನ್ನು ಬಹಿಷ್ಕಾರ ಮಾಡಿದ್ದರು.ಗ್ರಾಮ ಪಂಚಾಯ್ತಿಯನ್ನು ಪಟ್ಟಣ ಪಂಚಾಯ್ತಿಯಾಗಿ ಮಾಡುವವರೆಗೂ ಯಾವುದೇ ಚುನಾವಣೆಗೂ ಯಾರೂ ನಾಮಪತ್ರ ಸಲ್ಲಿಸುವುದಿಲ್ಲ ಎಂದು ಗ್ರಾಮದ ಮುಖಂಡರು ನಿರ್ಧರಿಸಿ ಸರ್ಕಾರಕ್ಕೆ ತಮ್ಮ ಬೇಡಿಕೆ ಸಲ್ಲಿಸಿದ್ದರೂ ಇದುವರೆಗೂ ಯಾವುದೇ ಅನುಕೂಲವಾಗಿಲ್ಲ.
ಸೌಕರ್ಯಗಳ ಕೊರತೆ: ತ್ಯಾಮಗೊಂಡ್ಲು ನೆಲಮಂಗಲ ತಾಲೂಕಿನಲ್ಲಿಯೇ ಹೆಚ್ಚು ಜನಸಂಖ್ಯೆಯನ್ನು ಹೊಂದಿರುವ ಹೋಬಳಿ ಕೇಂದ್ರ. ಆರ್ಥಿಕ ವಾಗಿ ನಾನಾ ಚಟುವಟಿಕೆಗಳು ನಡೆಯುತ್ತಿರುವ ಕಾರಣದಿಂದ ಮತ್ತು ವರ್ಷದಿಂದ ವರ್ಷಕ್ಕೆ ಜನಸಂಖ್ಯೆ ಹೆಚ್ಚಾಗುತ್ತಿರುವ ಕಾರಣ ಅಗತ್ಯ ಮೂಲ ಸೌಕರ್ಯಗಳನ್ನು ಒದಗಿಸುವಲ್ಲಿ ಗ್ರಾಪಂ ಅನುದಾನ ಸಾಲುತ್ತಿಲ್ಲ. ಆದ್ದರಿಂದ, ಪಟ್ಟಣ ಪಂಚಾಯ್ತಿಯಾಗುವ ಎಲ್ಲ ಅರ್ಹತೆ ಹೊಂದಿದ್ದರು ಅಧಿಕಾರಿಗಳು ಸ್ಥಳೀಯ ಸಮಸ್ಯೆ ಸರ್ಕಾರದ ಗಮನಕ್ಕೆ ತರುವಲ್ಲಿ ವಿಫಲರಾಗುತ್ತಿದ್ದಾರೆ ಎಂದು ಗ್ರಾಮಸ್ಥರು ದೂರಿದ್ದಾರೆ.
ಆಡಳಿತಾಧಿಕಾರಿ ನೇಮಕ: ಗ್ರಾಮ ಪಂಚಾಯ್ತಿಗೆ ಆಡಳಿತಾಧಿಕಾರಿ ನೇಮಕವಾಗಿ ಒಂದು ವರ್ಷ ಕಳೆದರೂ, ಗ್ರಾಮದಲ್ಲಿ ಯಾವುದೇ ಅಭಿವೃದ್ಧಿ ಕೆಲಸ ಆಗುತ್ತಿಲ್ಲ, ಪಟ್ಟಣ ಪಂಚಾಯ್ತಿಯಾಗಿ ಮೇಲ್ದರ್ಜೆಗೇರಿ ಸುವಂತೆ ಕೋರ್ಟ್‌ನಲ್ಲಿ ಅರ್ಜಿ ಹಾಕಿ ಸರ್ಕಾರಕ್ಕೆ ದಾಖಲೆ ಕೇಳಿದರೂ, ಸರಿಯಾದ ಸಮಯಕ್ಕೆ ದಾಖಲೆ ನೀಡದೇ ಅಧಿಕಾರಿಗಳು ದುರುದ್ದೇಶದಿಂದ ವಿಳಂಬ ನೀತಿಯನ್ನು ಅನುಸರಿಸುತಿದ್ದಾರೆ. ಮುಂಬರುವ ಜಿಲ್ಲಾ ಮತ್ತು ತಾಲೂಕು ಪಂಚಾಯ್ತಿಯ ಚುನಾವಣೆ ಅಷ್ಟರಲ್ಲಿ ಯಾವುದೇ ಬೆಳವಣಿಗೆಗಳು ಕಾಣದಿದ್ದರೇ, ಆ ಚುನಾವಣೆ ಬಹಿಷ್ಕಾರ ಮಾಡುವುದಾಗಿ ಗ್ರಾಮಸ್ಥರು ಚರ್ಚಿಸುತ್ತಿರುವುದು ಕಂಡು ಬಂದಿದೆ.
ಕಲಾಪದಲ್ಲಿ ಚರ್ಚಿಸುವೆ: ಶಾಸಕತ್ಯಾಮಗೊಂಡ್ಲು ಪಟ್ಟಣವೂ ಕೈಗಾರಿಕಾ ಪ್ರದೇಶದೊಂದಿಗೆ ಹೆಚ್ಚು ಜನಸಂಖ್ಯೆ ಒಳಗೊಂಡಿದ್ದು, ಅಗತ್ಯ ಸೌಲಭ್ಯ ಕಲ್ಪಿಸಲು ಗ್ರಾಮ ಪಂಚಾಯ್ತಿ ಯನ್ನು ಪಟ್ಟಣ ಪಂಚಾಯ್ತಿಯಾಗಿ ಮೇಲ್ದರ್ಜೆಗೇರಿಸಬೇಕೆಂದು ಕಳೆದ ಬಾರಿಯೇ ಜಿಲ್ಲಾಧಿಕಾರಿ ಜತೆಯಲ್ಲಿ ಮಾತನಾಡಿದ್ದೇನೆ. ಈ ವಿಚಾರವಾಗಿ ಕಲಾಪದಲ್ಲಿ ಸರ್ಕಾರದ ಗಮನಕ್ಕೆ ತಂದು ಅದಷ್ಟು ಬೇಗ ಜನರ ಕನಸ್ಸು ನನಸಾಗುವಂತೆ ಪ್ರಯತ್ನ ಮಾಡುತ್ತೇನೆ ಎಂದು ಶಾಸಕ ಡಾ.ಕೆ.ಶ್ರೀನಿವಾಸಮೂರ್ತಿ ಹೇಳಿದರು. ತ್ಯಾಮಗೊಂಡ್ಲು ಗ್ರಾಮ ಪಂಚಾಯ್ತಿಯನ್ನು ಪಟ್ಟಣ ಪಂಚಾಯ್ತಿ ಯಾಗಿ ಮೇಲ್ದರ್ಜೆಗೇ ರಿಸುವ ವಿಚಾರವಾಗಿ ಡೀಸಿ ಆದೇಶದಂತೆ ದಾಖಲೆ ಸಲ್ಲಿಸಿ ಶಿಫಾರಸು ಮಾಡಿದ್ದೇನೆ. ಈಗಾಗಲೇ ಡೀಸಿ ಸರ್ಕಾರಕ್ಕೆ ದಾಖಲೆ ನೀಡಿ ಶಿಫಾರಸು ಮಾಡಿದ್ದಾರೆ.
– ರವಿಕುಮಾರ್, ಬೆಂ.ಗ್ರಾ ಜಿಪಂ ಸಿಇಒ -ಕೊಟ್ರೇಶ್.ಆರ್