Advertisement

Agumbe: ತೋಟದಲ್ಲಿ ಕೆಲಸ ಮಾಡುವ ವೇಳೆ ಸಿಡಿಲು ಬಡಿದು ವ್ಯಕ್ತಿ ಮೃತ್ಯು

05:09 PM Jun 06, 2024 | Team Udayavani |

ತೀರ್ಥಹಳ್ಳಿ: ತಾಲೂಕಿನ ಕೆಲವು ಭಾಗದಲ್ಲಿ ಸಾಧಾರಣ ಮಳೆಯಾಗಿದ್ದು, ಮಳೆ ಜೊತೆಗೆ ಸಿಡಿಲ ಆರ್ಭಟವು ಇದೆ. ಇದೆ ವೇಳೆ ಸಿಡಿಲು ಬಡಿದು ಓರ್ವ ವ್ಯಕ್ತಿ ದುರ್ಮರಣ ಹೊಂದಿರುವ ಘಟನೆ ತಾಲೂಕಿನ ಆಗುಂಬೆ ಬಳಿ ನಡೆದಿದೆ.

Advertisement

ಮೃತ ದುರ್ದೈವಿ ನಾಗೇಂದ್ರ ಬಿನ್ ಸಿನ್ ಪೂಜಾರಿ ಎಂದು ಗುರುತಿಲಾಗಿದ್ದು ಇವರು ಬೀದರಗೋಡು ಗ್ರಾಮದವರು. ಇವರು ಬಾಳೆಹಳ್ಳಿ ಗ್ರಾಮದ ಗುಜುಗೊಳ್ಳಿ ಕೇಶವ ಕಿಣಿ ಬಿನ್ ವಿಠಲ್ ಕಿಣಿ ಇವರ ಅಡಿಕೆ ತೋಟದಲ್ಲಿ ತೋಟದ ಕಳೆ ತೆಗೆಯುವ ಸಂದರ್ಭದಲ್ಲಿ ಸಿಡಿಲು ಬಡಿದು ಸಾವನಪ್ಪಿದ್ದಾರೆ.

ಸ್ಥಳಕ್ಕೆ ಆಗುಂಬೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.

ಇದನ್ನೂ ಓದಿ: Netravathi Peak.. ಚಾರಣ ಪ್ರಿಯರ ಹೊಸ ತಾಣ; ಹೋಗುವ ಮುನ್ನ ಈ ಅಂಶಗಳು ನೆನಪಿರಲಿ

Advertisement

Udayavani is now on Telegram. Click here to join our channel and stay updated with the latest news.

Next