Advertisement

ಹೀಗೊಂದು “ಆತ್ಮ’ಚರಿತ್ರೆ

10:24 AM Jul 05, 2019 | Lakshmi GovindaRaj |

ಕನ್ನಡದಲ್ಲಿ “ಆತ್ಮ’ಗಳ ಕುರಿತಾದ ಚಿತ್ರಗಳಿಗೇನು ಕೊರತೆ ಇಲ್ಲ. ಆ ಸಾಲಿಗೆ “ಕಾಣದಂತೆ ಮಾಯವಾದನು’ ಚಿತ್ರ ಸೇರ್ಪಡೆಯಾಗಿದೆ. ಹೌದು, ಇದೊಂದು ಆತ್ಮಕಥನ ಎನ್ನಬಹುದು! ಇಲ್ಲೊಬ್ಬ ವ್ಯಕ್ತಿ ಕೊಲೆಯಾದರೂ, ಆತ್ಮ ಮಾತ್ರ ಸುತ್ತುತ್ತಿರುತ್ತೆ. ಆದರೆ, ಆ ಆತ್ಮದ ವಿಶೇಷತೆ ಏನೆಂದರೆ, ತಾನು ಏನೆಲ್ಲಾ ಕೆಲಸ ಮಾಡಬೇಕೋ ಅದೆಲ್ಲವನ್ನೂ ಮಾಡಿ, ತನ್ನ ಸ್ಥಿತಿಗೆ ಕಾರಣರಾದವರ ಮೇಲೆ ಸೇಡು ತೀರಿಸಿಕೊಳ್ಳುತ್ತದೆ.

Advertisement

ಇಷ್ಟು ಹೇಳಿದ ಮೇಲೆ ಇದೊಂದು ಆತ್ಮ ಕುರಿತಾದ ಚಿತ್ರ ಎನಿಸಬಹುದು. ಆದರೆ, ಇಲ್ಲಿ ಅದರಾಚೆಗಿನ ಕಥೆಯೂ ಇದೆ. ಅದನ್ನು ತಿಳಿದುಕೊಳ್ಳಬೇಕಾದರೆ, ಚಿತ್ರ ನೋಡಬೇಕು. ರಾಜ್‌ ಪತ್ತಿಪಾಟಿ ಕಥೆ, ಚಿತ್ರಕಥೆ ಬರೆದು ಮೊದಲ ಸಲ ನಿರ್ದೇಶನ ಮಾಡಿದ್ದಾರೆ. ಚಿತ್ರ ಶುರುವಾಗಿ ಬೆರಳೆಣಿಕೆ ವರ್ಷಗಳಾಗಿವೆ. ಎಲ್ಲಾ ಕೆಲಸ ಮುಗಿಸಿ, ಇದೀಗ ಬಿಡುಗಡೆ ಹಂತಕ್ಕೆ ಬಂದಿದೆ.

ಇಲ್ಲ ಲವ್‌, ಎಮೋಷನ್ಸ್‌, ನೋವು, ನಲಿವು ಸೇರಿದಂತೆ ಮನರಂಜನೆಯ ಅಂಶಗಳೂ ಇವೆ. ವಿಕಾಸ್‌ ಈ ಚಿತ್ರದಲ್ಲಿ ನಾಯಕರಾಗಿ ಕಾಣಿಸಿಕೊಂಡಿದ್ದಾರೆ. ನಟನೆ ಜೊತೆಗೆ ಸಂಭಾಷಣೆಯಲ್ಲೂ ಸಾಥ್‌ ನೀಡಿದ್ದಾರೆ. ಇನ್ನು, ಚಿತ್ರದ ನಾಯಕಿ ಸಿಂಧುಲೋಕನಾಥ್‌ ಇಲ್ಲಿ ಎನ್‌ಜಿಓ ಒಂದರಲ್ಲಿ ಕೆಲಸ ಮಾಡುವ ಪಾತ್ರ ನಿರ್ವಹಿಸಿದ್ದಾರೆ.

ಅವರದು ನಿರ್ಗತಿಕರಿಗೆ ತಮ್ಮ ಕೈಲಾದಷ್ಟು ಸಹಕಾರ ಮಾಡುವ ಪಾತ್ರದಲ್ಲಿ ಸಾಕಷ್ಟು ಹೊಸತನವೂ ಇದೆಯಂತೆ. ಇಲ್ಲಿ ಅಚ್ಯುತಕುಮಾರ್‌ ಅವರು ಹಿರಿಯ “ಆತ್ಮ’ವಾಗಿ ಕಾಣಿಸಿಕೊಂಡಿದ್ದಾರಂತೆ. ಖಳನಟ ಉದಯ್‌ಕುಮಾರ್‌ ಅವರು ಹೀರೋನನ್ನು ಕೊಲೆ ಮಾಡುವ ಪಾತ್ರ ನಿರ್ವಹಿಸಿದ್ದಾರೆ. ಆ ಸಂದರ್ಭದಲ್ಲೇ ಉದಯ್‌ ನಿಧನರಾದ ಹಿನ್ನೆಲೆಯಲ್ಲಿ ಆ ಪಾತ್ರಕ್ಕೆ “ಭಜರಂಗಿ’ ಲೋಕಿ ನಿರ್ವಹಿಸಿದ್ದಾರೆ.

ಧರ್ಮೇಂದ್ರ ಇಲ್ಲಿ ಹಾಸ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ತಾಯಿಯಾಗಿ ಸೀತಾಕೊಟೆ ಇತರರು ನಟಿಸಿದ್ದಾರೆ. ಗುಮ್ಮಿನೇನಿ ವಿಜಯ್‌ ನಾಲ್ಕು ಹಾಡುಗಳಿಗೆ ಸಂಗೀತ ನೀಡಿದ್ದಾರೆ. ಸುಜ್ಞಾ ನಮೂರ್ತಿ ಛಾಯಾಗ್ರಹಣವಿದೆ. ಸುರೇಶ್‌ ಆರ್ಮುಗಮ್‌ ಸಂಕಲನವಿದೆ.

Advertisement

ವಿನೋದ್‌ ಸಾಹಸವಿದೆ. ಅಂದಹಾಗೆ ಯೋಗರಾಜ ಭಟ್‌ ಚಿತ್ರತಂಡಕ್ಕೆ ಶುಭಹಾರೈಸಿರುವುದು ವಿಶೇಷ. ಚಂದ್ರಶೇಖರ್‌ನಾಯ್ಡು, ಅವರೊಂದಿಗೆ ಸೋಮ್‌ಸಿಂಗ್‌, ಪುಷ್ಪ ಸೋಮ್‌ಸಿಂಗ್‌ ನಿರ್ಮಾಣದಲ್ಲಿ ಸಾಥ್‌ ನೀಡಿದ್ದಾರೆ. ಎಲ್ಲವೂ ಅಂದುಕೊಂಡಂತೆ ನಡೆದರೆ ಮುಂದಿನ ತಿಂಗಳು ಚಿತ್ರ ತೆರೆಗೆ ಬರಲಿದೆ.

Advertisement

Udayavani is now on Telegram. Click here to join our channel and stay updated with the latest news.

Next