Advertisement

ಮಾಸ್ಕ್ ಡೇ ಆಚರಣೆ: ಪಾದಯಾತ್ರೆ ಮೂಲಕ ಅರಿವು ಮೂಡಿಸಿದ ಸಿಎಂ ಯಡಿಯೂರಪ್ಪ

03:44 PM Jun 18, 2020 | keerthan |

ಬೆಂಗಳೂರು: ಕೋವಿಡ್-19 ಸೋಂಕು ಹರಡುವಿಕೆಯನ್ನು ತಡೆಯಲು, ಜನರಿಗೆ ಅರಿವು ಮೂಡಿಸಲು ರಾಜ್ಯ ಸರಕಾರ ಇಂದು ಮಾಸ್ಕ್ ಡೇ ಆಚರಿಸುತ್ತಿದೆ. ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರು, ವಿಧಾನಸೌಧದ ಅಬೇಂಡ್ಕರ್ ಪ್ರತಿಮೆಯಿಂದ ಕೆಆರ್ ಸರ್ಕಲ್ ವರೆಗೆ ಪಾದಯಾತ್ರೆ ನಡೆಸಿದರು.

Advertisement

ಈ ಕುರಿತು ಮಾತನಾಡಿದ ಸಿಎಂ ಬಿಎಸ್ ವೈ, ಸೋಂಕು ತಡೆಯಲು ಮಾಸ್ಕ್ ಡೇ ಆಚರಣೆ ಮಾಡಲಾಗುತ್ತಿದೆ. ಇದರ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ಪಾದಯಾತ್ರೆ ಮಾಡಬೇಕು. ಇದನ್ನು ಪ್ರತಿ ಜಿಲ್ಲೆ, ತಾಲ್ಲೂಕಿನ ಕೇಂದ್ರಗಳಲ್ಲೂ ಆಚರಣೆ ಮಾಡಬೇಕು ಎಂದರು.

ಕೋವಿಡ್ ಸೋಂಕು ಹರಡುವಿಕೆ ನಿಯಂತ್ರಣಕ್ಕೆ ಮಾಸ್ಕ್ ಅವಶ್ಯಕತೆ ತುಂಬಾ ಇದೆ. ಸೋಪಿನಿಂದ ಕೈ ತೊಳೆದುಕೊಳ್ಳುವುದು, ಸ್ಯಾನಿಟೇಜರ್ ಬಳಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಮುಖ್ಯ. ಈ ಸೂಚನೆಗಳನ್ನು ಎಲ್ಲರೂ ಕಡ್ಡಾಯವಾಗಿ ಪಾಲನೆ ಮಾಡಬೇಕು. ಇದಕ್ಕೆ ಸರ್ಕಾರದ ಜೊತೆಗೆ ಸಾರ್ವಜನಿಕರು ಕೈ ಜೋಡಿಸಬೇಕು. ಮಾಸ್ಕ್ ಧರಿಸುವುದು, ತಮ್ಮನ್ನು ತಾವು ರಕ್ಷಣೆ ಮಾಡಿಕೊಳ್ಳುವುದು ಇತರರ ರಕ್ಷಣೆಗೆ ಸಹಕಾರಿಯಾಗಲಿದೆ ಎಂದರು.

ಹೊರರಾಜ್ಯಗಳಿಂದ ಬಂದಿಲ್ಲ ಎಂದಿದ್ದರೆ ನಮ್ಮಲ್ಲಿ ಸೋಂಕು ಪ್ರಮಾಣ ಹೆಚ್ಚಾಗುತ್ತಿರಲಿಲ್ಲ. ಈಗಾಲಾದರೂ ಎಚ್ಚೆತ್ತುಕೊಳ್ಳಬೇಕು. ಸೋಂಕು ತಡೆಗೆ ಸರಕಾರ ಬಹಳಷ್ಟು ಕ್ರಮ ಕೈಗೊಂಡಿದೆ. ಕೇಂದ್ರ ಸರಕಾರವೂ ಅಗತ್ಯ ವೈದ್ಯಕೀಯ ಸಾಮಾಗ್ರಿ ಪೂರೈಕೆ ಮಾಡಿದೆ. ಪೊಲೀಸರು, ವೈದ್ಯರು, ಆಶಾ ಕಾರ್ಯಕರ್ತರು ಹಗಲು ರಾತ್ರಿ ದುಡಿಯುತ್ತಿದ್ದಾರೆ ಎಂದರು.

Advertisement

ಪೊಲೀಸ್ ಪಥ ಸಂಚಲನ ಮೂಲಕ ಮುಖ್ಯಮಂತ್ರಿಗಳಿಗೆ ಗೌರವ ನೀಡಲಾಯಿತು. ನಂತರ ಪಾದಯಾತ್ರೆ ಆರಂಭವಾಯಿತು. ಯಡಿಯೂರಪ್ಪ ಜೊತೆಗೆ ಸಚಿವ ಸೋಮಶೇಖರ್, ಆರ್ ಅಶೋಕ್, ಡಿಸಿಎಂ ಗೋವಿಂದ ಕಾರಜೋಳ, ಸಂಸದ ತೇಜಸ್ವಿ ಸೂರ್ಯ, ಸಿಟಿ ರವಿ, ನಟಿ ರಾಗಿಣಿ, ನಟ ಪುನೀತ್ ರಾಜ್​ಕುಮಾರ್, ಸಂಸದ ಪಿಸಿ ಮೋಹನ್ ಭಾಗಿಯಾಗಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next